Friday, October 18, 2024

ಭಾರತದಲ್ಲಿ ದೃಷ್ಠಿ ದಿವ್ಯಾಂಗರ ಫುಟ್ಬಾಲ್‌ ವಿಶ್ವ ಚಾಂಪಿಯನ್‌ಷಿಪ್‌

ಹೊಸದಿಲ್ಲಿ: ಭಾರತೀಯ ದೃಷ್ಠಿ ದಿವ್ಯಾಂಗರ ಫುಟ್ಬಾಲ್‌ ಫೆಡರೇಷನ್‌ Indian Blind Football Federation (IBFF) ಮುಂದಿನ ವರ್ಷ ಅಕ್ಟೋಬರ್‌ 2 ರಿಂದ 12ರ ವರೆಗೆ ಕೇರಳದ ಕೊಚ್ಚಿಯ ಕಾಕ್ಕನಾಡ್‌ನಲ್ಲಿ IBSA ಮಹಿಳಾ ದೃಷ್ಠಿ ದಿವ್ಯಾಂಗರ ಫುಟ್ಬಾಲ್‌ ವಿಶ್ವ ಚಾಂಪಿಯನ್‌ಷಿಪ್‌ ನಡೆಸಲಿದೆ. ಭಾರತದಲ್ಲಿ ಮೊದಲ ಬಾರಿಗೆ ದಿವ್ಯಾಂಗರ ಫುಟ್ಬಾಲ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. India will host IBSA Women’s Blind Football World Championship in Kerala

ಐಬಿಎಫ್‌ಎಫ್‌ನ ಪೋಷಕರಾದ ಡಾ. ರೆ.ಫಾ. ರಾಬಿ ಕಣ್ಣಂಚಿರ ಅವರು ಗುರುವಾರ ಚಾಂಪಿಯನ್‌ಷಿಪ್‌ನ ಲಾಂಛನ ಬಿಡುಗಡೆ ಮಾಡಿದರು.

ಜಗತ್ತಿನ ವಿವಿಧ ರಾಷ್ಟ್ರಗಳಿಂದ ಮಹಿಳಾ ದೃಷ್ಠಿ ದಿವ್ಯಾಂಗರ ಫುಟ್ಬಾಲ್‌ ತಂಡ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಭಾರತದ ದಿವ್ಯಾಂಗರ ಫುಟ್ಬಾಲ್‌ ಫೆಡರೇಷನ್‌ಗೆ ಈ ಚಾಂಪಿಯನ್‌ಷಿಪ್‌ನ ಆತಿಥ್ಯ ವಹಿಸಲು ಅವಕಾಶ ಸಿಕ್ಕಿರುವುದು ಹೆಮ್ಮೆಯ ಸಂಗತಿ. ಮಹಿಳಾ ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶ ನೀಡುವ ಸಲುವಾಗಿ ಮತ್ತು ಭಾರತದಲ್ಲಿ ದಿವ್ಯಾಂಗರ ಫುಟ್ಬಾಲ್‌ಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಈ ವಿಶ್ವ ಚಾಂಪಿಯನ್‌ಷಿಪ್‌ ಆತಿಥ್ಯ ವಹಿಸಲಾಗಿದೆ. ಸರಕಾರ ಮತ್ತು ಕಾರ್ಪೊರೇಟವ್‌ ವಲಯ ಈ ರೀತಿಯ ಚಾಂಪಿಯನ್‌ಷಿಪ್‌ಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ. 2028ರ ಲಾಸ್‌ ಏಂಜಲೀಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಸ್ಪರ್ಧಿಸಲು ಶ್ರಮಹಿಸುವುದು ನಮ್ಮ ಉದ್ದೇಶವಾಗಿದೆ ಎಂದು ಭಾರತ ದೃಷ್ಠಿ ದಿವ್ಯಾಂಗರ ತಂಡದ ನಿರ್ದೇಶಕ ಹಾಗೂ ಕೋಚ್‌ ಸುನಿಲ್‌ ಜೆ. ಮ್ಯಾಥ್ಯು ಅಭಿಪ್ರಾಯಪಟ್ಟಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಭಾರತ ಮಹಿಳಾ ದೃಷ್ಠಿ ದಿವ್ಯಾಂಗರ ಫುಟ್ಬಾಲ್‌ ತಂಡದ ನಾಯಕಿ ನಿರ್ಮಾಬೆನ್‌, “ನನ್ನ ಕೆಲವು ಪುರುಷ ದೃಷ್ಠಿ ದಿವ್ಯಾಂಗ ಫುಟ್ಬಾಲ್‌ ಆಟಗಾರರ ನೆರವಿನಿಂದ ಈ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ಈಗ ಕೆಲವು ದೇಶಗಳಿಗೆ ಹೋಗಿ ಫುಟ್ಬಾಲ್‌ ಆಡಿದ ಅನುಭವ ಸಿಕ್ಕಿದೆ. ಮನೆಯಂಗಣದಲ್ಲಿ ಫುಟ್ಬಾಲ್‌ ವಿಶ್ವಕಪ್‌ ಆಡಲು ಉತ್ಸುಕಳಾಗಿರುವೆ,” ಎಂದಿದ್ದಾರೆ.

ಆತಿಥೇಯ ಭಾರತ ಸೇರಿದಂತೆ ಜಪಾನ್‌, ಜರ್ಮನಿ, ಇಂಗ್ಲೆಂಡ್‌, ಸ್ವೀಡನ್‌, ಮೊರಾಕ್ಕೋ, ಆಸ್ಟ್ರಿಯಾ ಹಾಗೂ ಅರ್ಜೆಂಟೀನಾ ಮತ್ತು ಇನ್ನೂ ಅನೇಕ ರಾಷ್ಟ್ರಗಳು ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಿವೆ.

Related Articles