Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಮಣಿಪುರದ ಬೆಂಕಿಯಲ್ಲಿ ಅರಳಿದ ಫುಟ್ಬಾಲ್‌ ಆಟಗಾರ ಮಾಟೆ

ಬೆಂಗಳೂರು:‌ 17 ವರ್ಷ ವಯೋಮಿತಿಯ ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಅರ್ಹತಾ ಸುತ್ತಿನ ಪಂದ್ಯಗಳು ಥಾಯ್ಲೆಂಡ್‌ನಲ್ಲಿ ನಡೆಯಲಿವೆ. ಈ ತಂಡದಲ್ಲಿ ಮಣಿಪುರ ಒಬ್ಬ ಆಟಗಾರನಿದ್ದಾನೆ ಹೆಸರು ನಗಾಂಗೌಹೌ ಮಾಟೆ.  U16 SAAF ಫುಟ್ಬಾಲ್‌ ಚಾಂಪಿಯನ್‌ಷಿಪ್‌ ಗೆದ್ದ ಭಾರತ ತಂಡದ ನಾಯಕನೀತ. ಮಣಿಪುರದ ಹಿಂಸೆಯಲ್ಲಿ ಮನೆಗೆ ಬೆಂಕಿ ಬಿದ್ದಾಗ ಈತ ಆಯ್ಕೆ ಮಾಡಿಕೊಂಡಿದ್ದು ಫುಟ್ಬಾಲ್‌ ಶೂ ಮತ್ತು ಶಾಲಾ ಸರ್ಟಿಫಿಕೇಟ್‌. ಬಾಕಿ ಎಲ್ಲವೂ ಸುಟ್ಟು ಕರಕಲಾಗಿತ್ತು. ಆದರೆ ಭಾರತವನ್ನು ಪ್ರತಿನಿಧಿಸುವ ಹಂಬಲ ಮಾತ್ರ ಸುಟ್ಟು ಹೋಗಿಲ್ಲ, ಕರಕಲಾಗಲಿಲ್ಲ. Manipuri Footballer Ngamgouhou Mate’s house was burnt by mobs he first pick the football shoe and escaped.

ಪೂರ್ವ ಇಂಪಾಲ್‌ನ ಪುಟ್ಟ ಗ್ರಾಮ ಕೊಂಗ್ಸಾಯ್‌ ವೆಂಗ್‌ನ ಮನೆಗಳಿಗೆ ಗುಂಪೊಂದು ಬೆಂಕಿ ಇಡುತ್ತಿತ್ತು. ಇದನ್ನು ಕಂಡ ಊರವರು ಮನೆ ಬಿಟ್ಟು ಪಕ್ಕದ ಶಾಲೆಯಲ್ಲಿ ಆಶ್ರಯ ಪಡೆಯುತ್ತಾರೆ. 15 ವರ್ಷದ ಮಾಟೆ ಮನೆಯಿಂದ ಹೊರಕ್ಕೆ ಓಡುವಾಗ ಆಯ್ಕೆ ಮಾಡಿಕೊಂಡಿದ್ದು ಫುಟ್ಬಾಲ್‌ ಶೂ ಮತ್ತು ಶಾಲಾ ಸರ್ಟಿಫಿಕೇಟ್‌. ನಂತರ ಅದೇ ಚೆಂಡಿನಲ್ಲಿ ಅಭ್ಯಾಸ ಮಾಡಿ, ಭಾರತ U16 ತಂಡದ ನಾಯಕನಾಗಿ ಟ್ರೋಫಿ ಗೆದ್ದು ತಂದ ಧೀರ.

ಕಳೆದ ವರ್ಷ ಮಣಿಪುರದಲ್ಲಿ ಸಂಭವಿಸಿದ ಜನಾಂಗೀಯ ಹಿಂಸೆಯಲ್ಲಿ ಅನೇಕ ಫುಟ್ಬಾಲ್‌ ಆಟಗಾರರು ಹಾಗೂ ಇತರ ಕ್ರೀಡಾಪಟುಗಳ ಮನೆಗಳು ಸುಟ್ಟು ಕರಕಲಾದದ್ದು, ಬಂಧುಗಳನ್ನು ಕಳೆದುಕೊಂಡಿದ್ದು ಇನ್ನೂ ಮನಸ್ಸಿನಿಂದ ಮಾಸಿಲ್ಲ. ಆದರೆ ಮಣಿಪುರದ ಫುಟ್ಬಾಲ್‌ ಆಟಗಾರರು ಕ್ರೀಡೆಯನ್ನೇ ಬದುಕಾಗಿಸಿಕೊಂಡು ವಿವಿಧ ಕ್ಲಬ್‌ ಹಾಗೂ ತಂಡಗಳಲ್ಲಿ ಆಡುತ್ತಿದ್ದಾರೆ. ಸರಕಾರ ನೀಡಿರುವ ದಾಖಲೆಗಳ ಪ್ರಕಾರ 221 ಜನರು ಹಿಂಸಾಚಾರಕ್ಕೆ ಬಲಿಯಾಗಿದ್ದು ಸಾವಿರಾರು ಮಂದಿ ಮನೆ ಕಳೆದುಕೊಂಡಿದ್ದಾರೆ.

ಮನೆಗೆ ಬೆಂಕಿ ಬಿದ್ದಾಗ ಅದರಲ್ಲಿ ಮಾಟೆಯ ಸ್ಕೂಟಿ ಕೂಡ ಸುಟ್ಟು ಹೋಗಿತ್ತು. ಆತ ನಿತ್ಯವೂ ಅಭ್ಯಾಸಕ್ಕೆ ಹೋಗಲು ಆ ಸ್ಕೂಟಿಯನ್ನು ಬಳಸುತ್ತಿದ್ದ. ಅದೆಲ್ಲ ಕೆಟ್ಟು ಕನಸೆಂದು ಬರೆಯಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಮಾಟೆ ಈಗ ನಾರ್ಥ್‌ ಈಸ್ಟ್‌ ಯುನೈಟೆಡ್‌ ಕ್ಲಬ್‌ ಪರ ಆಡುತ್ತಿದ್ದಾನೆ, ಭವಿಷ್ಯದಲ್ಲಿ ಶ್ರೇಷ್ಠ ಆಟಗಾರನಾಗಿ ಸುಟ್ಟುಹೋದ ಮನೆಗಿಂತ ಉತ್ತಮ ಮನೆಯನ್ನು ಕಟ್ಟಲಿ. ಜನಾಂಗೀಯ ಹಿಂಸೆ ದೂರವಾಗಲಿ ಎಂಬುದೇ ಹಾರೈಕೆ.


administrator