ಗುಂಟೂರ್: ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ 35ನೇ ದಕ್ಷಿಣ ವಲಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ತಂಡ ಸಮಗ್ರ ಚಾಂಪಿಯನ್ಷಿಪ್ನಲ್ಲಿ ಎರಡನೇ ಸ್ಥಾನ ಗಳಿಸಿದೆ. South Zone junior Athletics Championship Karnataka Overall runner up.
ಬಾಲಕರು 115 ಅಂಕ ಹಾಗೂ ಬಾಲಕಿಯರು 138 ಅಂಕಗಳು ಸೇರಿ ಕರ್ನಾಟಕ ಒಟ್ಟು 253 ಅಂಕಗಳನ್ನು ಗಳಿಸಿ ಸಮಗ್ರ ಚಾಂಪಿಯನ್ಷಿಪ್ನಲ್ಲಿ ಎರಡನೇ ಸ್ಥಾನ ಗಳಿಸಿತು. ತಮಿಳುನಾಡು ಬಾಲಕರು ಮತ್ತು ಬಾಲಕಿಯರ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದು ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.
16 ವರ್ಷ ವಯೋಮಿತಿಯ ಬಾಲಕರ ವಿಭಾಗ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕ ಎರಡನೇ ಸ್ಥಾನ ಗಳಿಸಿತು. 18 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಕರ್ನಾಟಕ ಅಗ್ರ ಸ್ಥಾನ ಗಳಿಸಿತು. 20 ವರ್ಷ ವಯೋಮಿತಿಯ ವಿಭಾಗದಲ್ಲಿ ಎರಡನೇ ಸ್ಥಾನಿಯಾಯಿತು.
ಬಾಲಕಿರಯ 14, 16, 18 ಮತ್ತು 20 ವರ್ಷ ವಯೋಮಿತಿಯ ವಿಭಾಗದಲ್ಲಿ ಕರ್ನಾಟಕ ಅನುಕ್ರಮವಾಗಿ ಎರಡನೇ ಸ್ಥಾನಿಯಾಯಿತು.
16 ವರ್ಷ ಮತ್ತು 18 ವರ್ಷ ಬಾಲಕರ ವಿಭಾಗದ ವೈಯಕ್ತಿಕ ಚಾಂಪಿಯನ್ ಪಟ್ಟವನ್ನು ಕರ್ನಾಟಕದ ಆಯುಷ್ ಪ್ರಾಂಜಲ್ ಮತ್ತು ದಯಾನಂದ ದೂಪಣ್ಣವರ್ ಗೆದ್ದುಕೊಂಡರು. ಬಾಲಕಿಯ 18 ವರ್ಷ ವಯೋಮಿತಿಯ ವಿಭಾಗದಲ್ಲಿ ಕರ್ನಾಟಕದ ಶ್ರುತಿ ಶೆಟ್ಟಿ ಚಾಂಪಿಯನ್ ಪಟ್ಟ ಗೆದ್ದುಕೊಡರು.