Friday, December 27, 2024

ನ.30 ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವೃತ್ತಿಪರ ಬಾಕ್ಸಿಂಗ್‌

SportsMail Desk: ಜಾಗತಿಕ ಕ್ರೀಡೆಯಲ್ಲಿ ಬೆಂಗಳೂರಿಗೆ ಉನ್ನತ ಸ್ಥಾನವಿದೆ. ಏಕೆಂದರೆ ಇಲ್ಲಿ ನಡೆಯುತ್ತಿರುವ ಕ್ರೀಡಾ ಚಟುವಟಿಕಗಳೇ ಕಾರಣ. ಭಾರತದಲ್ಲಿ ನಡೆಯುತ್ತಿರುವ ಹೆಚ್ಚಿನ ವೃತ್ತಿಪರ ಲೀಗ್‌ಗಳು ಹುಟ್ಟಿಕೊಂಡಿದ್ದೇ ಬೆಂಗಳೂರಿನಲ್ಲಿ. ಯಾವುದೇ ಕ್ರೀಡೆಯಲ್ಲಿ ಲೀಗ್‌ ನಡೆದರೂ ಬೆಂಗಳೂರಿನ ಹೆಸರಿನಲ್ಲಿ ಒಂದು ತಂಡ ಇದ್ದೇ ಇರುತ್ತದೆ. ಈ ಶ್ರೇಷ್ಠತೆಯ ಗರಿಮೆಗೆ ಮತ್ತೊಂದು ಕಿರೀಟ ಅಂತಾರಾಷ್ಟ್ರೀಯ ವೃತ್ತಿಪರ ಬಾಕ್ಸಿಂಗ್‌. ಕ್ರೌನ್‌ ಬಾಕ್ಸಿಂಗ್‌ ಪ್ರಮೋಷನ್ಸ್‌ Crown Boxing Promotions ಮತ್ತು ಗ್ರಾಸ್‌ರೂಟ್‌ ಬಾಕ್ಸಿಂಗ್‌ Grassroot Boxing ಜಂಟಿಯಾಗಿ ಇದೇ ನವೆಂಬರ್‌ 30 ರಂದು ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ವೈಟ್‌ ಹೌಸ್‌ White House ನಲ್ಲಿ ಅತ್ಯಂತ ಉನ್ನತ ಮಟ್ಟದಲ್ಲಿ ಅಂತಾರಾಷ್ಟ್ರೀಯ ವೃತ್ತಿಪರ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ International Professional Boxing Championship ಆಯೋಜಿಸಿದೆ. Crown Boxing Promotion and Grassroot Boxing is set to host one of the largest International Professional Boxing event in Bengaluru on November 30.

ಆ ದಿನ ರಾತ್ರಿ ನಡೆಯುವ ಎರಡು ಪ್ರತಿಷ್ಠಿತ ಹೋರಾಟವು ಅಂತಾರಾಷ್ಟ್ರೀಯ ಟೈಟಲ್‌ ಫೈಟ್‌ ಆಗಿರುತ್ತದೆ. WBC ಯೂತ್ ‌ವರ್ಲ್ಡ್‌ ಟೈಟಲ್‌ ಮತ್ತು WBC ಇಂಡಿಯಾ ಟೈಟಲ್‌ ಪ್ರಶಸ್ತಿಗಾಗಿ ಹೋರಾಟ ನಡೆಯಲಿದೆ. ಭಾರತದ ಶ್ರೇಷ್ಠ ವೃತ್ತಿಪರ ಬಾಕ್ಸರ್‌ಗಳು ಜಗತ್ತಿನ ಇತರ ವೃತ್ತಿಪರ ಬಾಕ್ಸರ್‌ಗಳೊಂದಿಗೆ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಉಗಾಂಡ, ಘಾನಾ, ಥಾಯ್ಲೆಂಡ್‌ ಹಾಗೂ ಪಿಲಿಪ್ಪೈನ್ಸ್‌ನ ಬಾಕ್ಸರ್‌ಗಳು ಹೋರಾಟಕ್ಕಿಳಿಯಲಿದ್ದಾರೆ. ಭಾರತೀಯ ಬಾಕ್ಸಿಂಗ್‌ ಕೌನ್ಸಿಲ್‌ Indian Boxing Council (IBC) ಹಾಗೂ ವಿಶ್ವ ಬಾಕ್ಸಿಂಗ್‌ ಕೌನ್ಸಿಲ್‌ World Boxing Council (WBC) ಮಾನ್ಯತೆ ನೀಡಿದ ಫೈಟ್‌ ಇದಾಗಿದೆ.

ವೃತ್ತಿಪರ ಬಾಕ್ಸಿಂಗ್‌ VS ಹವ್ಯಾಸಿ ಬಾಕ್ಸಿಂಗ್‌: ವೃತ್ತಿಪರ ಬಾಕ್ಸಿಂಗ್‌ನಲ್ಲಿ ಬಾಕ್ಸರ್‌ಗಳು ಉತ್ತಮ ಪ್ರವರ್ತಕರ ಮೂಲಕ ಟೈಟಲ್‌ ಮತ್ತು ಮಾನ್ಯತೆಗಾಗಿ ಹೋರಾಡುತ್ತಾರೆ. ಇದು ಅತ್ಯಂತ ವೈಭವದಿಂದ ಕೂಡಿದ ಕಾರ್ಯಕ್ರಮವಾಗಿರುತ್ತದೆ. ಪ್ರೇಕ್ಷಕರು ಹಣ ನೀಡಿ ಈ ಹೋರಾಟಗಳನ್ನು ನೋಡುತ್ತಾರೆ. ಇಲ್ಲಿ ಚಾಂಪಿಯನ್‌ಷಿಪ್‌ ಬೆಲ್ಟ್‌ ಹಾಗೂ ಇತರ ಪುರಸ್ಕಾರಗಳು ಗೆದ್ದವರಿಗೆ ಸಿಗುತ್ತದೆ.

ಅಮೆಚೂರ್‌ ಅಥವಾ ಹವ್ಯಾಸಿ ಬಾಕ್ಸಿಂಗ್‌ ಎಂಬುದು ಹೆಸರೇ ಹೇಳುವಂತೆ ಪ್ರತಿಷ್ಠೆಗಾಗಿ ನಡೆಸುವ ಹೋರಾಟ. ವಿಶ್ವ ಚಾಂಪಿಯನ್‌ಷಿಪ್‌, ಏಷ್ಯನ್‌ ಚಾಂಪಿಯನ್‌ಷಿಪ್‌ ಹಾಗೂ ಒಲಿಂಪಿಕ್ಸ್‌ಗಳಲ್ಲಿ ಈ ಹೋರಾಟವನ್ನು ನಾವು ಕಾಣಬಹುದು. ಇಲ್ಲಿ ಕೌಶಲ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಹಾಗೂ ಆದರೆ ಇಲ್ಲಿ ಹಣಕಾಸಿನ ಲಾಭ ಕಡಿಮೆ ಇರುತ್ತದೆ. ಜಗತ್ತಿನ ಅನೇಕ ವೃತ್ತಿಪರ ಬಾಕ್ಸರ್‌ಗಳಿಗೆ ಈ ಹವ್ಯಾಸಿ ಬಾಕ್ಸಿಂಗ್‌ ಎಂಬುದು ತಳಪಾಯವಾಗಿರುತ್ತದೆ. ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಹವ್ಯಾಸಿ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಆ ಬಳಿಕ ವೃತ್ತಿಪರ ಬಾಕ್ಸರ್‌ ಆದುದ್ದನ್ನು ಇಲ್ಲಿ ಸ್ಮರಿಸಬಹುದು.

WBC ಯೂತ್‌ ವರ್ಲ್ಡ್‌ ಟೈಟಲ್‌: ಇದು ಯುವ ಫೈಟರ್‌ಗಳಿಗೆ ಮೊದಲ ಹೆಜ್ಜೆ. 18-23  ವಯೋಮಿತಿಯ ಬಾಕ್ಸರ್‌ಗಳಿಗೆ ಜಾಗತಿಕ ಮಟ್ಟದಲ್ಲಿ ಮಿಂಚಲು ಇದು ಉತ್ತಮ ವೇದಿಕೆ, ಭವಿಷ್ಯದ ವಿಶ್ವ ಚಾಂಪಿಯನ್‌ ಆಗಲು ಇದು ಮೊದಲ ಹೆಜ್ಜೆ. ಇಲ್ಲಿ ಗೆದ್ದವರು ಒಂದು ವರ್ಷ ಕಾಲ ಪ್ರಶಸ್ತಿಯನ್ನು ತಮ್ಮಲ್ಲಿ ಇರಿಸಿಕೊಳ್ಳುತ್ತಾರೆ. ಮತ್ತೆ ಗೆದ್ದರೆ ಮಾತ್ರ ಟೈಟಲ್‌ ಅವರಲ್ಲಿ ಇರುತ್ತದೆ. ಇಲ್ಲವಾದಲ್ಲಿ ಯಾರು ಗೆಲ್ಲುತ್ತಾರೆ ಅವರಿಗೆ ಚಾಂಪಿಯನ್‌ಪಟ್ಟ ಸಲ್ಲುತ್ತದೆ.

WBC ಇಂಡಿಯಾ ಟೈಟಲ್‌: ಇದು ಭಾರತದ ಶ್ರೇಷ್ಠ ಬಾಕ್ಸರ್‌ಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಗುವ ಶ್ರೇಷ್ಠ ಚಾಂಪಿಯನ್‌ ಪಟ್ಟವಾಗಿದೆ. ಭಾರತದ ಅಗ್ರ ಶ್ರೇಯಾಂಕದ ಬಾಕ್ಸರ್‌ಗಳು ಮಾತ್ರ ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ. ಈ ಟೈಟಲ್‌ ಒಂದು ವರ್ಷದ ಅವಧಿಗಿರುತ್ತದೆ.

ಭಾರತದಲ್ಲಿ ವೃತ್ತಿಪರ ಬಾಕ್ಸಿಂಗ್‌ ಅಭಿವೃದ್ಧಿ: ಭಾರತದಲ್ಲಿ ವೃತ್ತಿಪರ ಬಾಕ್ಸಿಂಗ್‌ ಕ್ಷಿಪ್ರ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಹವ್ಯಾಸಿ ಬಾಕ್ಸಿಂಗ್‌ನಲ್ಲಿ ಒಂದು ತೂಕದ ವಿಭಾಗದಲ್ಲಿ ಒಬ್ಬ ಬಾಕ್ಸರ್‌ ಮಾತ್ರ ಪಾಲ್ಗೊಳ್ಳಬಹುದು. ಇದೇ ತೂಕ ಹೊಂದಿರುವ ಬಾಕ್ಸರ್‌ಗಳು ಅವಕಾಶದಿಂದ ವಂಚಿತರಾಗುತ್ತಾರೆ. ಮೇರಿ ಕೋಮ್‌, ವಿಕಾಸ್‌ ಕೃಷ್ಣ ಹಾಗೂ ಶಿವ ಥಾಪ ಇವರ ಹೆಸರು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿತ್ತು. ಇವರದ್ದೇ ತೂಕ ಹೊಂದಿರುವ ಅನೇಕ ಪ್ರತಿಭಾವಂತ ಬಾಕ್ಸರ್‌ಗಳು ಅವಕಾಶದಿಂದ ವಂಚಿತರಾದರು. ವೃತ್ತಿಪರ ಬಾಕ್ಸಿಂಗ್‌ನಲ್ಲಿ ಒಂದು ತೂಕದಲ್ಲಿ ಎಷ್ಟು ಬಾಕ್ಸರ್‌ಗಳೂ ಪಾಲ್ಗೊಳ್ಳಬಹುದು. ಅವರು ಕೂಡ ಆರ್ಥಿಕ ಲಾಭ ಮತ್ತು ಸಾಮಾಜಿಕ ಗೌರವವನ್ನು ಗಳಿಸಬಹುದು.

Related Articles