ಬೆಂಗಳೂರು: ಕರ್ನಾಟಕದಲ್ಲಿರುವ ದಿವ್ಯಾಂಗ ಕ್ರೀಡಾಪಟುಗಳು ಇನ್ನು ಮುಂದೆ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು. ಈ ಕಾರಣಕ್ಕಾಗಿಯೇ ಕರ್ನಾಟಕ ದಿವ್ಯಾಂಗರ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಸಂಸ್ಥೆ Karnataka Disability Billiards and Snooker Association (KDBSA) ಹುಟ್ಟಿಕೊಂಡಿದೆ. Karnataka Disability Billiards and Snooker Association formed.
ದಿವ್ಯಾಂಗರು ತಮ್ಮಲ್ಲಿರುವ ಸಾಮರ್ಥ್ಯವನ್ನು ಈ ರೀತಿಯ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ದೇಶಕ್ಕೆ ಕೀರ್ತಿ ತರಬಹುದು. ಆ ಅವಕಾಶವನ್ನು ಕೆಡಿಬಿಎಸ್‌ಎ ಒದಗಿಸಲಿದೆ. ಇತ್ತೀಚಿಗೆ ನಡೆದ ಕೆಡಿಬಿಎಸ್‌ಎ ವೆಬ್‌ಸೈಟ್ ಅನಾವರಣಾ ಸಂದರ್ಭದಲ್ಲಿ ವಿಶ್ವ ಮಾಜಿ ಚಾಂಪಿಯನ್ ಉಮಾದೇವಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂಸ್ಥೆಯನ್ನು ಲೋಕೇಶ್ ಸಾಗರ್ ಅವರು ಸ್ಥಾಪಿಸಿರುತ್ತಾರೆ.
ವ್ಹೀಲ್ ಚೇರ್ (ಗಾಲಿ ಕುರ್ಚಿಯಲ್ಲಿ ಚಲಿಸುವವರು), ಆಂಬುಲೆಂಟ್ (ಕಾಲಿನ ದಿವ್ಯಾಂಗರು) ಇಂಟಲೆಕ್ಚ್ವಲ್, (ಬೌದ್ಧಿಕವಾಗಿ ದಿವ್ಯಾಂಗರು) ವಿಸ್ವಲ್ (ದೃಷ್ಠಿ ದಿವ್ಯಾಂಗರು) ಮತ್ತು ಡೆಫ್ (ಶ್ರವಣ ದಿವ್ಯಾಂಗರು) ಇವರುಗಳಿಗೆ ಈ ಸಂಸ್ಥೆ ತರಬೇತಿ ನೀಡಲಿದೆ.
ಇದೊಂದು ಹೊಸ ಸ್ಫೂರ್ತಿ: ಕೆಡಿಬಿಎಸ್‌ಎ ಸಂಸ್ಥೆಯ ಬಗ್ಗೆ ಮಾತನಾಡಿದ ಅಂತಾರಾಷ್ಟ್ರೀಯ ಬಿಲಿಯರ್ಡ್ಸ್ ತಾರೆ ಉಮಾದೇವಿ, “ಇದೊಂದು ಉತ್ತಮ ಕಾರ್ಯ. ದಿವ್ಯಾಂಗರ ಕ್ರೀಡೆಗೆ ಸರಕಾರ ಉತ್ತಮ ಪ್ರೋತ್ಸಾಹ ನೀಡುತ್ತಿದೆ. ಕರ್ನಾಟಕದಿಂದ ಇದುವರೆಗೂ ಸಾಮಾನ್ಯರು ಮಾತ್ರ ಜಾಗತಿಕ ಮಟ್ಟದ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್‌ಷಿಪ್‌ಗಳಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದರು. ಈಗ ದಿವ್ಯಾಂಗರೂ ಪಾಲ್ಗೊಳ್ಳಬಹುದು. ಈ ಸಂಸ್ಥೆ ಉತ್ತಮ ಉದ್ದೇಶಗಳನ್ನು ಹೊಂದಿ ಆರಂಭಗೊಂಡಿದೆ. ನಾವೆಲ್ಲರೂ ಪ್ರೋತ್ಸಾಹ ನೀಡಲಿದ್ದೇರವೆ,” ಎಂದು ಹೇಳಿದರು.
ಸದಸ್ಯರಾಗಲು ಬಯಸುವವರು www.kdbsa.com ಲಾಗಿನ್ ಆಗಿ.