Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಐಐಟಿ ಬಾಬಾನ ಪ್ರಕಾರ ಭಾರತ ತಂಡ ಪಾಕ್‌ ವಿರುದ್ಧ ಸೋಲುತ್ತದೆ!

ಹೊಸದಿಲ್ಲಿ: ಕುಂಭಮೇಳದ ಮೂಲಕ ಬೆಳಕಿಗೆ ಬಂದ ಐಐಟಿ ಬಾಬಾ ಯಾನೆ ಅಭೇ ಸಿಂಗ್‌ ಭಾನುವಾರ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿಯ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಸೋಲುತ್ತದೆ ಎಂದು ಭವಿಷ್ಯ ಹೇಳಿರುವ ವೀಡಿಯೋ ವೈರಲ್‌ ಆಗಿದೆ. ಬಾಬಾ ತನ್ನ X ಖಾತೆಯಲ್ಲಿ ಹೇಳಿದ್ದಾನೆ. According IIT Baba Indian will lose the match against Pakistan.

ಈ ಬಾಬಾ ಹಿಂದೆ 2024ರಲ್ಲಿ ಭಾರತ ಟಿ20 ವಿಶ್ವಕಪ್‌ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿರುವುದು ನಿಜವಾಗಿದೆ. ವಿರಾಟ್‌ ಕೊಹ್ಲಿ ಜಯಕ್ಕಾಗಿ ಉತ್ತಮವಾಗಿ ಆಡುತ್ತಾರೆ ಆದರೆ ಜಯ ಕಷ್ಟವಿದೆ ಎಂದು ಬಾಬಾ ಹೇಳಿದ್ದಾನೆ. “ನಾನು ನಿನಗೆ ಮೊದಲೇ ಹೇಳುತ್ತಿದ್ದೇನೆ, ಈ ಸಲ ಭಾರತ ಗೆಲ್ಲೊಲ್ಲ, ನಾನು ಹೇಳುತ್ತಿದ್ದೇನೆ ಈ ಬಾರಿ ಭಾರತ ಗೆಲ್ಲೊಲ್ಲ, ದೇವರು ದೊಡ್ಡವನಾ ಇಲ್ಲಾ ನೀನಾ?” ಎಂದು ಬಾಬಾ ತನ್ನನ್ನು ತಾನು ದೇವರೆಂದು ಬಿಂಬಿಸಿಕೊಂಡಿದ್ದಾನೆ.

ಬಾಬಾ ಕ್ರಿಕೆಟ್‌ ಬಗ್ಗೆ ಹೇಳಿರುವುದು ಇದೇ ಮೊದಲಲ್ಲ, 2024ರ ವಿಶ್ವಕಪ್‌ ಗೆಲ್ಲುವಲ್ಲಿ ಈ ಬಾಬಾನ ಪಾತ್ರ ಪ್ರಮುಖವಾಗಿತ್ತಂತೆ. ಸಂಜ್ಞೆಗಳ ಮೂಲಕ ಕ್ರಿಕೆಟಿಗರಿಗೆ ಈತ ಸಂದೇಶ ರವಾನಿಸಿ ಪ್ರಭಾವ ಬೀರುತ್ತಾನಂತೆ. ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಮಾಡುವಾಗ ಈ ಬಾಬಾ ಪ್ರಭಾವ ಬೀರಿದ್ದಾನಂತೆ. ಮೊಬೈಲ್‌ ಟವರ್ಸ್‌, ಕ್ಯಾಮೆರಾ ಹಾಗೂ ಕೆಲವು ಕೋಡಿಂಗ್‌ ಮೂಲಕ ಸಂಜ್ಞೆಗಳನ್ನು ರವಾನಿಸುತ್ತಿರುವುದಾಗಿ ಹೇಳಿದ್ದಾನೆ.


administrator