Thursday, September 19, 2024

ಸ್ಯಾಫ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ಕೋಚ್‌ ಶಿವಾನಂದ್‌ ಆಯ್ಕೆ

ಬೆಂಗಳೂರು: ಇದೇ ತಿಂಗಳ 11 ರಿಂದ 13ರ ವರೆಗೆ ಚೆನ್ನೈನಲ್ಲಿ ನಡೆಯಲಿರುವ ದಕ್ಷಿಣ ಏಷ್ಯಾಅಥ್ಲೆಟಿಕ್ಸ್‌ ಫೆಡರೇಷನ್‌ ಜೂನಿಯ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ಕೋಚ್‌ ಆಗಿ ರೈಲ್ವೆಯ ಪ್ರಧಾನ ಕೋಚ್‌ ಐಎ ಶಿವಾನಂದ ಅವರು ಆಯ್ಕೆಯಾಗಿದ್ದಾರೆ. Railways Sports Promotion Board IA Shivanand selected as a coach for South Asian Athletic Federation junior athletics championship Chennai

ಮಿಡ್ಲ್‌ & ಲಾಂಗ್‌ ಡಿಸ್ಟನ್ಸ್‌ ರನ್ನಿಂಗ್‌ ವಿಭಾಗದಲ್ಲಿ ಶಿವಾನಂದ್‌ ಅವರು ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಭಾರತೀಯ ಅಥ್ಲೆಟಿಕ್ಸ್‌ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಕರ್ನಾಟಕದ ಬಿಂದು ರಾಣಿ ಅವರು ಕೂಡ 100 & 200 ಮೀ. ವಿಭಾಗದ ಕೋಚ್‌ ಆಗಿಯೂ ಕಾರ್ಯನಿರ್ವಹಿಸಲಿದ್ದಾರೆ.

ಈ ಕ್ರೀಡಾಕೂಟದಲ್ಲಿ ಕರ್ನಾಟಕದಿಂದ 400ಮೀ. ಓಟದಲ್ಲಿ ರಿಹಾನ್‌ ಸಿ.ಎಚ್‌., 800 ಮೀ. ಓಟದಲ್ಲಿ ಬೋಪಣ್ಣ ಕೆ., ವನಿತೆಯರ 100 ಮೀ ಓಟದಲ್ಲಿ ವಿ, ಸುಧೀಕ್ಷಾ, 200ಮೀ, ಓಟ ಹಾಗೂ 100 ಹರ್ಡಲ್ಸ್‌ನಲ್ಲಿ ಉನ್ನತಿ ಅಯ್ಯಪ್ಪ, 4×100 ಮೀ ರಿಲೇಯಲ್ಲಿ ಸುಧೀಕ್ಷ ಹಾಗೂ ನಿಯೋಲ್‌ ಅನ್ನಾ ಕಾರ್ನೆಲಿಯೋ ಪಾಲ್ಗೊಳ್ಳಲಿದ್ದಾರೆ.

ಕೋಚ್‌ ಆಗಿ ಕಾರ್ಯನಿರ್ವಹಿಸಲಿರುವ ಶಿವಾನಂದ ಅವರು ಕರ್ನಾಟಕಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದ ಓಟಗಾರ. ಏಕಲವ್ಯ ಪ್ರಶಸ್ತಿಗೆ ಭಾಜನರಾಗಿರುವ ಶಿವಾನಂದ ಅವರು ಯುವ ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ನೀಡುತ್ತಿದ್ದು, ಇವರಲ್ಲಿ ಪಳಗಿದ ಅನೇಕ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುತ್ತಾರೆ.

ದಕ್ಷಿಣ ಏಷ್ಯಾ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಸೇರಿದಂತೆ ಬಾಂಗ್ಲಾದೇಶ, ಪಾಕಿಸ್ತಾನ, ಭೂತಾನ್‌, ಮಾಲ್ಡೀವ್ಸ್‌, ನೇಪಾಳ ಮತ್ತು ಶ್ರೀಲಂಕಾ ರಾಷ್ಟ್ರಗಳು ಪಾಲ್ಗೊಳ್ಳಲಿವೆ.

Related Articles