ಅಖಿಲ ಭಾರತ ಕ್ರಾಸ್ ಕಂಟ್ರಿ ರೇಸ್‌ಗೆ ಉಪ್ಪಿನಂಗಡಿ ಸಜ್ಜು
ಉಪ್ಪಿನಂಗಡಿ: ಗ್ರಾಮೀಣ ಪ್ರದೇಶದಲ್ಲಿರುವ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಈ ತಿಂಗಳ 19 ರಂದು ದೇಶದ ಗಮನ ಸೆಳೆಯಲಿದೆ. ಏಕೆಂದರೆ ಇಲ್ಲಿ ಮೊದಲ ಬಾರಿಗೆ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಕ್ರಾಸ್ ಕಂಟ್ರಿ ರೇಸ್ ನಡೆಯಲಿದೆ. ಮಂಗಳೂರು ವಿಶ್ವವಿದ್ಯಾನಿಲಯ ಇದಕ್ಕೆ ಬೆನ್ನೆಲುಬಾಗಿ ನಿಂತಿದೆ. All India Inter University Cross Country race will be held on 19th November at Govt. First Grade College Uppinangadi.
ಕಾಲೇಜಿನ ಅಧ್ಯಕ್ಷರು ಹಾಗೂ ಶಾಸಕರಾದ ಅಶೋಕ್ ಕುಮಾರ್ ರೈ ಅವರು ಈ ಐತಿಹಾಸಿಕ ಕ್ರಾಸ್ ಕಂಟ್ರಿ ರೇಸ್‌ನ ಯಶಸ್ಸಿಗೆ ಬದ್ಧರಾಗಿರುವುದಾಗಿ ಹೇಳಿದ್ದಾರೆ.
ಹಲವಾರು ಕ್ರೀಡಾಕೂಟಗಳನ್ನು ಆಯೋಜಿಸಿ ರಾಜ್ಯದ ಕ್ರೀಡಾ ವಲಯದಲ್ಲಿ ಜನಪ್ರಿಯಗೊಂಡಿರುವ ಪ್ರಸಕ್ತ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಮಾರ್ ಅವರು ಈ ಕ್ರಾಸ್ ಕಂಟ್ರಿ ರೇಸ್‌ನ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ. ಈ ಐತಿಹಾಸಿಕ ಕ್ರಾಸ್ ಕಂಟ್ರಿ ರೇಶ್ ಬಗ್ಗೆ ಮಾಹಿತಿ ನೀಡಿದ ಪ್ರವೀಣ್ ಕುಮಾರ್, “ಇದು 10 ಕಿಮೀ ದೂರದ ಕ್ರಾಸ್ ಕಂಟ್ರಿ ರೇಸ್ ಆಗಿದ್ದು, ಮೊದಲ ಬಾರಿಗೆ ಉಪ್ಪಿನಂಗಡಿಯಲ್ಲಿ ನಡೆಯುತ್ತಿದೆ. ನಮಗೆ ಆತಿಥ್ಯ ವಹಿಸಲು ಅವಕಾಶ ಸಿಕ್ಕಿರುವುದು ಗಮನಾರ್ಹ. ಸುಮಾರು 1500 ಕ್ಕೂ ಹೆಚ್ಚು ಓಟಗಾರರು ಪಾಲ್ಗೊಳ್ಳಲಿದ್ದಾರೆ. ಆತಿಥ್ಯ ವಹಿಸಲು ದೇಶದ 11 ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳು ಅರ್ಜಿ ಸಲ್ಲಿಸಿದ್ದವು. ಆದರೆ ಉಪ್ಪಿನಂಗಡಿಗೆ ಈ ಭಾಗ್ಯ ಸಿಕ್ಕಿದೆ. ಕರ್ನಾಟಕದ ಸುಮಾರು ಮೂವತ್ತಕ್ಕೂ ಹೆಚ್ಚು ತಾಂತ್ರಿಕ ಅಧಿಕಾರಿಗಳು ಈ ರೇಸ್‌ನಲ್ಲಿ ನೆರವಿಗೆ ನಿಂತಿದ್ದಾರೆ,” ಎಂದು ಹೇಳಿದರು.
ಇದೇ ಮೊದಲ ಬಾರಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಓಟಗಾರನ ದಾಖಲೆಯನ್ನು ಚಿಪ್ ಮೂಲಕ ಕಂಪ್ಯೂಟರೀಕೃತಗೊಳಿಸಲಾಗುವುದು. 150 ವಿಶ್ವವಿದ್ಯಾನಿಲಯಗಳು ಪಾಲ್ಗೊಳ್ಳುತ್ತಿದ್ದು. ಒಂದು ವಿಶ್ವವಿದ್ಯಾನಿಲಯದಿಂದ 6 ಓಟಗಾರರನ್ನೊಳಗೊಂಡ ತಂಡ ಪಾಲ್ಗೊಳ್ಳಲಿದೆ.
19 ರ ಮಧ್ಯಾಹ್ನ 2 ಗಂಟೆಗೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಿಂದ ಕ್ರೀಡಾಜ್ಯೋತಿ ಹೊರಟು ಕಾಲೇಜು ಕ್ರೀಡಾಂಗಣಕ್ಕೆ ಆಗಮಿಸಲಿದೆ. ಅಪರಾಹ್ನ 4 ಗಂಟೆಗೆ ಕ್ರೀಡಾಕೂಟ ಉದ್ಘಾಟನೆಗೊಳ್ಳಲಿದೆ. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಡಾ. ರಾಜರಾಮ್ ಕೆ.ಬಿ, ಕಾಲೇಜಿನ ಪ್ರಾಂಶುಪಾಲ ಶೇಖರ್ ಹಾಗೂ ಉಪನ್ಯಾಸಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯ್ಕ್, ಸದಸ್ಯರಾದ ಕೃಷ್ಣರಾವ್ ಅರ್ತಿಲ, ದೇವದಾಸ್ ರೈ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಅಶ್ರಫ್ ಬಸ್ತಿಕ್ಕಾರ್, ವಿನ್ಸೆಂಟ್ ಫೆರ್ನಾಂಡೀಸ್, ಯು.ಟಿ, ತೌಸಿಫ್, ಶಾಂಭವಿ ರೈ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಅಜೀಜ್ ಬಸ್ತಿಕ್ಕಾರ್, ಜಯಂತ ಪೊರೋಳಿ, ಇಸ್ಮಾಯಿಲ್ ಇಕ್ಬಾಲ್, ಅನಿ ಮಿನೇಜಸ್, ಅಬ್ದುರ್ ರೆಹಮಾನ್ ಯುನಿಕ್, ವಿಕ್ರಂ ಶೆಟ್ಟಿ ಅಂತರ, ಅಬ್ದುಲ್ ರಶೀದ್, ಚಂದಪ್ಪ ಮೂಲ್ಯ, ಆದಂ ಕೊಪ್ಪಳ, ಜಾನ್ ಕೆನ್ಯೂಟ್, ರವೀಂದ್ರ ದರ್ಜೆ, ಅನುರಾಧ ಶೆಟ್ಟಿ, ಕೈಲಾರ್ ರಾಜ್‌ಗೋಪಾಲ್ ಭಟ್, ಶರಿಕ್ ಅರಾಫಾ, ಯು,. ರಾಮ, ನಝೀರ್ ಮಠ ಮೊದಲಾದವರು ಈ ಐತಿಹಾಸಿಕ ಕ್ರಾಸ್ ಕಂಟ್ರಿ ರೇಸ್‌ನ ಯಶಸ್ಸಿಗಾಗಿ ಶ್ರಮಿಸಲಿದ್ದಾರೆ.