Friday, October 18, 2024

ಆಸ್ಟ್ರೇಲಿಯಾದಲ್ಲಿ ಆಲ್‌ ವೆದರ್‌ ಕ್ರಿಕೆಟ್‌ ಸ್ಟೇಡಿಯಂ!

ಹೊಸದಿಲ್ಲಿ: ಮಳೆಗಾಲದಲ್ಲಿ ಕ್ರಿಕೆಟ್‌ ಆಡಲು ಬಹಳ ಕಷ್ಟ. ಪಂದ್ಯಗಳು ರದ್ದಾಗುವುದು, ಗೆಲ್ಲುವ ತಂಡ ಡಕ್‌ವರ್ಥ್‌ ಲೂಯಿಸ್‌ ನಿಯದಿಂದ ಸೋಲುವುದು ಇದೆಲ್ಲ ನಡೆಯುತ್ತಿರುತ್ತದೆ. ಇದನ್ನು ಗಮನಿಸಿದ ಕ್ರಿಕೆಟ್‌ ಆಸ್ಟ್ರೇಲಿಯಾ ಎಲ್ಲ ಹವಾಮಾನಕ್ಕೂ ತಕ್ಕುದಾದ ಜಗತ್ತಿನ ಮೊದಲ “ಆಲ್‌ ವೆದರ್‌ ಕ್ರಿಕೆಟ್‌ ಅಂಗಣ”ವನ್ನು All weather cricket Stadium ನಿರ್ಮಿಸಲು ಮುಂದಾಗಿದೆ. ಆಸ್ಟ್ರೇಲಿಯಾದ ತಾಸ್ಮಾನಿಯಾದಲ್ಲಿ ಈ ಕ್ರೀಡಾಂಗಣ ಸಜ್ಜಾಗಲಿದೆ. Australia to build all weather cricket stadium in Tasmania.

ಹೊಬಾರ್ಟ್‌ ಸಮೀಪದಲ್ಲಿ ನಿರ್ಮಾಣವಾಗಲಿರುವ ಈ ಕ್ರೀಡಾಂಗಣದಲ್ಲಿ 23,000 ಆಸನದ ವ್ಯವಸ್ಥೆ ಇರುತ್ತದೆ. 2028ರ ಸುಮಾರಿಗೆ ಇದು ಪೂರ್ಣಗೊಳ್ಳಲಿದೆ. ಹೋಬರ್ಟ್‌ ರೈಲ್‌ ಯಾರ್ಡ್‌ನಿಂದ ಸ್ಫೂರ್ತಿ ಪಡೆದು ಈ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದೆ. ಸೂರ್ಯನ ನೈಸರ್ಗಿಕ ಕಿರಣಗಳು ಸಹಜವಾಗಿ ಅಂಗಣದ ಒಳಕ್ಕೆ ಬರುವಂತೆ ಪಾರದರ್ಶಕವಾದ ಮತ್ತು ಸ್ವಯಂ ಚಾಲಿತ ಛಾವಣಿಯನ್ನು ಈ ಕ್ರೀಡಾಂಗಣ ಹೊಂದಿರುತ್ತದೆ. ಮಳೆ ಬಂದ ಕೂಡಲೇ ಪಿಚ್‌ ಮುಚ್ಚಲು ಪ್ಲಾಸ್ಟಿಕ್‌ ಹಾಸನ್ನು ಎಳೆದುಕೊಂಡು ಓಡಿ ಬರುವ ಬಲದು ಬಟನ್‌ ಒತ್ತಿದರೆ ಕ್ಷಣಮಾತ್ರದಲ್ಲಿ ಛಾವಣಿ ಮುಚ್ಚಲ್ಪಡುವ ತಂತ್ರಜ್ಞಾನ ಇಲ್ಲಿ ಅಳವಡಿಸಲಾಗಿದೆ. ಇಲ್ಲಿ ಹುಲ್ಲುಗಳು ಬೆಳೆಯಲು ಅನುಕೂಲವಾಗುಂತೆ ಛಾವಣಿಯಲ್ಲಿ ವಾತಾಯನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಿಕ್ಸರ್‌ ಹೊಡೆದಾಗ ಛಾವಣಿಗೆ ತಾಗುವುದಿಲ್ಲವೇ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಆದರೆ ಇದು ಆಟಕ್ಕೆ ಅಡ್ಡಿಯಾಗದ ರೀತಿಯಲ್ಲಿ ನಿರ್ಮಾಣವಾಗಲಿದೆ ಎಂದು ಮೂಲಗಳು ತಿಳಿಸಿವೆ.

Related Articles