Sunday, September 8, 2024

ಅಫಘಾನಿಸ್ತಾನ ವಿಶ್ವಕಪ್‌ ಗೆದ್ದಾಯ್ತು!!!!

ಚೆನ್ನೈ:  ಮೊದಲು ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ಧ 69 ರನ್‌ ಜಯ, ಇಂದು ಮಾಜಿ ಚಾಂಪಿಯನ್‌ ಪಾಕಿಸ್ತಾನದ ವಿರುದ್ಧ 8 ವಿಕೆಟ್‌ ಜಯ. ಅಫಘಾನಿಸ್ತಾನ ಮುಂದಿನ ಪಂದ್ಯಗಳಲ್ಲಿ ಯಾವ ರೀತಿಯ ಫಲಿತಾಂಶ ಕಾಣಲಿದೆಯೋ ಗೊತ್ತಿಲ್ಲ. ಆದರೆ ಈ ಎರಡು ಐತಿಹಾಸಿಕ ಜಯಗಳ ಮೂಲಕ ಅಫಘಾನಿಸ್ತಾನ ಕ್ರಿಕೆಟ್‌ ಜಗತ್ತಿನ ಮನ ಗೆದ್ದಿದೆ. ಈ ಜಯ ವಿಶ್ವಕಪ್‌ ಗೆದ್ದಷ್ಟೇ ಸಂಭ್ರಮ ತರುವ ಜಯ. Afghanistan Already won the world cup

ಶಿಸ್ತಿನ ಬ್ಯಾಟಿಂಗ್‌ ಪ್ರದರ್ಶಿಸಿ ಅಫಘಾನಿಸ್ತಾನ 283 ರನ್‌ಗಳ ಗುರಿಯನ್ನು ಇನ್ನೂ ಒಂದು ಓವರ್‌ ಬಾಕಿ ಇರುವಾಗಲೇ ಕೇವಲ 2 ವಿಕೆಟ್‌ ಕಳೆದುಕೊಂಡು ತಲುಪಿತು. ಶೇನ್‌ ಶಾ ಅಫ್ರಿದಿ ಎಸೆದ 49ನೇ ಓವರ್‌ನ ಕೊನೆಯ ಎಸೆತವನ್ನು ಅಫ್ಘಾನ್‌ ನಾಯಕ ಹಸ್ಮತ್‌ಉಲ್ಲಾ ಶಾಹಿದಿ ಬೌಂಡರಿಗೆ ಅಟ್ಟುವ ಮೂಲಕ ಚೆನ್ನೈ ಚೆಪಾಕ್‌ ಅಂಗಣಲ್ಲಿ ಇತಿಹಾಸ ನಿರ್ಮಾಣವಾಯಿತು. ಅಫಘಾನಿಸ್ತಾನ ಮೊದಲ ಬಾರಿಗೆ ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ಜಯ ದಾಖಲಿಸಿತು. ಅಲ್ಲದೆ ಬಾಬರ್‌ ಅಜಾಮ್‌ ಪಡೆಯ ಸೆಮಿಫೈನಲ್‌ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿತು. ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಜಿಗಿಯಿತು.

ಪಾಕಿಸ್ತಾನ ನೀಡಿದ 282 ರನ್‌ಗಳ ಸವಾಲಿನ ಮೊತ್ತವನ್ನು ಬೆಂಬತ್ತಿದ ಅಫಘಾನಿಸ್ತಾನ ಜಗತ್ತಿನ ಶ್ರೇಷ್ಠ ತಂಡದಂತೆಯೇ ಬ್ಯಾಟಿಂಗ್‌ ಪ್ರದರ್ಶಿಸಿತು. ರಹಮತ್‌ಉಲ್ಲಾ ಗುರ್ಬಜ್‌ (65), ಇಬ್ರಾಹಿಂ ಜರ್ದಾನ್‌ (87), ರಹಮತ್‌ ಶಾ (77*) ಹಾಗೂ ನಾಯಕ ಹಸ್ಮತ್‌ಉಲ್ಲಾ ಶಾಹಿದಿ (48*) ಐತಿಹಾಸಿಕ ಜಯದಲ್ಲಿ ಪ್ರಮುಖ ಪಾತ್ರವಹಿಸಿ 286 ರನ್‌ ದಾಖಲಿಸಿದರು. ಜರ್ದಾನ್‌ ಅವರ ಆರಂಭಿಕ ಅರ್ಧಶತಕ ಅವರಿಗೆ ಪಂದ್ಯಶ್ರೇಷ್ಠ ಗೌರವ ನೀಡಿತಾದರೂ ಇಲ್ಲಿ ಇಡೀ ತಂಡವೇ ಪಂದ್ಯಶ್ರೇಷ್ಠರು. 283 ರನ್‌ ಅಫಘಾನಿಸ್ತಾನದ ಕ್ರಿಕೆಟ್‌ ಇತಿಹಾಸದಲ್ಲೇ ಗರಿಷ್ಠ ಚೇಸ್‌.

Related Articles