Thursday, November 21, 2024

ನದಿಯಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ ಉದ್ಘಾಟನೆ!

ಒಲಿಂಪಿಕ್ಸ್‌ ಇತಿಹಾದಲ್ಲೇ ಮೊದಲ ಬಾರಿಗೆ ಉದ್ಘಾಟನಾ ಸಮಾರಂಭ ಕ್ರೀಡಾಂಗಣದಲ್ಲಿ ನಡೆಯುವುದಿಲ್ಲ. ವಿಶೇಷ ಹಾಗೂ ವಿನೂತನ ರೀತಿಯಲ್ಲಿ ಸೇನ್‌ ನದಿಯಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ 2024ರ ಉದ್ಘಾಟನಾ ಸಮಾರಂಭ ನಡೆಯಲಿದೆ. Paris Olympics opening ceremony will be held in Seine River.

1924ರಲ್ಲಿ ಎರಡನೇ ಬಾರಿಗೆ ಒಲಿಂಪಿಕ್ಸ್‌ ಆತಿಥ್ಯವಹಿಸಿ 100ನೇ ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ಪ್ಯಾರಿಸ್‌ ಕ್ರೀಡಾ ಜಗತ್ತಿಗೆ ಹೊಸದನ್ನು ನೀಡಲು ಯತ್ನಿಸುತ್ತಿದೆ. ಈ ಬಾರಿಯ ಒಲಿಂಪಿಕ್ಸ್‌ ಕ್ರೀಡಾಭಿಮಾನಿಗಳ ಮನದಂಗಣದಲ್ಲಿ ಸದಾ ಹಸಿರಾಗಿರುವಂತೆ ಮಾಡಲು ಯತ್ನಿಸಿದೆ. 10,500ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿರುವ ಜಾಗತಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಸುಮಾರು 6 ಕಿಮೀ ದೂರದ ವರೆಗೆ ಬೋಟಿನಲ್ಲಿ ಮೆರವಣಿಗೆ ನಡೆಯಲಿದೆ. ಪ್ರತಿಯೊಂದು ರಾಷ್ಟ್ರಕ್ಕೂ ಪ್ರತ್ಯೇಕವಾದ ಬೋಟ್‌ ಇದ್ದು, ಅದರಲ್ಲಿ ಆ ದೇಶದ ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಯಾನ ಮಾಡಲಿದ್ದಾರೆ. ನಂತರ ಟ್ರೊಕಾಡೆರೊದಲ್ಲಿ ಒಲಿಂಪಿಕ್ಸ್‌ ಉದ್ಘಾಟನೆಯ ಇತರ ಕಾರ್ಯಕ್ರಮಗಳು ನಡೆಯಲಿದೆ.

ಇದೇ ಮೊದಲ ಬಾರಿಗೆ ಸಾರ್ವಜನಿಕರು ಟಿಕೆಟ್‌ ಇಲ್ಲದೆ ಉಚಿತವಾಗಿ ಉದ್ಘಾಟನಾ ಸಮಾರಂಭವನ್ನು ವೀಕ್ಷಿಸಬಹುದು. ಆದರೆ ಆಸ್ಟರ್‌ ಸೇತುವೆಯಿಂದ ಲೆನಾ ಸೇತುವೆ ಮೇಲೆ ನಿಂತು ವೀಕ್ಷಿಸುವವರು ಟಿಕೆಟ್‌ ಖರೀದಿಸಿ ನೋಡಬೇಕಾಗುತ್ತದೆ.

Related Articles