Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಅಭಿಷೇಕ್‌ ಶರ್ಮಾಗೆ 38 ರನ್‌ ಅಂತರದಲ್ಲಿ ಶರಣಾದ ಇಂಗ್ಲೆಂಡ್‌!

ಮುಂಬಯಿ: ಭಾರತ ಕ್ರಿಕೆಟ್‌ ತಂಡ ಇಂಗ್ಲೆಂಡ್‌ ವಿರುದ್ಧ 150 ರನ್‌ ಅಂತರದಲ್ಲಿ ಜಯ ಗಳಿಸಿರುವುದು ಎಲ್ಲರಿಗೂ ತಿಳಿದ ವಿಷಯ. ಆದರೆ ಭಾರತದ ವಿಯಷ ಬದಿಗಿಟ್ಟು ಯೋಚಿಸಿದರೆ ಇಂಗ್ಲೆಂಡ್‌ ತಂಡ ಅಭಿಷೇಕ್‌ ಶರ್ಮಾ ವಿರುದ್ಧ 38 ರನ್‌ ಅಂತರದಲ್ಲಿ ಸೋಲನುಭವಿಸಿದೆ. Abhishek Sharma Defeated England by 38 runs at Wankhede.

ಇದು ಇಂಗ್ಲೆಂಡ್‌ ವಿರುದ್ಧ ಭಾರತ ಐದನೇ ಟಿ20 ಪಂದ್ಯದಲ್ಲಿ ಗೆದ್ದ ನಂತರ ಭಾರತದ ಕ್ರಿಕೆಟ್‌ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ನೀಡಿದ ಹೊದ ಹೆಡ್ಡಿಂಗ್.‌ ಅಭಿಷೇಕ್‌ ಶರ್ಮಾ ದಾಖಲೆಯ 135 ರನ್‌ ಗಳಿಸಿದರು. 93 ನಿಮಿಷಗಳ ಕಾಲ ಕ್ರೀಸಿನಲ್ಲಿದ್ದ ಅಭಿಷೇಕ್‌ 54 ಎಸೆತಗಳನ್ನೆದುರಿಸಿ 7 ಬೌಂಡರಿ ಹಾಗೂ 13 ಸಿಕ್ಸರ್‌ ನೆರವಿನಿಂದ 135 ರನ್‌ ಸಿಡಿಸಿ ಹಲವಾರು ದಾಖಲೆಗಳನ್ನು ನಿರ್ಮಿಸಿದರು. ಭಾರತ ಅಂತಿಮವಾಗಿ 9 ವಿಕೆಟ್‌‌ ನಷ್ಟಕ್ಕೆ 247 ರನ್‌ ಗಳಿಸಿತು. ಇಂಗ್ಲೆಂಡ್‌ ತಂಡ 10.1 ಓವರ್‌ಗಳಲ್ಲಿ ಕೇವಲ 97 ರನ್‌ ಗಳಿಸಿ 150 ರನ್‌ ಅಂತರದಲ್ಲಿ ಸೋಲೊಪ್ಪಿಕೊಂಡಿತು. ಒಂದೆಡೆ ಇಂಗ್ಲೆಂಡ್‌ 150 ರನ್‌ ಅಂತರದಲ್ಲಿ ಭಾರತಕ್ಕೆ ಸೋತರೆ, ಇನ್ನೊಂದೆಡೆ 38 ರನ್‌ ಅಂತರದಲ್ಲಿ ಅಭಿಷೇಕ್‌ ಶರ್ಮಾಗೆ ಶರಣಾಗಿದೆ. ಬೌಲಿಂಗ್‌ನಲ್ಲೂ ಮಿಂಚಿದ ಅಭಿಷೇಕ್‌ 1 ಓವರ್‌ನಲ್ಲಿ ಕೇವಲ 3 ರನ್‌ ನೀಡಿ 2 ವಿಕೆಟ್‌ ಗಳಿಸಿದರು.  ಇಂಗ್ಲೆಂಡ್‌ ಅಭಿಷೇಕ್‌ ಶರ್ಮಾ ಅವರು ಗಳಿಸಿದಷ್ಟು ರನ್‌ ಗಳಿಸಿಲ್ಲ ಎಂಬುದು ಕ್ರಿಕೆಟ್‌ ಅಭಿಮಾನಿಳ ಲೆಕ್ಕಾಚಾರ. ಆದರೆ ಈ ಲೆಕ್ಕಾಚಾರ ಕೇವಲ ಅಭಿಮಾನಿಗಳಿಗೆ ಮಾತ್ರ. ಭಾರತ ತಂಡ ಇಂಗ್ಲೆಂಡ್‌ ವಿರುದ್ಧ 150 ರನ್‌ ಅಂತರದಲ್ಲಿ ಗೆದ್ದಿರುವುದು ಅಧಿಕೃತ.


administrator