Thursday, November 21, 2024

ಕ್ರೀಡಾ ಸಾಧಕರಿಗೆ ಉದ್ಯೋಗದಲ್ಲಿ ಶೇ.2 ಮೀಸಲು ಆದೇಶ

ಬೆಂಗಳೂರು: ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಉದ್ಯೋಗದಲ್ಲಿ ಶೇ.2ಷ್ಟು ಮೀಸಲಾತಿ ನೀಡುವಂತೆ ಸರಕಾರ ಆದೇಶಿಸಿದ್ದು ಅದನ್ನು ಕರ್ನಾಟಕ ರಾಜ್ಯಪತ್ರ ಪ್ರಕಟಿಸಿದೆ. ಇದು ಸಮಾಜದ ಎಲ್ಲ ವರ್ಗದವರಿಗೂ ಅನ್ವಯವಾಗುತ್ತದೆ. Karnataka government officially announced 2% job reservation for sports achievers.

ಪ್ರತಿ ನೇಮಕಾರಿ ಪ್ರಾಧಿಕಾರವು ಗ್ರೂಪ್‌ ಎ ಬಿ ಸಿ ಮತ್ತು ಡಿ ವೃಂದಗಳ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಯ ಅರ್ಜಿಯಲ್ಲಿ ಕ್ರೀಡಾ ಸಾಧಕ ಅಭ್ಯರ್ಥಿಗಳ ಅನುಕೂಲಕ್ಕಾಗಿ ಪ್ರತ್ಯೇಕ ಕಾಲಂ ಅನ್ನು ಒದಗಿಸಲಾಗುವುದು,  ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳ ಉಪ ನಿಯಮದಲ್ಲಿ ಈ ಹೊಸ ತಿದ್ದುಪಡಿಯನ್ನು ಮಾಡಲಾಗದೆ. “ಯಾವುದೇ ಹುದ್ದೆಯ ಅಥವಾ ಸೇವೆಯ ಸಂಬಂಧದಲ್ಲಿ ರಚಿಸಿದ ನೇಮಕಾತಿ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ ಮತ್ತು ನೇಮಕಾತಿಗೆ ಸಂಬಂಧಿಸಿದಂತೆ ಸರಕಾರ ಹೊರಡಿಸುವ ಸಾಮಾನ್ಯ ಸೂಚನೆಗಳಿಗೆ ಒಳಪಟ್ಟು ಅಂಥ ನೇಮಕಾತಿ ನಿಯಮಗಳಲ್ಲಿ ನೇರ ನೇಮಕಾತಿಯನ್ನು ಒಂದು ವಿಧಾನವನ್ನಾಗಿ ನಿಗದಿಪಡಿಸಿದ್ದಲ್ಲಿ ಅಂಥ ವಿಧಾನದ ಮೂಲಕ ನೇಮಕ ಮಾಡುವುದಕ್ಕಾಗಿ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿಗಳು, ಪರಿಶಿಷ್ಠ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಪ್ರತಿಯೊಂದು ಪ್ರವರ್ಗದಿಂದಲೂ ಪ್ರತಿ ಇಲಾಖೆಯ ಮಂಜೂರಾದ ವೃಂದ ಬಲದ ಶೇಕಡಾ ಎರಡರಷ್ಟು ಹುದ್ದೆಗಳನ್ನು ಕ್ರೀಡಾ ಸಾಧಕ ಅಭ್ಯರ್ಥಿಗಳಿಗೆ ಮೀಸಲಿರಿಸತಕ್ಕದ್ದು,” ಎಂದು ಆದೇಶ ಹೊರಡಿಸಲಾಗಿದೆ.

ಯವ್ಯಾವ ಕ್ರೀಡೆಗಳ ಸಾಧನೆಗೆ ಈ ಮೀಸಲಾತಿ ಅನ್ವಯಿಸುತ್ತದೆ?:

ಅಥ್ಲೆಟಿಕ್ಸ್‌, ಆರ್ಚರಿ, ಬಾಸ್ಕೆಟ್‌ ಬಾಲ್‌, ಬಾಕ್ಸಿಂಗ್‌, ಸೈಕ್ಲಿಂಗ್‌, ಫೆನ್ಸಿಂಗ್‌, ಫುಟ್ಬಾಲ್‌, ಜಿಮ್ನಾಸ್ಟಿಕ್‌, ಹಾಕಿ, ಕಬಡ್ಡಿ, ರೈಫಲ್‌ ಶೂಟಿಂಗ್‌, ವಾಲಿಬಾಲ್‌, ವೇಟ್‌ಲಿಫ್ಟಿಂಗ್‌, ನೆಟ್‌ಬಾಲ್‌, ಪವರ್‌ ಲಿಫ್ಟಿಂಗ್‌, ಯೋಗ, ಬೇಸ್‌ಬಾಲ್‌, ಕುಸ್ತಿ, ಈಜು, ಜೂಡೋ, ಕ್ರಿಕೆಟ್‌, ಖೋ ಖೋ. ಟೇಬಲ್‌ ಟೆನಿಸ್‌, ಹ್ಯಾಂಡ್‌ಬಾಲ್‌, ರೋವಿಂಗ್‌, ಕಯಾಕಿಂಗ್‌, ಕೆನಾಯಿಂಗ್‌ , ಲಾನ್‌ ಟೆನಿಸ್‌, ಬ್ಯಾಡ್ಮಿಂಟನ್‌, ಸೆಪಾಕ್‌ಟಕ್ರಾ, ಟೆಕ್ವಾಂಡೋ, ಪ್ಯಾರಾ ಲಾನ್‌ಬೌಲ್‌, ಪ್ಯಾರಾ ಟೆನ್‌ಪಿನ್‌ ಬೌಲಿಂಗ್‌.

Related Articles