Tuesday, December 3, 2024

ಎನ್‌ಎಫ್‌ಎಲ್‌ ಫುಟ್ಬಾಲ್‌ ಉತ್ಪಾದಿಸಲು ವರ್ಷಕ್ಕೆ 35,000 ದನಗಳ ಚರ್ಮ!

ಅಮೆರಿಕದಲ್ಲಿ ನ್ಯಾಷನಲ್‌ ಫುಟ್ಬಾಲ್‌ ಲೀಗ್‌ (ಎನ್‌ಎಫ್‌ಎಲ್‌) ಪ್ರತಿ ವರ್ಷ ನಡೆಯುತ್ತದೆ. ಇದು ರಗ್ಬಿ ಮತ್ತು ಫುಟ್ಬಾಲ್‌ ಸಮ್ಮಿಶ್ರಗೊಂಡ ಕ್ರೀಡೆ. ತಂಡವೊಂದರಲ್ಲಿ 11 ಆಟಗಾರರಿರುತ್ತಾರೆ. ಈ ಕ್ರೀಡೆಗೆ ಬಳಸುವ ಎನ್‌ಎಫ್‌ಎಲ್‌ ಚೆಂಡನ್ನು ಸಂಪೂರ್ಣ ಚರ್ಮದಿಂದ ತಯಾರಿಸುತ್ತಾರೆ. ಎನ್‌ಎಫ್‌ಎಲ್‌ಗೆ ಅಧಿಕೃತವಾಗಿ ಚೆಂಡುಗಳನ್ನು ಉತ್ಪಾದನೆ ಮತ್ತು  ಪೂರೈಕೆ ಮಾಡುವ ಅಮೆರಿಕದ ವಿಲ್ಸನ್‌ ಕಂಪೆನಿಯ ಪ್ರಕಾರ ಒಂದು ವರ್ಷಕ್ಕೆ 7 ಲಕ್ಷ ಚೆಂಡುಗಳ ಅಗತ್ಯವಿದ್ದು ಇವುಗಳನ್ನು ತಯಾರಿಸಲು ಕನಿಷ್ಠ 35,000 ದನಗಳ ಚರ್ಮ ಅಗತ್ಯವಿದೆ ಎಂದು ಎಕೋ ಸ್ಪೋರ್ಟ್ಸ್‌ ವರದಿ ಮಾಡಿದೆ.

Wilson needs 35,000 Cowhides for every year to produce 7 lakh footballs.

ವರದಿಯ ಪ್ರಕಾರ ಒಂದು ದನದ ಚರ್ಮದಿಂದ 20 ಫುಟ್ಬಾಲ್‌ಗಳನ್ನು ತಯಾರಿಸಬಹುದು, ಈ ಪ್ರಕಾರ ಒಂದು ವರ್ಷಕ್ಕೆ 35,000 ದನಗಳ ಚರ್ಚ ಅಗತ್ಯವಿರುತ್ತದೆ. ಅಂದರೆ 7 ಲಕ್ಷ ಫುಟ್ಬಾಲ್‌ ತಯಾರಾಗುತ್ತದೆ. ಇದಕ್ಕೆ ವಯಸ್ಸಾದ ದನಗಳನ್ನು ಬಲಿಕೊಡಲಾಗುತ್ತದೆ. ಮಾಂಸಕ್ಕಾಗಿ ಕೊಂದ ದನಗಳ ಚರ್ಮವನ್ನು ಫುಟ್ಬಾಲ್‌ ತಯಾರಿಸಲು ಬಳಸಲಾಗುತ್ತದೆ. ದನಗಳ ಚರ್ಮ ಬೇಕಾಗುತ್ತದೆ.

1941 ರಿಂದ ವಿಲ್ಸನ್‌ ಕಂಪೆನಿ ಎನ್‌ಎಫ್‌ಎಲ್‌ಗೆ ಅಧಿಕೃತ ಪುಟ್ಬಾಲ್‌ ಪೂರೈಕೆ ಮಾಡುವ ಕಂಪೆನಿಯಾಗಿದೆ. ಅಮೆರಿಕದ ಒಹಿಯೊದಲ್ಲಿರುವ ಅಡಾ ಎಂಬ ಚಿಕ್ಕ ಪಟ್ಟಣದಲ್ಲಿ ಈ ವಿಲ್ಸನ್‌ ಫ್ಯಾಕ್ಟರಿ ಇದೆ. ದಿನಕ್ಕೆ 4000 ಫುಟ್ಬಾಲ್‌ ತಯಾರಿಸುವ ಸಾಮರ್ಥ್ಯದ ತಂತ್ರಜ್ಞಾನ ಹಾಗೂ ಮಾನವ ಸಂಪನ್ಮೂಲ ಇಲ್ಲಿದೆ. ಪ್ರತಿಯೊಂದು ಎನ್‌ಎಫ್‌ಎಲ್‌ ತಂಡವು 780 ಚೆಂಡಗಳನ್ನು ಖರೀದಿಸುತ್ತದೆ. 32 ತಂಡಗಳಿದ್ದು 24,960 ಚೆಂಡುಗಳನ್ನು ತಂಡಗಳೇ ಖರೀದಿಸುತ್ತವೆ. ಇನ್ನು ಪಂದ್ಯಗಳು ನಡೆಯುವಾಗ ಅಧಿಕೃತ ಚೆಂಡುಗಳ ಉಪಯೋಗವಾಗುತ್ತದೆ. ನ್ಯಾಷನಲ್‌ ಕಾಲೇಜ್‌ ಅಥ್ಲೆಟಿಕ್‌ ಅಸೋಸಿಯೇಷನ್‌ (NCAA) ಅಮೆರಿಕದಾದ್ಯಂತ ಇರುವ ಹೈಸ್ಕೂಲ್‌ ಮತ್ತು ಕಾಲೇಜುಗಳಿಗೆ ಲಕ್ಷಾಂತರ ಫುಟ್ಬಲ್‌ ಖರೀದಿಸುತ್ತದೆ.

ನ್ಯೂಜೆರ್ಸಿಯ ರುಟ್ಗರ್ಸ್‌ ವಿಶ್ವವಿದ್ಯಾನಿಲಯವು 1869 ನವೆಂಬರ್‌ 6 ರಂದು ಅಮೆರಿಕನ್‌ ಫುಟ್ಬಾಲ್‌ನ ಮೊದಲ ವಿನ್ಯಾಸ ಮಾಡಿತು. ಇದು ಫುಟ್ಬಾಲ್‌ ರೀತಿಯಲ್ಲಿದ್ದ ಕಾರಣ ಎಸೆಯಲು ಕಷ್ಟವಾಗುತ್ತಿತ್ತು. ಈ ಕಾರಣಕ್ಕಾಗಿಯೇ 1874ರಲ್ಲಿ ರಗ್ಬಿ ಮಾದರಿಯ ಚೆಂಡನ್ನು ಬಳಸಲಾಯಿತ. ಇದು ಕೂಡ ಹಿಡಿಯಲು ಕಷ್ಟವಾದ ಕಾರಣ 1912ರಲ್ಲಿ ಮತ್ತೆ ಹೊಸ ವಿನ್ಯಾಸದ ಅಮೆರಿಕನ್‌ ಫುಟ್ಬಾಲ್‌ ಅನ್ವೇಷಣೆ ಮಾಡಲಾಯಿತು. ಎಲ್ಲದಕ್ಕೂ ಬಳಸುತ್ತಿದ್ದುದು ದನದ ಚರ್ಮವನ್ನೇ. ವಿಲ್ಸನ್‌ ಕಂಪೆನಿಗೆ ಗುತ್ತಿಗೆ ನೀಡಿದಾಗಿನಿಂದ ಈಗಿರುವ ಚೆಂಡನ್ನೇ ಬಳಸಲಾಗುತ್ತಿದೆ. 1950ರ ಸುಮಾರಿಗೆ ರಬ್ಬರ್‌ ಚೆಂಡಿನ ಪ್ರಯತ್ನ ನಡೆದರೂ ಹೆಚ್ಚು ಪ್ರಯೋಜನವಾಗಲಿಲ್ಲ. ದನದ ಚರ್ಮದಲ್ಲೇ ಉತ್ಪಾದನೆ ಮುಂದುವರಿಯಿತು. ಚರ್ಮದಲ್ಲಿ ಮಾಡಿದ ಚೆಂಡನ್ನು ಎನ್‌ಎಫ್‌ಎಲ್‌ ಫುಟ್ಬಾಲ್‌ಗೆ ಮಾತ್ರ ಬಳಸುತ್ತಿಲ್ಲ, ಬದಲಾಗಿ ಫುಟ್ಬಾಲ್‌, ಕ್ರಿಕೆಟ್‌, ವಾಲಿಬಾಲ್‌ ಹೀಗೆ ಹಲವು ಚೆಂಡುಗಳ ಉತ್ಪಾದನೆಯಲ್ಲಿ ಪ್ರಾಣಿಗಳ ಅದರಲ್ಲೂ ಹಸುವಿನ ಚರ್ಮವನ್ನು ಬಳಸುತ್ತಾರೆ.  ಬಾಕ್ಸಿಂಗ್‌ ಗ್ಲೌಸ್‌, ಫುಟ್ಬಾಲ್‌ ಶೂ, ಫುಟ್ಬಾಲ್‌ ಗ್ಲೌಸ್‌ ಮೊದಲಾದ ಉತ್ಪನ್ನಗಳಿಗೂ ದನದ ಚರ್ಮ ಅಗತ್ಯವಾಗಿದೆ.

ಇತ್ತೀಚಿವ ವರ್ಷಗಳಲ್ಲಿ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲಾಗುತ್ತಿದೆ. ಆದರೆ ಎನ್‌ಎಫ್‌ಎಲ್‌ ಈಗಲೂ ತನ್ನ ಸಾಂಪ್ರದಾಯಿಕ ಉತ್ಪನ್ನವನ್ನು ಬಳಸುತ್ತಿದೆ. ಇದು ಎನ್‌ಎಫ್‌ಎಲ್‌ ಫುಟ್ಬಾಲ್‌ನ ಕತೆಯಾದರೆ ಇನ್ನು ಸಾಮಾನ್ಯ ಫುಟ್ಬಾಲ್‌ ಚೆಂಡಿನ ಉತ್ಪಾದನೆ ಕತೆಯೇ ಬೇರೆ. ಪಾಕಿಸ್ತಾನದ ಸಿಯಾಲ್‌ಕೊಟ್‌ನಲ್ಲಿ ಜಗತ್ತಿನ ಒಟ್ಟು ಉತ್ಪಾನೆಯ 70% ರಷ್ಟು ಫುಟ್ಬಾಲ್‌ ಉತ್ಪನ್ನವಾಗುತ್ತದೆ. ಇಲ್ಲಿಯೂ ದನದ ಚರ್ಮದಿಂದ ಸಿದ್ಧಪಡಿಸಿದ ಪಟ್ಟಿಗಳನ್ನು ಬಳಸಿ ಉತ್ಪಾದಿಸಲಾಗುತ್ತದೆ. ಇಲ್ಲಿಯ ಫುಟ್ಬಾಲ್‌ಗೆ ಫಿಫಾ ಮಾನ್ಯತೆಯೂ ಸಿಕ್ಕಿದೆ. 2022ರ ಫಿಫಾ ವಿಶ್ವಕಪ್‌ನಲ್ಲಿ ಬಳಸಲಾದದ ಚೆಂಡು ಸಿಯಾಲ್‌ಕೊಟ್‌ನಲ್ಲೇ ತಯಾರಿಸಿದ್ದು. ಅಡಿಡಾಸ್‌ ಬ್ರಾಂಡ್‌ನ ಫುಟ್ಬಾಲ್‌ಗೆ ಇಲ್ಲಿಂದಲೇ ಪೂರೈಕೆ ಆಗುತ್ತಿದೆ. ಈಗ ಸಿಂಥಟಿಕ್‌ ಲೆದರ್‌ನ ಫುಟ್ಬಾಲ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಆದರೂ ಚರ್ಮದಿಂದ ತಯಾರಿಸಿದ ಫುಟ್ಬಾಲ್ ಹೆಚ್ಚು ಬೇಡಿಕೆಯಲ್ಲಿದೆ.

Related Articles