ಪರ್ಥ್: ಆಸ್ಟ್ರೇಲಿಯಾದ ಸ್ಪಿನ್ ಬೌಲರ್ ನಥಾನ್ ಲಿಯಾನ್ 501 ವಿಕೆಟ್ ಪೂರ್ಣಗೊಳಿಸಿದರು. ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿ ಒಟ್ಟು 5 ವಿಕೆಟ್ ಗಳಿಕೆಯ ಸಾಧನೆ ಮಾಡುವ ಮೂಲಕ ಲಿಯಾನ್ ಈ ಸಾಧನೆ ಮಾಡಿದ್ದಾರೆ. ಆದರೆ 31,614 ಎಸೆತಗಳನ್ನು ಎಸೆದರೂ ಅವರು ಒಂದೇ ಒಂದು ಲೈನ್ ನೋ ಬಾಲ್ ಎಸೆದಿಲ್ಲ ಎಂಬುದು ಅಚ್ಚರಿಯ ಸಂಗತಿ. Nathan Lyon first bowler to take 501 wickets in test cricket without overstepping.
2010ರವೆರೆಗೂ ಅಡಿಲೇಡ್‌ನಲ್ಲಿ ಗ್ರೌಂಡ್ ಸಿಬ್ಬಂದಿಯಾಗಿದ್ದ ನಥಾನ್ ಲಿಯಾನ್ ಅವರ ಬದುಕಿನ ಹಾದಿ ಕ್ರಿಕೆಟ್ ಜಗತ್ತಿಗೇ ಸ್ಫೂರ್ತಿಯಾದುದು. ನ್ಯೂ ಸೌಥ್ ವೇಲ್ಸ್‌ನ ಯಂಗ್‌ನಲ್ಲಿ ಜನಿಸಿದರೂ ನಥಾನ್ ಲಿಯಾನ್ ಕ್ರಿಕೆಟ್‌ಗಾಗಿ ಕ್ಯಾನ್ಬೆರಾಕ್ಕೆ ಬಂದು ನೆಲೆಸಿದರು. ಅಲ್ಲಿನ ಕೆಲವು ಕ್ಲಬ್‌ಗಳ ಪರ ಆಡುತ್ತ ಕ್ಯಾನ್ಬೆರಾ ವಿಶ್ವವಿದ್ಯಾನಿಲಯದ ಪರವೂ ಆಡಿದರು. 2010 ರಲ್ಲಿ ಲಿಯಾನ್ ಅಡಿಲೇಡ್‌ಗೆ ಬಂದು ಅಲ್ಲಿನ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಅಂಗಣದಲ್ಲಿ ಪಿಚ್ ಸಹಾಯಕರಾಗಿ ಕೆಲಸಕ್ಕೆ ಸೇರಿಕೊಂಡರು. ದಕ್ಷಿಣ ಆಸ್ಟ್ರೇಲಿಯಾದ ಟಿ20 ಕೋಚ್ ಡರೇನ್ ಬೆರ್ರಿ ಅವರು ಲಿಯಾನ್ ಅವರ ಬೌಲಿಂಗ್ ಸಾಮರ್ಥ್ಯವನ್ನು ಗುರುತಿಸಿ ಬಿಗ್‌ಬ್ಯಾಷ್‌ನಲ್ಲಿ ಸದರ್ನ್ ರೆಡ್‌ಬ್ಯಾಕ್ಸ್ ತಂಡಕ್ಕೆ ಸೇರಿಸಿಕೊಂಡರು. ಅಲ್ಲಿಂದ ನಥಾನ್ ಲಿಯಾನ್ ಅವರ ಬದುಕಿನ ಗತಿಯೇ ಬದಲಾಯಿತು. ಆ ವರ್ಷ ರೆಡ್‌ಬ್ಯಾಕ್ಸ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಲಿಯಾನ್ ಅತಿ ಹೆಚ್ಚು ವಿಕೆಟ್ ಗಳಿಕೆಯ ಸಾಧನೆ ಮಾಡಿದರು.
2011ರಲ್ಲಿ ಆಸ್ಟ್ರೇಲಿಯಾ ಟೆಸ್ಟ್ ತಂಡಕ್ಕೆ ಆಯ್ಕೆ. ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ಮೊದಲ ಓವರ್‌ನ ಮೊದಲ ಎಸೆತದಲ್ಲೇ ವಿಕೆಟ್. ಕುಮಾರ ಸಂಗಕ್ಕಾರ ಲಿಯಾನ್‌ಗೆ ಬಲಿಯಾದ ಮೊದಲ ಕ್ರಿಕೆಟಿಗ. ಟೆಟ್ಸ್ ಪದಾರ್ಪಣೆ ಪಂದ್ಯದ ಮೊದಲ ಓವರ್‌ನ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಆಸ್ಟ್ರೇಲಿಯಾದ ಮೂರನೇ ಹಾಗೂ ಜಗತ್ತಿನ ಏಳನೇ ಬೌಲರ್ ಎನಿಸಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 501 ವಿಕೆಟ್ ಗಳಿಸಿರುವ ಲಿಯಾನ್ ಅತಿ ಹೆಚ್ಚು ವಿಕೆಟ್ ಗಳಿಕೆಯಲ್ಲಿ ಜಗತ್ತಿನಲ್ಲೇ ಎಂಟನೇ ಸ್ಥಾನ ಗಳಿಸಿರುತ್ತಾರೆ. ಅತಿ ಕಡಿಮೆ ಅವಧಿಯಲ್ಲೇ ಅತಿ ಹೆಚ್ಚು ವಿಕೆಟ್ ಗಳಿಕೆಯ ಸಾಧನೆ ಮಾಡಿರುವ ಲಿಯಾನ್ ಟೆಸ್ಟ್ ಕ್ರಿಕೆಟ್‌ನಲ್ಲಿ ನೋಬಾಲ್ ಒಂದೂ ನೊಬಾಲ್ ಎಸೆದಿಲ್ಲ ಎಂಬುದು ಗಮನಾರ್ಹ. 205 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಲಿಯಾನ್ 741 ವಿಕೆಟ್ ಗಳಿಸಿರುತ್ತಾರೆ. 29 ಏಕದಿನ ಪಂದ್ಯಗಳಲ್ಲಿ 29 ವಿಕೆಟ್ ಗಳಿಸಿರುತ್ತಾರೆ.