Thursday, March 28, 2024

ಆಳ್ವಾಸ್‌ಗೆ ಸಮಗ್ರ ಚಾಂಪಿಯನ್ ಪಟ್ಟ, ಸ್ನೇಹಾಗೆ ಶ್ರೇಷ್ಠ ಅಥ್ಲೀಟ್ ಗೌರವ

ಸ್ಪೋರ್ಟ್ಸ್ ಮೇಲ್ ವರದಿ

ಇಲ್ಲಿನ ಸ್ವರಾಜ್ ಮೈದಾನದಲ್ಲಿ ಬುಧವಾರ ಮುಕ್ತಾಯಗೊಂಡ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಆತಿಥೇಯ ಆಳ್ವಾಸ್ ತಂಡ 582 ಅಂಕಗಳನ್ನು ಗಳಿಸಿ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.

177 ಅಂಕ ಗಳಿಸಿದ ಬೆಂಗಳೂರಿನ ಯುವಜನ ಸೇವಾ ಕ್ರೀಡಾ ಇಲಾಖೆಯ ತಂಡ ರನ್ನರ್ ಸ್ಥಾನ ತನ್ನದಾಗಿಸಿಕಕೊಂಡಿತು.

ಆಳ್ವಾಸ್ ಶಿಕ್ಷಣ ಸಂಸ್ಥೆ ಹಾಗೂ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 28 ದಾಖಲೆಗಳನ್ನು ನಿರ್ಮಾಣಗೊಂಡವು.
ವೈಯಕ್ತಿಕ ಚಾಂಪಿಯನ್ ಪಟ್ಟ
14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಸ್ಪೋರ್ಟ್ಸ್ ಕ್ಲಬ್‌ನ ನಿಯೋಲ್ ಅನ್ನಾ ಕಾನ್ಲರ್ ಶ್ರೇಷ್ಠ ಅಥ್ಲೀಟ್ ಗೌರವಕ್ಕೆ ಪಾತ್ರರಾದರು.
14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಗಣೇಶ್ ಚಾಂಪಿಯನ್ ವೈಯಕ್ತಿಕ ಚಾಂಪಿಯನ್ ಪಟ್ಟ ಗೆದ್ದುಕೊಂಡರು.
16 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ವರ್ಷಾ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.
 16  ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಬೆಂಗಳೂರು ಡಿವೈಇಎಸ್‌ನ ಮಲ್ಲಿಕ್ ರಿಹಾನ್ ಉತ್ತಮ ಅಥ್ಲೀಟ್ ಗೌರವಕ್ಕೆ ಪಾತ್ರರಾದರು.
18 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಎಸ್.ಬಿ. ಸುಪ್ರಿಯಾ ಶ್ರೇಷ್ಠ ಅಥ್ಲೀಟ್ ಗೌರವಕ್ಕೆ ಪಾತ್ರರಾದರು.
18 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರ್ಯ ಎಸ್. ಉತ್ತಮ ಅಥ್ಲೀಟ್ ಗೌರವ ಗಳಿಸಿದರು.
20 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಡಿವೈಇಎಸ್ ಬೆಂಗಳೂರಿನ ಧಾನೇಶ್ವರಿ ಶ್ರೇಷ್ಠ ಅಥ್ಲೀಟ್ ಗೌವಕ್ಕೆ ಪಾತ್ರರಾದರು.
20 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ಬೆಂಗಳೂರಿನ ಕುಶಲ್ ಅಂಬೋರೆ ಚಾಂಪಿಯನ್ ಪಟ್ಟ ಗೆದ್ದುಕಕೊಂಡರು.
ವನಿತೆಯರ ವಿಭಾಗದಲ್ಲಿ ಅಥ್ಲಾನ್ ಫ್ಲೀಟ್ ಒಲಿಂಪಸ್‌ನ ಸ್ನೇಹಾ ಪಿ.ಜೆ. ಶ್ರೇಷ್ಠ ಅಥ್ಲೀಟ್ ಗೌರವ ಗಳಿಸಿದರು. ಪುರುಷರ ವಿಭಾಗದಲ್ಲಿ ಅಶ್ವಿನಿ ಸ್ಪೋರ್ಟ್ಸ್ಡೇ ಫೌಂಡೇಷನ್‌ನ ರಾಧಾಕೃಷ್ಣ ಚಾಂಪಿಯನ್ ಆಗಿ ಮೂಡಿ ಬಂದರು.

ಟೀಮ್ ಚಾಂಪಿಯನ್ ಪಟ್ಟ

14 ವರ್ಷ ವಯೋಮಿತಿಯ ಬಾಲಕರ ವಭಾಗದಲ್ಲಿ 16 ಅಂಕ ಗಳಿಸಿದ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್.

16 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ 26 ಅಂಕ ಗಳಿಸಿದ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್.

14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ  78 ಅಂಕ ಗಳಿಸಿದ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್.

20 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ 58 ಅಂಕ ಗಳಿಸಿದ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್.

ಮಹಿಳಾ ವಿ‘ಾಗದಲ್ಲಿ 82 ಅಂಕ ಗಳಿಸಿದ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್.

14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ22 ಅಂಕ ಗಳಿಸಿದ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್.

16 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ  38 ಅಂಕ ಗಳಿಸಿದ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್.

18 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ 76 ಅಂಕ ಗಳಿಸಿದ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್.

20 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ 63 ಅಂಕ ಗಳಿಸಿದ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್.

ಪುರುಷರ ವಿಭಾಗದಲ್ಲಿ 89 ಅಂಕ ಗಳಿಸಿದ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ ಟೀಮ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.

ಒಟ್ಟು ಕ್ರೀಡಾಕೂಟದಲ್ಲಿ 28 ನೂತನ ದಾಖಲೆಗಳು ನಿರ್ಮಾಣಗೊಂಡಿದ್ದು, ಅವುಗಳಲ್ಲಿ 19 ದಾಖಲೆಗಳು ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ನ ಕ್ರೀಡಾಪಟುಗಳ ಪಾಲಾಗಿದೆ.

Related Articles