ಹೈದರಾಬಾದ್: ಇಲ್ಲಿನ ಮಂಗಳಗಿರಿಯಲ್ಲಿರುವ ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಒಂದು ಅಪೂರ್ವ ಕ್ರಿಕೆಟ್ ಪಂದ್ಯ ನಡೆಯುತ್ತಿದೆ. ಭಾರತ ಕ್ರಿಕೆಟ್ ತಂಡದ ದಿಗ್ಗಜರಾದ ರಾಹುಲ್ ದ್ರಾವಿಡ್ ಅವರ ಮಗ ಅನ್ವಯ್ ದ್ರಾವಿಡ್ ಹಾಗೂ ವೀರೇಂದ್ರ ಸೆಹ್ವಾಗ್ ಅವರ ಆರ್ಯವೀರ ಸೆಹ್ವಾಗ್ 16 ವರ್ಷ ವಯೋಮಿತಿಯ ವಿಜಯ ಮರ್ಚೆಂಟ್ ಟ್ರೋಫಿಯಲ್ಲಿ ಮುಖಾಮುಖಿಯಾಗಿದ್ದಾರೆ. Aryavir Sehwag and Anvay Dravid facing each other in Vijaya Marchant Trophy.
ಕರ್ನಾಟಕ ಹಾಗೂ ದಿಲ್ಲಿ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ. ರಾಹುಲ್ ದ್ರಾವಿಡ್ ಅವರ ಮಗ ಅನ್ವಯ್ ಕರ್ನಾಟಕ ತಂಡದ ನಾಯಕ. ವೀರೇಂದ್ರ ಸೆಹ್ವಾಗ್ ಅವರ ಮಗ ಆರ್ಯವೀರ ತಂದೆಯಂತೆ ಸ್ಪೋಟಕ ಆಟಗಾರ. ಕರ್ನಾಟಕದ ನಾಯಕ ಅನ್ವಯ್ ಖಾತೆ ತೆರೆಯದೆ ಪೆವಿಲಿಯನ್ ಸೇರಿದರೆ ಆರ್ಯವೀರ ತಂದೆ ಯಂತೆ ಅಬ್ಬರದ ಆಟ ಪ್ರದರ್ಶಿಸಿ 8 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 54 ರನ್ ಗಳಿಸಿದರು. ಕರ್ನಾಟಕ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 144 ರನ್ಗೆ ಆಲೌಟ್ ಆಯಿತು. ದೆಹಲಿ 304 ರನ್ ಗಳಿಸಿ ಮೇಲುಗೈ ಸಾಧಿಸಿತು.
ಕರ್ನಾಟಕದ ದ್ವಿತೀಯ ಇನ್ನಿಂಗ್ಸ್ನಲ್ಲೂ ಅನ್ವಯ್ ಕೇವಲ 11 ರನ್ ಗಳಿಸಿ ಪೆವಿಲಿಯನ್ ಸೇರಿದರು. ವಿಶೇಷವೆಂದರೆ ಎರಡೂ ಇನ್ನಿಂಗ್ಸ್ನಲ್ಲಿಯೂ ಅನ್ವಯ್ ದೆಹಲಿಯ ಯಶಸ್ವಿ ಬೌಲರ್ ಆಯುಷ್ ಲಾಕ್ರಾಗೆ ವಿಕೆಟ್ ಒಪ್ಪಿಸಿದ್ದಾರೆ. ಕರ್ನಾಟಕ ದ್ವಿತೀಯ ಇನ್ನಿಂಗ್ಸ್ನಲ್ಲಿ 4 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿದೆ. ಅಮೋಘ್ ಶೆಟ್ಟಿ ಅಜೇಯ 64 ಹಾಗೂ ಆರ್ಯ ಜೆ. ಗೌಡ ಅಜೇಯ 21 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ.
ವೀರೇಂದ್ರ ಸೆಹ್ವಾಗ್ ಅವರಂತೆ ಇನ್ನಿಂಗ್ಸ್ ಆರಂಭಿಸುವ ಆರ್ಯವೀರ ಸೆಹ್ವಾಗ್ ಅವರಲ್ಲಿ ಅಬ್ಬರದ ಆಟ ಕಂಡು ಬಂದಿದ್ದು ವಿಶೇಷ.