Sunday, December 22, 2024

ಮೈಸೂರಿನಲ್ಲಿ ಕ್ರೀಡಾ ಸಾಧಕರಿಗೆ ಸನ್ಮಾನ

ಮೈಸೂರು: ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಅಂತರ್‌ ಜಿಲ್ಲಾ ಅಥ್ಲೆಟಿಕ್ಸ್‌ ಹಾಗೂ 23 ವರ್ಷ ವಯೋಮಿತಿಯ ಕ್ರೀಡಾಕೂಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಾಜಿ ಸಾಧಕರನ್ನು ಸನ್ಮಾನಿಸಲಾಯಿತು. Karnataka’s former International athletes felicitated at Mysuru.

ಮೈಸೂರು ಜಿಲ್ಲಾ ಅಥ್ಲೆಟಿಕ್ಸ್‌ ಸಂಸ್ಥೆಯ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾಧಕರಾದ ದಾಮೋಧರ್‌ ಗೌಡ, ಬಾಬು ಶೆಟ್ಟಿ, ಮುರಳೀಧರನ್‌, ಭಾರತಿ ಬಿ.ಎಲ್‌, ಸಹನಾ ಕುಮಾರಿ, ನಾಗರಾಜ್‌ ಬಿ.ಜಿ, ಬಿಂದೂ ರಾಣಿ, ವಿಲಾಸ್‌ ನೀಲಗುಂದ್‌, ಚಿನ್ನಪ್ಪ ಹಾಗೂ ಆನಂದ್‌ ಕುಮಾರ್‌ ಎಚ್‌,ಎನ್‌. ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಅಥ್ಲೆಟಿಕ್ಸ್‌ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಇತರ ಪದಾಧಿಕಾರಿಗಳು ಹಾಜರಿದ್ದರು.

Related Articles