ಬೆಂಗಳೂರು: ಆಂಧ್ರ ಪ್ರದೇಶ ವಿರುದ್ಧದ ಫೈನಲ್ ಪಂದ್ಯದಲ್ಲಿ 30 ರನ್‌ಗಳ ರೋಚಕ ಜಯ ಗಳಿಸಿದ ಕರ್ನಾಟಕ 19 ವರ್ಷ ವಯೋಮಿತಿಯ ವನಿತೆಯರ ತಂಡ ಬಿಸಿಸಿಐ U19 ಟಿ20 ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. 2019-20ರ ನಂತರ ಕರ್ನಾಟಕ ತಂಡಕ್ಕೆ ಇದು ಮೊದಲ ಪ್ರಶಸ್ತಿಯಾಗಿದೆ. Karnataka U19 Women team won the BCCI U19 T20 Trophy.
ಅಮ್ತಾರ್‌ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿತು. ತಂಡದ ಪರ ಮಿತಾಲಿ ವಿನೋದ್ (23), ಬಿ,ಜಿ. ತೇಜಸ್ವಿನಿ (19) ಅತಿ ಹೆಚ್ಚು ರನ್ ಗಳಿಸಿದ ಆಟಗಾರರು.
ಅಲ್ಪ ಮೊತ್ತವನ್ನು ಬೆಂಬತ್ತಿದ ಆಂಧ್ರ ಪ್ರದೇಶ 18 ಓವರ್‌ಗಳಲ್ಲಿ 62 ರನ್ ಗಳಿಸುವಷ್ಟರಲ್ಲಿ ಸರ್ವ ಪತನ ಕಂಡಿತು. ಮಿಥಾಲಿ ವಿನೋದ್ 6 ಕ್ಕೆ 2, ಚಿನ್ಮಯಿ ಶಿವಾನಂದ್ 8ಕ್ಕೆ 2 ಹಾಗೂ ಶ್ರೀನಿಧಿ ಪಿ. ರೈ 8 ಕ್ಕೆ 2 ವಿಕೆಟ್ ಗಳಿಸಿ ಜಯದ ರೂವಾರಿ ಎನಿಸಿದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಘುರಾಮ್ ಭಟ್ ಅವರು ಚಾಂಪಿಯನ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.