sportsmail
ವಾಯುಪಡೆ ಕ್ರೀಡಾ ನಿಯಂತ್ರಣ ಮಂಡಳಿ (ಎಎಫ್‌ಎಸ್‌ಸಿಬಿ) ಮತ್ತು ಟ್ರೈನಿಂಗ್ ಕಮಾಂಡ್ ಐಎಎಫ್ ಪ್ರಧಾನ ಕಚೇರಿ ಇವರ ಆಶ್ರಯದಲ್ಲಿ ಏರ್ ಫೋರ್ಸ್ ಸ್ಟೇಷನ್ ಜಾಲಹಳ್ಳಿಯ ಭಿಮ್‌ಸಿಂಗ್ ರಾಮ್ ಮೆಹರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಏರ್‌ಫೋರ್ಸ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ನೈಋತ್ಯ ಏರ್ ಕಮಾಂಡ್ ಪ್ರಶಸ್ತಿ ಗೆದ್ದುಕೊಂಡಿದೆ.
ವಾಯುಪಡೆ ಬಾಸ್ಕೆಟ್‌ಬಾಲ್ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವುದು ಮತ್ತು ವಾಯು ಯೋಧರಲ್ಲಿ ಸ್ಪರ್ಧಾತ್ಮಕ ಸ್ಫೂರ್ತಿ ಮತ್ತು ಕ್ರೀಡಾಸ್ಫೂರ್ತಿಯನ್ನು ತುಂಬುವ ಸಲುವಾಗಿ ಈ ಚಾಂಪಿಯನ್ಷಿಪ್ ಆಯೋಜಿಸಲಾಗಿತ್ತು.
ಬಾಸ್ಕೆಟ್‌ಬಾಲ್ ಫೆಡರೇಷನ್ ಆಫ್ ಇಂಡಿಯಾ ಇದರ ನಿಯಮಾನುಸಾರ ನಡೆದ ಚಾಂಪಿಯನ್ಷಿಪ್‌ಗೆ ಎಎಫ್‌ಎಸ್ ಜಾಲಹಳ್ಳಿ ಇದರ ಸ್ಟೇಷನ್ ಕಮಾಂಡರ್, ಗ್ರೂಪ್ ಕ್ಯಾಪ್ಟನ್ ಅಕುಲ್ ಪ್ರಸಾದ್ ಚಾಲನೆ ನೀಡಿದರು.
ಪಾಲ್ಗೊಂಡ 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಎ ಗುಂಪಿನಲ್ಲಿ ವೆಸ್ಟರ್ನ್ ಏರ್ ಕಮಾಂಡ್, ಈಸ್ಟರ್ನ್ ಏರ್ ಕಮಾಂಡ್, ಸೆಂಟ್ರಲ್ ಏರ್ ಕಮಾಂಡ್ ಹಾಗೂ ಮೇಂಟೆನೆನ್ಸ್ ಏರ್ ಕಮಾಂಡ್ ತಂಡಗಳು ಸೇರಿದ್ದವು. ಬಿ ಗುಂಪಿನಲ್ಲಿ ಏರ್ ಹೆಡ್‌ಕ್ವಾರ್ಟರ್ಸ್, ಸದರ್ನ್ ಏರ್ ಕಮಾಂಡ್, ನೈಋತ್ಯ ಏರ್ ಕಮಾಂಡ್, ಮತ್ತು ಟ್ರೈನಿಂಗ್ ಕಮಾಂಡ್ ತಂಡಗಳು ಸೇರಿದ್ದವು.
ಫೈನಲ್ ಪಂದ್ಯವು ನೈಋತ್ಯ ಏರ್ ಕಮಾಂಡ್ ಮತ್ತು ಈಸ್ಟರ್ನ್ ಏರ್ ಕಮಾಂಡ್ ತಂಡಗಳ ನಡುವೆ ನಡೆಯಿತು. 89 ಅಂಕಗಳನ್ನು ಗಳಿಸಿದ ನೈಋತ್ಯ ಏರ್ ಕಮಾಂಡ್ ಪ್ರಶಸ್ತಿ ಗೆದ್ದುಕೊಂಡಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಏರ್ ವೈಸ್ ಮಾರ್ಷಲ್ ಪಿ,ಜೆ, ವಾಲಿಯಾ, ವಾಯುಪಡೆಯು ಅತ್ಯಂತ ಮುತುವರ್ಜಿ ವಹಿಸಿ ಆಯೋಜಿಸಿರುವ ಚಾಂಪಿಯನ್ಷಿಪ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ ಕ್ರೀಡಾ ಸ್ಫೂರ್ತಿಯಿಂದ ಪಾಲ್ಗೊಂಡ ಯೋಧರ ಗುಣಗಾನ ಮಾಡಿದರು.