Friday, October 18, 2024

ಟ್ರ್ಯಾಕ್‌ನಲ್ಲಿ ಕೆನರಾ ಬ್ಯಾಂಕ್‌ ತಂಡಕ್ಕೆ ಚಾಂಪಿಯನ್‌ ಪಟ್ಟ

ಬೆಂಗಳೂರು: ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ಅಕ್ಟೋಬರ್‌ 16 ರಿಂದ 18ರ ವರೆಗೆ ನಡೆದ ಅಖಿಲ ಭಾರತ ಸರಕಾರಿ ಸ್ವಾಮ್ಯದ ಸಂಸ್ಥೆಗಳ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ದೇಶದ ಪ್ರಮುಖ ಬ್ಯಾಂಕ್‌ ಕೆನರಾ ಬ್ಯಾಂಕ್‌ನ ಅಥ್ಲೆಟಿಕ್ಸ್‌ ತಂಡ ಟ್ರ್ಯಾಕ್‌ ವಿಭಾಗದಲ್ಲಿ ಸಮಗ್ರ ಚಾಂಪಿಯನ್‌ ಪಟ್ಟ ಗೆದ್ದುಕೊಂಡರೆ, ಮಹಿಳಾ ತಂಡ ಟೀಮ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ರನ್ನರ್‌ಅಪ್‌ ಸ್ಥಾನ ಗೆದ್ದುಕೊಂಡಿದೆ. All India Public Sector Athletic Championship Canara Bank team Champion in Athletic events.

ಕರ್ನಾಟಕದ ಎಚ್‌.ಎಂ. ಜ್ಯೋತಿ 400 ಮೀ. ಓಟದಲ್ಲಿ ಕಂಚಿನ ಪದಕ ಹಾಗೂ 4×100 ಮತ್ತು 4×400 ಮೀ. ರಿಲೇಯಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ.

ಕೆನರಾ ಬ್ಯಾಂಕ್‌ನ ಇಂಚರ 400 ಮೀ. ಹಾಗೂ 200 ಮೀ. ಓಟದಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ. ಅಂಜು 200 ಮೀ ಹಾಗೂ 100 ಮೀ. ಓಟದಲ್ಲಿ ಅನುಕ್ರಮವಾಗಿ ಕಂಚು ಮತ್ತು ಬೆಳ್ಳಿಯ ಸಾಧನೆ ಮಾಡಿದ್ದಾರೆ. ಎಂ,ಜಿ. ಪದ್ಮಿನಿ 100 ಮೀ ಓಟದಲ್ಲಿ ಕಂಚು ಹಾಗೂ ಶಾಟ್‌ಪುಟ್‌ನಲ್ಲೂ ಮೂರನೇ ಸ್ಥಾನ ಗಳಿಸಿ ಕಂಚಿನ ಪದಕ ಗೆದ್ದಿದ್ದಾರೆ.

ಹಿಂದೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಬ್ಯಾಂಕ್‌ ಉದ್ಯೋಗವನ್ನು ಪಡೆದ ಈ ಸಾಧಕರು ಈಗಲೂ ತಮಗೆ ಉದ್ಯೋಗ ನೀಡಿದ ಕೆನರಾ ಬ್ಯಾಂಕ್‌ ಪರ ಸ್ಪರ್ಧಿಸಿ ಪದಕ ಗೆಲ್ಲುತ್ತಿರುವುದು ವಿಶೇಷ.

Related Articles