Thursday, November 21, 2024

ಸಗಣಿಯ ಭೆರಣಿಯಲ್ಲಿ ಒಣಗಿದ ಅಂಗಣ!

ಪಾಟ್ನಾದ ಮೊಯಿನ್ ಉಲ್ ಹಕ್ ಕ್ರೀಡಾಂಗಣದಲ್ಲಿ ಕರ್ನಾಟಕ ಹಾಗೂ ಬಿಹಾರ ತಂಡಗಳ ನಡುವೆ ರಣಜಿ ಪಂದ್ಯ ನಡೆಯುತಿದ್ದು ಈ ಸಂದರ್ಭ ಮಳೆ ಬಂದು ಪಿಚ್ ಒದ್ದೆಯಾಯಿತು. ಪಿಚ್ ಒಣಗಿಸಲು ಕ್ರೀಡಾಂಗಣದ ಸಿಬ್ಬಂದಿ ಒಣಗಿದ ಸಗಣಿ ಬಳಸಿರುವ ಘಟನೆ ನಡೆದಿದೆ. Cow dung fire used to dry the pitch.
ಹಿಂದೆ ಸಗಣಿಯನ್ನು ಭೆರಣಿ ಮಾಡಿ, ಒಣಗಿದ ಬಳಿಕ ಉರುವಲಾಗಿ ಬಳಸುತಿದ್ದರು. ಈಗ ಈ ಪದ್ಧತಿ ಇಲ್ಲವಾಗಿದೆ.
ಕಳೆದ ವಾರ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಪಿಚ್ ಒಣಗಿಸಲು ಫ್ಯಾನ್ ಬಳಸಿರುವುದು ಸಾಕಷ್ಟು ಸುದ್ದಿಯಾಗಿತ್ತು. ಜಗತ್ತಿನ ಶ್ರೀಮಂತ ಕ್ರೀಡಾ ಸಂಸ್ಥೆಯಾಗಿರುವ ಬಿಸಿಸಿಐ ಅಂತಾರಾಷ್ಟ್ರೀಯ ಕ್ರೀಡಾಂಗಣಗಳಲ್ಲಿ ಕೆಲವು ಕ್ರೀಡಾಂಗಣಗಳ ಬಗ್ಗೆ ಮಾತ್ರ ಮುತುವರ್ಜಿ ವಹಿಸುತ್ತಿದೆ, ಆದರೆ ದೇಶದಲ್ಲಿರುವ ಇತರ ಕ್ರೀಡಾಂಗಣಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಜಗತ್ತಿನ ಅತಿದೊಡ್ಡ ಕ್ರಿಕೆಟ್ ಅಂಗಣವಾಗಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲೂ ಅಂಗಣದಲ್ಲಿರುವ ನೀರನ್ನು ತೆಗೆಯಲು ಬಟ್ಟೆ ಮತ್ತು ಬಕೆಟ್ ಬಳಸಿದ್ದನ್ನು ಮತೆಯುವಂತಿಲ್ಲ.
ಕರ್ನಾಟಕದ ವಿರುದ್ಧ ಬಿಹಾರ ಮೊದಲ ಇನ್ನಿಂಗ್ಸ್ ನಲ್ಲಿ 143 ಕ್ಕೆ ಆಲೌಟ್ ಆಗಿತ್ತು. ಕರ್ನಾಟಕ ಬ್ಯಾಟಿಂಗ್ ವಿಕೆಟ್ ನಷ್ಟವಿಲ್ಲದೆ 16 ರನ್ ಗಳಿಸಿತ್ತು. ಮಳೆಯಿಂದಾಗಿ ಎರಡನೇ ದಿನ ಆಟ ನಡೆಯಲಿಲ್ಲ.

Related Articles