Friday, November 22, 2024

ಮುಂದಿನ ವರ್ಷ ಭಾರತದಲ್ಲಿ ಮೊದಲ ಖೋ ಖೋ ವಿಶ್ವಕಪ್‌

ಹೊಸದಿಲ್ಲಿ: ಭಾರತದ ಗ್ರಾಮೀಣ ಕ್ರೀಡೆ ಖೋ ಖೋ ಗೆ ಈಗ ಜಾಗತಿಕ ಮನ್ನಣೆ ಸಿಗಲಿದೆ. ಮುಂದಿನ ವರ್ಷ ಭಾರದಲ್ಲಿ ಜಗತ್ತಿನ ಮೊದಲ ವಿಶ್ವಕಪ್‌ ನಡೆಯಲಿದೆ ಎಂದು ಖೋ ಖೋ ಫೆಡರೇಷನ್‌ ಪ್ರಕಟಿಸಿದೆ. India to host first ever Kho Kho world cup in 2025.

 ಮೊದಲ ಬಾರಿಗೆ ನಡೆಯುತ್ತಿರುವ ಖೋ ಖೋ ವಿಶ್ವಕಪ್‌ನಲ್ಲಿ 24 ರಾಷ್ಟ್ರಗಳಿಂದ 16 ಮಹಿಳಾ ಹಾಗೂ 16 ಪುರುಷ ತಂಡಗಳು ಪಾಲ್ಗೊಳ್ಳಲಿವೆ ಎಂದು ಫೆಡರೇಷನ್‌ ತಿಳಿಸಿದೆ.

ಖೋ ಖೋ ಪ್ರೀಮಿಯರ್‌ ಲೀಗ್‌ ನಡೆದ ಬಳಿಕ ಈ ಕ್ರೀಡೆಗೆ ಹೆಚ್ಚಿನ ಪ್ರಚಾರ ಸಿಕ್ಕಿದ್ದು ಜಗತ್ತಿನ ಇತರ ರಾಷ್ಟ್ರಗಳಲ್ಲೂ ಈ ಕ್ರೀಡೆ ಜನಪ್ರಿಯಗೊಂಡಿದೆ, ಮೊದಲು ಮಣ್ಣಿನ ನೆಲದಲ್ಲಿ ನಡೆಯುತ್ತಿದ್ದ ಕ್ರೀಡೆ ಈಗ ಕಬಡ್ಡಿಯಂತೆ ಮ್ಯಾಟ್‌ನಲ್ಲಿ ನಡೆಯುತ್ತಿದೆ. “ಖೋ ಖೋ ಕ್ರೀಡೆಯನ್ನು 2032 ರ ಹೊತ್ತಿಗೆ ಒಲಿಂಪಿಕ್ಸ್‌ ಕ್ರೀಡೆಯಲ್ಲಿ ಸೇರಿಸುವುದು ನಮ್ಮ ಉದ್ದೇಶವಾಗಿದೆ, ವಿಶ್ವಕಪ್‌ ಆಯೋಜನೆ ನಮ್ಮ ಮೊದಲ ಯತ್ನ,” ಎಂದು ಫೆಡರೇಷನ್‌ನ ಅಧ್ಯಕ್ಷ ಸುಧಾಂಶು ಮಿತ್ತಲ್‌ ಹೇಳಿದ್ದಾರೆ.

Related Articles