Friday, November 22, 2024

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ 24 ಯೋಧರ ಸ್ಪರ್ಧೆ

ಹೊಸದಿಲ್ಲಿ: ಜುಲೈ 26ರಿಂದ ಆಗಸ್ಟ್‌ 11 ರವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಇಬ್ಬರು ಮಹಿಳಾ ಯೋಧರೂ ಸೇರಿದಂತೆ ಒಟ್ಟು 24 ಯೋಧರು ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರ ರಕ್ಷಣಾ ಇಲಾಖೆ ತಿಳಿಸಿದೆ. 24 Service personals are representing India at Paris Olympics.

ಒಲಿಂಪಿಕ್ಸ್‌ ಸ್ವರ್ಣ ವಿಜೇತ ನೀರಜ್‌ ಚೋಪ್ರಾ ಸೇರಿದಂತೆ ಭಾರತ ಸುರಕ್ಷಾ ಪಡೆಯ 24 ಯೋಧರು ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ 117 ಕ್ರೀಡಾಪಟುಗಳ ತಂಡದಲ್ಲಿ ಸೇರಿದ್ದಾರೆಂಬುದು ಹೆಮ್ಮೆಯ ಸಂಗತಿ. 24 ಸೇನಾ ಸಿಬ್ಬಂದಿಗಳಲ್ಲಿ ಇಬ್ಬರು ಮಹಿಳಾ ಯೋಧರೂ ಸೇರಿದ್ದಾರೆ.

2022ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಬಾಕ್ಸರ್‌ ಹವಿಲ್ದಾರ್‌ ಜೆಸ್ಮೈನ್‌ ಲಾಂಬೋರಿಯಾ 2023ರ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ವಿಜೇತೆ ಸಿಪಿಒ ರೀತಿಕಾ ಹೂಡಾ ಪ್ಯಾರಿಸ್‌ನಲ್ಲಿ ಸ್ಪರ್ಧಿಸುತ್ತಿರುವ ಮಹಿಳಾ ಯೋಧರು.

ಸುಬೇದಾರ್‌ ಅಮಿತ್‌ ಪಂಗಾಲ್‌ (ಬಾಕ್ಸಿಂಗ್‌), ಸಿಪಿಒ ತೇಜಿಂದರ್‌ ಪಾಲ್‌ ಸಿಂಗ್‌ ತೂರ್‌ (ಶಾಟ್‌ ಪಟ್‌), ಸುಬೇದಾರ್‌ ಅವಿನಾಶ್‌ ಸಬಲೆ (3000m ಸ್ಟೀಪಲ್‌ ಚೇಸ್)‌, ಸಿಪಿಒ ಮೊಹಮ್ಮದ್‌ ಅನಾಸ್‌, ಪಿಒ (ಜಿಡಬ್ಲ್ಯು) ಮೊಹಮ್ಮದ್‌ ಅಜ್ಮಲ್‌, ಸುಬೇದಾರ್‌ ಸಂತೋಷ್‌ ಕುಮಾರ್‌ ಮತ್ತು ಮಿಜೋ ಚಾಕೋ ಕುರಿಯನ್‌ (ರಿಲೇ ತಂಡ), ಜೆಡಬ್ಲ್ಯುಒ ಅಬ್ದುಲ್ಲಾ ಅಬೂಬಕರ್‌ (ಟ್ರಿಪಲ್‌ ಜಂಪ್‌), ಎನ್‌ಬಿ ಸುಬೇದಾರ್‌ ಸಂದೀಪ್‌ ಸಿಂಗ್‌ (ಶೂಟಿಂಗ್‌), ಸುಬೇದಾರ್‌ ತರುಣ್‌ ದೀಪ್‌ ರಾಯ್‌  ಮತ್ತು ಸುಬೇದರ್‌ ಧೀರಜ್‌ ಬೊಮ್ಮದೇವರ (ಆರ್ಚರಿ), ಭಾರತ ತಂಡದಲ್ಲಿರುವ ಯೋಧರು.

Related Articles