Friday, October 18, 2024

102 ಡಿಗ್ರಿ ಜ್ವರದಲ್ಲೇ ಬ್ಯಾಟಿಂಗ್‌ ಮಾಡಿದ ಶಾರ್ದೂಲ್‌ ಠಾಕೂರ್‌!

ಲಖನೌ: ಶೇಷ ಭಾರತ ಹಾಗೂ ಮುಂಬೈ ವಿರುದ್ಧದ ಇರಾನಿ ಟ್ರೋಫಿಯಲ್ಲಿ ಮುಂಬೈಯ ಆಲ್ರೌಂಡರ್‌ ಶಾರ್ದೂಲ ಠಾಕೂರ್‌ 102 ಡಿಗ್ರಿ ಜ್ವರವಿದ್ದರೂ ಬ್ಯಾಟಿಂಗ್‌ ಮಾಡಿ ಅಮೂಲ್ಯ 36 ರನ್‌ ಗಳಿಸಿ ಔಟಾದ ಬಳಿಕ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ. Despite 102 degree fever Shardul Thakur batted for Mumbai Irani Trophy match then hospitalized.

ಎರಡನೇ ದಿನದ ಪಂದ್ಯ ಮುಗಿಯುತ್ತಿದ್ದಂತೆ ವಿಪರೀತ ಜ್ವರದಿಂದ ಬಳಲುತ್ತಿದ್ದ ಶಾರ್ದೂಲ್‌ ಠಾಕೂರ್‌ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಜ್ವರದ ನಡುವೆಯೂ ಬ್ಯಾಟಿಂಗ್‌ಗೆ ಇಳಿದ ಠಾಕೂರ್‌, 59 ಎಸೆತಗಳನ್ನೆದುರಿಸಿ 36 ರನ್‌ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್‌ ಸೇರಿತ್ತು. ಇನ್ನೊಂದೆಡೆ ಸರ್ಫರಾಜ್‌ ಖಾನ್‌ ಸಾಥ್‌ ನೀಡಿದ್ದರು. ಸರ್ಫರಾಜ್‌ 222 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದರು. ಮುಂಬೈ ಪ್ರಥಮ ಇನ್ನಿಂಗ್ಸ್‌ನಲ್ಲಿ 537 ರನ್‌ ಗಳಿಸಿತ್ತು. 9ನೇ ವಿಕೆಟ್‌ ಜೊತೆಯಲಾಟದಲ್ಲಿ ಇಬ್ಬರೂ ಆಟಗಾರರು ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿ 79 ರನ್‌ ಗಳಿಸಿದ್ದರು. ಆದರೆ ಜ್ವರದಿಂದ ಬಳಲುತ್ತಿರುವ ಶಾರ್ದೂಲ್‌ ಅವರನ್ನು ಬ್ಯಾಟಿಂಗ್‌ಗೆ ಅವಕಾಶ ನೀಡಿದ್ದು ಯಾಕೆಂಬುದು ಗೊತ್ತಾಗಿಲ್ಲ. ತಂಡದ ವೈದ್ಯರು ಹಾಗೂ ಆಡಳಿತ ಮಂಡಳಿ ಇಂಥ ಸಂದರ್ಭದಲ್ಲಿ ಅವಕಾಶ ಕಲ್ಪಿಸುವುದು ಸೂಕ್ತವಲ್ಲ.

ಮೊದಲ ದಿನದಲ್ಲೇ ಶಾರ್ದೂಲ್‌ ಅವರಿಗೆ ಲಘು ಪ್ರಮಾಣದಲ್ಲಿ ಜ್ವರ ಬಂದಿತ್ತು. ಆದರೆ ಸುಮಾರು ಎರಡು ಗಂಟೆಗಳ ಕಾಲ ಕ್ರೀಸಿನಲ್ಲಿದ್ದುದರಿಂದ ಜ್ವರ ಉಲ್ಬಣಿಸಿತು.

Related Articles