ಆಯ್ಕೆ ಸಮಿತಿಗೆ ಸ್ಪಷ್ಟ ಸಂದೇಶ ರವಾನಿಸಿದ ಕರುಣ್ ನಾಯರ್
ನಾಗ್ಪುರ: ಕೇರಳ ವಿರುದ್ಧದ ರಣಜಿ ಫೈನಲ್ ಪಂದ್ಯದಲ್ಲಿ ವಿದರ್ಭದ ಆಟಗಾರ ಕರ್ನಾಟಕದ ಕರುಣ್ ನಾಯರ್ ಶತಕ (132*) ಸಿಡಿಸುವ ಮೂಲಕ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಇಷ್ಟಾಗಿಯೂ ಕರ್ನಾಟಕದ ಈ ಆಟಗಾರನಿಗೆ ಭಾರತ ತಂಡದಲ್ಲಿ ಸ್ಥಾನ ಸಿಗಲಿಲ್ಲವೆಂದರೆ ಕರುಣ್ ನಾಯರ್ ಯಾವ ತೀರ್ಮಾನವನ್ನು ಕೈಗೊಳ್ಳಬಹುದು? ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳ ಮುಂದಿದೆ. ಭಾರತದಲ್ಲಿ ಕ್ರಿಕೆಟ್ ಋತು ಮುಗಿದ ಬಳಿಕ ಕರುಣ್ ಕೌಂಟಿಯಲ್ಲಿ ಆಡಲಿದ್ದಾರೆ. After hitting the century in Ranji final match Karun Nair sent clear message to the selectors.
ವಿದರ್ಭ ನಾಲ್ಕನೇ ದಿನದಲ್ಲಿ 7 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಅಂಗಣಕ್ಕಿಳಿದ ಕರುಣ್ ನಾಯರ್ 31 ರನ್ ಗಳಿಸಿ ಆಡುತ್ತಿದ್ದಾಗ ಕೇರಳದ ಫೀಲ್ಡರ್ ಕ್ಯಾಚ್ ಕೈಚೆಲ್ಲಿ ತಪ್ಪು ಮಾಡಿದರು. ಕರುಣ್ ನಾಯರ್ 280 ಎಸೆತಗಳನ್ನೆದುರಿಸಿ 10 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 132 ರನ್ ಕೊಡುಗೆ ನೀಡಿ ತಂಡವನ್ನು ಸುಸ್ಥಿತಿಗೆ ತಂದರು.
ಮೊದಲ ಇನ್ನಿಂಗ್ಸ್‌ನಲ್ಲಿ 86 ರನ್ ಗಳಿಸಿ ಆಡುತ್ತಿರುವಾಗ ರನೌಟ್ ಆಗಿದ್ದ ಕರುಣ್ ನಾಯರ್ ಎರಡನೇ ಇನ್ನಿಂಗ್ಸ್‌ನಲ್ಲಿ ತಂಡಕ್ಕೆ ಅಗತ್ಯವಿರುವ ಶತಕ (132*) ಪೂರ್ಣಗೊಳಿಸಿ ಪ್ರಸಕ್ತ ಋತುವಿನಲ್ಲಿ 9ನೇ ಶತಕ ದಾಖಲಿಸಿದರು. ಮಾತ್ರವಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 23ನೇ ಶತಕ ಪೂರ್ಣಗೊಳಿಸಿದ ಅಜೇಯರಾಗಿ ಉಳಿದಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ 379 ರನ್ ಗಳಿಸಿದ್ದ ವಿದರ್ಭ, ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿ ಒಟ್ಟು 286 ರನ್ ಮುನ್ನಡೆ ಕಂಡಿದೆ. ಭಾನುವಾರ ಅಂತಿಮ ದಿನವಾಗಿದ್ದು ವಿದರ್ಭ ಮೂರನೇ ಬಾರಿಗೆ ರಣಜಿ ಚಾಂಪಿಯನ್ ಪಟ್ಟ ಗೆಲ್ಲಲು ಸಜ್ಜಾಗಿದೆ. ಕೇರಳ ಮೊದಲ ಇನ್ನಿಂಗ್ಸ್‌ನಲ್ಲಿ 342 ರನ್ ಗಳಿಸಿತ್ತು.
ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಹಾಗೂ ಭಾರತ ಕ್ರಿಕೆಟ್ ತಂಡದ ಉಪನಾಯಕ ಶುಭ್ಮನ್ ಗಿಲ್ ಅವರು ಕರುಣ್ ನಾಯರ್ ಆಯ್ಕೆ ವಿಷಯದಲ್ಲಿ ನೀಡಿರುವ ಹೇಳಿಕೆ ಬಾಲಿಶವಾದುದು. ಇದೇ ಪ್ರದರ್ಶನವನ್ನು ಮುಂಬೈಯ ಒಬ್ಬ ಆಟಗಾರ ತೋರಿಸಿರುತ್ತಿದ್ದರೆ ಇಷ್ಟರಲ್ಲಿ ಭಾರತ ತಂಡದಲ್ಲಿ ಮತ್ತೆ ಅವಕಾಶ ಪಡೆದಿರುತ್ತಿದ್ದರು. ಈ ಬಾರಿ ಕರುಣ್ ನಾಯರ್ ಅವರನ್ನು ಹೇಗಾದರೂ ಮಾಡಿ ಭಾರತ ತಂಡದಲ್ಲಿ ಸ್ಥಾನ ನೀಡಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಕರುಣ್ ಪ್ರತಿಯೊಂದು ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಇಷಾದರೂ ಕರುಣ್ ನಾಯರ್‌ಗೆ ಆಯ್ಕೆ ಸಮಿತಿ ಪಂದ್ಯಗಳಲ್ಲಿ (ಟೆಸ್ಟ್ ಅಥವಾ ಏಕದಿನ) ಅವಕಾಶ ನೀಡಿಲ್ಲವೆಂದರೆ ಕರುಣ್ ಈ ದೇಶವನ್ನೇ ಬಿಟ್ಟು ಯಾವುದಾದರೂ ಬೇರೆ ದೇಶದ ಪರ ಆಡುವುದೇ ಉತ್ತಮ.