Friday, October 18, 2024

ಶೆರಾವತ್‌ಗೆ ಶರಣಾದ ಬೆಂಗಳೂರು ಬುಲ್ಸ್‌

ಹೈದರಾಬಾದ್‌: ಪ್ರೋ ಕಬಡ್ಡಿ ಲೀಗ್‌ 11ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಡೈನಮಿಕ್‌ ರೈಡರ್‌ ಪವನ್‌ ಶೆರಾವತ್‌ ಅವರ ಆಕರ್ಷಕ ಆಟದ ನೆರವಿನಿಂದ ತೆಲುಗು ಟೈಟಾನ್ಸ್‌ ತಂಡ ಬೆಂಗಳೂರು ಬುಲ್ಸ್‌ ವಿರುದ್ಧ 37-29 ಅಂತರದಲ್ಲಿ ಜಯ ಗಳಿಸಿ ಶುಭಾರಂಭ ಕಂಡಿದೆ. High Flyer Pawan Sherawat leads Telugu Titans to win against Bengaluru Bulls

ನಿರಂತರವಾಗಿ ಅಂಕಗಳನ್ನು ಗಳಿಸಿದ ತೆಲುಗು ಟೈಟಾನ್ಸ್‌ ಪ್ರಥಮಾರ್ಧದಲ್ಲಿ 20-11 ಅಂಕಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ದ್ವಿತಿಯಾರ್ಧದ ಆರಂಭದಲ್ಲಿ ಬೆಂಗಳೂರು ಬುಲ್ಸ್‌ ದಿಟ್ಟ ಹೋರಾಟ ನೀಡಿ 9 ಅಂಕಗಳಿಂದ ಮುನ್ನಡೆ ಕಂಡಿದ್ದ ತೆಲುಗು ಟೈಟಾನ್ಸ್‌ಗೆ ಆಘಾತ ನೀಡಿತು. ಮಾತ್ರವಲ್ಲ 4 ಅಂಕಗಳಿಂದ ಮುನ್ನಡೆ ಕಾಯ್ದುಕೊಂಡಿತು. ಸುರಿಂದರ್‌ ದೆಹಾಲ್‌ ಮತ್ತು ಪ್ರದೀಪ್‌ ನರ್ವಾಲ್‌ ಬೆಂಗಳೂರು ಪರ ಉತ್ತಮ ರೈಡಿಂಗ್‌ ಪ್ರದರ್ಶಿಸಿ ತೆಲುಗು ಟೈಟಾನ್ಸ್‌ ಪಡೆಯನ್ನು ಆಲೌಟ್‌ ಮಾಡುವಲ್ಲಿ ಯಶಸ್ವಿಯಾದರು. ಪಂದ್ಯ 24-23 ರಲ್ಲಿ ಸಾಗಿ ಕುತೂಹಲ ಹಂತ ತಲುಪಿತು.

ಪವನ್‌ ಶೆರಾವತ್‌ ರೈಡಿಂಗ್‌ನಲ್ಲಿ 10 ಅಂಕಗಳನ್ನು ಗಳಿಸುವುದರೊಂದಿಗೆ ತೆಲುಗು ಟೈಟಾನ್ಸ್‌ 7 ಅಂಕಗಳಿಂದ ಮುನ್ನಡೆ ಕಂಡಿತು. ಪವನ್‌ ಶೆರಾವತ್‌ ಈ ಸಂದರ್ಭದಲ್ಲಿ 1200 ರೈಡಿಂಗ್‌ ಪಾಯಿಂಟ್‌ಗಳನ್ನು ಕಲೆ ಹಾಕಿದ ಸಾಧನೆ ಮಾಡಿದರು. ಈ ಸಾಧನೆ ಮಾಡಿದ ಲೀಗ್‌ನ ಮೂರನೇ ರೈಡರ್‌ ಎನಿಸಿದರು. ನಂತರ ಬೆಂಗಳೂರು ಬುಲ್ಸ್‌ ಆಲೌಟ್‌ ಆಗುವ ಮೂಲಕ ತೆಲುಗು ಟೈಟಾನ್ಸ್‌ ಜಯ ದಾಖಲಿಸಿತು.

Related Articles