ಮಾಜಿ ವಿಶ್ವ ಚಾಂಪಿಯನ್‌ಗೆ ಆಘಾತ ನೀಡಿದ ಕಾರ್ಕಳದ ಆಯುಷ್ ಶೆಟ್ಟಿ
ಬೆಂಗಳೂರು: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಆರ್ಲೇನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಉಡುಪಿ ಜಿಲ್ಲೆಯ ಕಾರ್ಕಳದ ಆಯುಷ್ ಶೆಟ್ಟಿ ಮಾಜಿ ವಿಶ್ವ ಚಾಂಪಿಯನ್ ಸಿಂಗಾಪುರದ ಲೋಹ್ ಕೇನ್ ಯೆವ್ ವಿರುದ್ಧ ಜಯ ಗಳಿಸಿ ಬ್ಯಾಡ್ಮಿಂಟನ್ ಜಗತ್ತಿನಲ್ಲಿ ಅಚ್ಚರಿ ಮೂಡಿಸಿದ್ದಾರೆ. Aayush Shetty stuns former world champion Loh Kean Yew of Singapore at Orleans Masters Badminton Championship.
19 ವರ್ಷದ ಆಯುಷ್ ಶೆಟ್ಟಿ 32ನೇ ಸುತ್ತಿನ ಪಂದ್ಯದಲ್ಲಿ ನೇರ ಗೇಮ್‌ಗಳಿಂದ ಜಯ ಗಳಿಸಿದ್ದಾರೆ. 2021ರಲ್ಲಿ ವಿಶ್ವ ಚಾಂಪಿಯನ್ ಪಟ್ಟ ಗೆದ್ದಿದ್ದ ಕೇನ್ ಯೆವ್ ಅವರನ್ನು ಆಯುಷ್ 36 ನಿಮಿಷಗಳ ಹೋರಾಟದಲ್ಲಿ 21-17, 21-19 ಅಂತರದಲ್ಲಿ ಮಣಿಸಿ ನೆರೆದ ಪ್ರೇಕ್ಷಕರನ್ನು ದಿಗ್ಭ್ರಮೆಗೊಳಿಸಿದರು.
2023ರ ಜೂನಿಯರ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಆಯುಷ್ ಶೆಟ್ಟಿ ಮೊದಲ ಗೇಮ್‌ನಲ್ಲಿ 4-1 ಅಂತರದಲ್ಲಿ ಮುನ್ನಡೆ ಕಂಡಿದ್ದರು, ಆದರೆ ಲೋಹ್ ಮುನ್ನಡೆ ಸಾಧಿಸಿದರು. ಮೊದಲ ಗೇಮ್ ಅತ್ಯಂತ ರೋಚಕವಾಗಿ ನಡೆದಿತ್ತು ಪ್ರತಿಯೊಂದು ಹಂತದಲ್ಲೂ ಆಯುಷ್ ಉತ್ತಮ ರೀತಿಯ ಪೈಟೋಟಿ ನೀದ್ದರು. ಒಂದು ಹಂತದಲ್ಲಿ ಗೇಮ್ 9-9ರಲ್ಲಿ ಸಮಬಲ ಕಂಡಿತ್ತು., ಬಳಿಕ 12-12 ಅಂತರದಲ್ಲಿ ಸಮಬಲ ಕಂಡಿತ್ತು. ಆದರೆ ಆಯುಷ್ ಒಂದು ಹಂತದಲ್ಲಿ 14-13 ಅಂತರದಲ್ಲಿ ಮುನ್ನಡೆದು ಮತ್ತೆ ಹಿಂದಿರುಗಿ ನೋಡಲಿಲ್ಲ. ಅಂತಿಮವಾಗಿ 21-17 ಅಂತರದಲ್ಲಿ ಜಯ ಗಳಿಸಿ ಗೇಮ್ ತಮ್ಮದಾಗಿಸಿಕೊಂಡರು.
ಎರಡನೇ ಗೇಮ್‌ನಲ್ಲಿ ಆಯುಷ್ ಆರಂಭದಲ್ಲೇ ಮುನ್ನಡೆ ಕಾಯ್ದುಕೊಂಡರು, 11-2 ಮೇಲುಗೈ ಸಾಧಿಸುವ ಮೂಲಕ ಪಂದ್ಯದಲ್ಲಿ ಜಯ ಗಳಿಸುವದನ್ನು ಖಚಿತಪಡಿಸಿಕೊಂಡರು.