Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಬಂದ ನೋಡಿ ABD, 28 ಬಾಲ್‌ಗೆ ಸೆಂಚುರಿ, ಸ್ಟ್ರೈಕ್‌ ರೇಟ್‌ 360!

ಹೊಸದಿಲ್ಲಿ: ಕ್ರಿಕೆಟ್‌ ಜಗತ್ತಿನ ಸ್ಫೋಟಕ ಆಟಗಾರ ದಕ್ಷಿಣ ಆಫ್ರಿಕಾದ ಎ ಬಿ ಡಿವಿಲಿಯರ್ಸ್‌ ಕ್ರಿಕೆಟ್‌ಗೆ ವಿದಾಯ ಹೇಳಿ ನಾಲ್ಕು ವರ್ಷಗಳೇ ಕಳೆದವು. ಆದರೆ ಅವರಲ್ಲಿರುವ ಆ ಸ್ಫೋಟಕ ಬ್ಯಾಟಿಂಗ್‌ ಶಕ್ತಿ ಇನ್ನೂ ವಿರಮಿಸಲಿಲ್ಲ. ಭಾನುವಾರ ಸೆಂಚೂರಿಯನ್‌ ಅಂಗಣದಲ್ಲಿ ನಡೆದ ಪಂದ್ಯವೊಂದರಲ್ಲಿ Mr 360 ಎಂದೇ ಖ್ಯಾತರಾಗಿರುವ ಎಬಿಡಿ 28 ಎಸೆತಗಳಲ್ಲಿ ಶತಕ ಸಿಡಿಸಿ ಅಚ್ಚರಿ ಮೂಡಿಸಿದ್ದಾರೆ. AB de Villiers Smashes 101 off 28 With 15 Sixes in Legends Game

ಬುಲ್‌ ಲೆಜೆಂಡ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಟೈಟಾನ್‌ ಲೆಜೆಂಡ್ಸ್‌ ಪರ ಅಂಗಣಕ್ಕಿಳಿದ ಎಬಿಡಿ 28 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. 2021ರಲ್ಲಿ ನಿವೃತ್ತಿ ಘೋಷಿಸಿದ್ದ ಎಬಿಡಿ 15 ಸಿಕ್ಸರ್‌ ಸಿಡಿಸಿದ್ದಾರೆ. ಎರಡು ಎಸೆತಗಳು ಮಾತ್ರ ಡಾಟ್‌. ಇದರಿಂದಾಗಿ ಟೈಟಾನ್‌ ಲೆಜೆಂಡ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 278 ರನ್‌ ಗಳಿಸಿತು. ಎಬಿಡಿ ತನ್ನದೇ ದಾಖಲೆಯನ್ನು ಮುರಿದಿರುವುದು ವಿಶೇಷ. ಎಲ್ಲಕ್ಕಿಂತ ಮುಖ್ಯವಾಗಿ ಅವರ ಸ್ಟ್ರೈಕ್‌ ರೇಟ್‌ 360.


administrator