Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕಾರ್ಗಿಲ್‌ ಯೋಧ ಜಾಖರ್‌ ಗರಡಿಯಲ್ಲಿ ಪಳಗಿದ ಬಾಕರ್‌

ಪ್ಯಾರಿಸ್‌: ಭಾರತ ಶೂಟರ್‌ ಮನು ಬಾಕರ್‌ ಪ್ಯಾರಿಸ್‌ ಒಲಿಂಪಿಕ್ಸ್‌ನ 10ಮೀ. ಏರ್‌ ಪಿಸ್ತೂಲ್‌ನಲ್ಲಿ ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮನು ಬಾಕರ್‌ ಅವರಿಗೆ ಆರಂಭದಲ್ಲೇ ಶೂಟಿಂಗ್‌ ಕಲಿಸಿದ್ದು ಕಾರ್ಗಿಲ್‌ ಯೋಧ, ಭಾರತ ಸೇನೆಯ ಶಾರ್ಪ್‌ ಶೂಟರ್‌ ಅನಿಲ್‌ ಜಾಖರ್‌. Kargil war hero sharp shooter Anil Jakhar gave training to Manu Bhaker.

ಪಾಕಿಸ್ತಾನ ವಿರುದ್ಧದ ಕಾರ್ಗಿಲ್‌ ಯುದ್ಧದಲ್ಲಿ ಭಾಗಿಯಾಗಿದ್ದ ಅನಿಲ್‌, ಕಾರ್ಗಿಲ್‌ ಯುದ್ಧದ ನಂತರ ನಿವೃತ್ತಿಯಾಗಿ ಹರಿಯಾಣದಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಶೂಟಿಂಗ್‌ ಕಲಿಸಲು ಅಕಾಡೆಮಿಯನ್ನು ಸ್ಥಾಪಿಸಿದ್ದರು. ಆ ಅಕಾಡೆಮಿಯಲ್ಲಿ ಸೇರಿಕೊಂಡ ಮನುಬಾಕರ್‌ಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಯಶಸ್ಸು ಸಿಗಲಿಲ್ಲ, ಆದರೆ ಈ ಬಾರಿ ಬೆಳ್ಳಿ ಸಿಗುವ ಸಾಧ್ಯತೆ ಇತ್ತು, ಆದರೆ ಕಂಚಿನ ಪದಕಕ್ಕೆ ಇಟ್ಟ ಗುರಿ ತಪ್ಪಲಿಲ್ಲ. ಮನು ಬಾಕರ್‌ ಶೂಟಿಂಗ್‌ ಕ್ರೀಡೆಗೆ ಬರಲು ಮುಖ್ಯ ಕಾರಣ ವಾಲಿಬಾಲ್‌ ಆಡುವಾಗ ಕಣ್ಣಿಗೆ ಗಾಯವಾದದ್ದು. ಬಾಕ್ಸಿಂಗ್‌, ಸ್ಕೇಟಿಂಗ್‌, ವಾಲಿಬಾಲ್‌ ಹಾಗೂ ಸ್ಥಳೀಯ ಮಾರ್ಷಲ್‌ ಆರ್ಟ್‌ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಮನು ಬಾಕರ್‌, ಒಮ್ಮೆ ವಾಲಿಬಾಲ್‌ ಆಡುವಾಗ ಕಣ್ಣಿಗೆ ಗಾಯವಾದ ಕಾರಣ ಮತ್ತೆ ಆ ಕ್ರೀಡೆಯ ಕಡೆಗೆ ಮುಖ ಮಾಡದೆ, ಕೇವಲ ಶೂಟಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಮರ್ಚೆಂಟ್‌ ನೇವಿಯಲ್ಲಿ ಎಂಜಿನಿಯರ್‌ ಆಗಿರುವ ರಾಮಕಿಶನ್‌ ಬಾಕರ್‌ ಹಾಗೂ ಶಿಕ್ಷಕಿ ಸುಮೇಧಾ ಅವರ ಪುತ್ರಿಯಾಗಿರುವ ಮನುಬಾಕರ್‌ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಅವರು ಕಲಿತ ಚಂಡೀಗಢದ ಡಿಎವಿ ಕಾಲೇಜಿನಲ್ಲಿ ಎರಡು ವರ್ಷಗಳ ಕಾಲ ಸ್ನಾತಕೋತ್ತರ ಪದವಿ ಕಲಿತಿರುತ್ತಾರೆ.


administrator