Sunday, December 22, 2024

ರಾಷ್ಟ್ರೀಯ ಈಜು: ಶ್ರೀಹರಿ, ಅನೀಶ್‌ ಗೌಡಗೆ ಚಿನ್ನ

ಮಂಗಳೂರು: ಕರ್ನಾಟಕದ ಶ್ರೀಹರಿ ನಟರಾಜ್‌ ಹಾಗೂ ಅನೀಶ್‌ ಗೌಡ ಅವರು ಇಲ್ಲಿನ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ನಡೆಯುತ್ತಿರುವ 77ನೇ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವುದರೊಂದಿಗೆ ಆತಿಥೇಯ ಕರ್ನಾಟಕ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. Shrihari Nataraj and Aneesh Gowda clinched Gold at National Aquatic Championship Mangalore.

ಎರಡನೇ ದಿನದ ಸ್ಪರ್ಧೆ ಮುಕ್ತಾಯಗೊಂಡಾಗ ಕರ್ನಾಟಕ 9 ಚಿನ್ನ, 7 ಬೆಳ್ಳಿ ಹಾಗೂ 1 ಕಂಚಿನ ಪದಕಗಳೊಂದಿಗೆ ಒಟ್ಟು 17 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. ತಮಿಳುನಾಡು ರಿಲೇ ತಂಡ ಮಿಶ್ರ 4×100 ಮೀ ಮೆಡ್ಲೇ ರಿಲೇಯಲ್ಲಿ ನೂತನ ರಾಷ್ಟ್ರೀಯ ದಾಖಲೆ (4 ನಿಮಿಷ 05.30 ಸೆ) ಯೊಂದಿಗೆ ಚಿನ್ನ ಗೆದ್ದಿದೆ. ಡಬಲ್‌ ಒಲಿಂಪಿಯನ್‌ ಶ್ರೀಹರಿ ನಟರಾಜ್‌, 100ಮೀ. ಫ್ರೀಸ್ಟೈಲ್‌ ವಿಭಾಗದಲ್ಲಿ 50.59 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದುಕೊಂಡರು.

800ಮೀ ಫ್ರೀಸ್ಟೈಲ್‌ ವಿಭಾಗದಲ್ಲಿ ಕರ್ನಾಟಕದ ಅನೀಸ್‌ ಎಸ್‌. ಗೌಡ, 8ನಿಮಿಷ 20.01 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಕರ್ನಾಟಕದ ದರ್ಶನ್‌ ಈ ವಿಭಾಗದಲ್ಲಿ ಬೆಳ್ಳಿ ಗೆದ್ದರು.

ಪುರುಷರ  200ಮೀ ಮೆಡ್ಲೆಯಲ್ಲಿ ಸರ್ವಿಸಸ್‌ನ ವಿನಾಯಕ ವಿಜಯ್‌ ಚಿನ್ನ ಗೆದ್ದರೆ, ಕರ್ನಾಟಕದ ಶಿವಾ ಶ್ರೀಧರ್‌ ಬೆಳ್ಳಿ ಗೆದ್ದರು. ಕರ್ನಾಟಕದ ವಿಧಿತ್‌ ಶಂಕರ್‌ 50 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಚಿನ್ನ ತಮ್ಮದಾಗಿಸಿಕೊಂಡರು. ಬೆಳ್ಳಿ ಮತ್ತು ಕಂಚಿನ ಪದಕವನ್ನು ತಮಿಳುನಾಡಿನ ಸ್ಪರ್ಧಿಗಳು ಗೆದ್ದರು.

Related Articles