Thursday, April 18, 2024

ಕ್ರೀಡಾಪಟುಗಳ ಯಶಸ್ಸಿನ ತಾಣ ಆಳ್ವಾಸ್

ಸ್ಪೋರ್ಟ್ಸ್ ಮೇಲ್ ವರದಿ

ಡಾ. ಮೋಹನ್ ಆಳ್ವಾ ಹಲವು ದಶಕಗಳಿಂದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಈಗಲೂ ನೀಡುತ್ತಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಗೆದ್ದಿರುವ ಪೂವಮ್ಮ ಹಾಗೂ ಧಾರುಣ್ ಅಯ್ಯಸ್ವಾಮಿ ಅವರ ಯಶಸ್ಸಿನ ಹಿಂದೆ ಆಳ್ವಾಸ್ ಅವರ ಶ್ರಮವಿದೆ. ಇಲ್ಲಿ ಎಲ್ಲ ಹಂತದ ಕ್ರೀಡಾಪಟುಗಳಿಗೆ ಉತ್ತಮ ಪ್ರೋತ್ಸಾಹವಿದೆ. ಮೂಡಬಿದಿರೆಯಲ್ಲಿ ರಾಷ್ಟ್ರೀಯ ಕ್ರೀಡಾಕೂಟವನ್ನು ನಡೆಸುವ ಯೋಜನೆ ಇದೆ, ಅದು ಸದ್ಯದಲ್ಲೇ ಈಡೇರಲಿದೆ. ಅದಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ರಾಜ್ಯ ಸರಕಾರ ನೀಡಲಿದೆ ಎಂದು ಕರ್ನಾಟಕ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದರು.

ಅವರು ಇಲ್ಲಿನ ಸ್ವರಾಜ್ ಮೈದಾನದಲ್ಲಿ ರಾಜ್ಯಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ಹಿರಿಯ ಹಾಗೂ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ನಿಜವಾದ ಆಸ್ತಿ ಎಂದರೆ ವಧಾನ ಸೌಧ  ಅಥವಾ ಸಂಸತ್ ಭವನದಲ್ಲಿ ಕುಳಿತ ಎಂಎಲ್‌ಎ ಹಾಗೂ ಸಂಸದರಲ್ಲ, ಇಲ್ಲಿ ಕ್ರೀಡಾಂಗಣದಲ್ಲಿ ಓಡಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿತರುವ ಮಕ್ಕಳೇ ನಿಜವಾದ ಆಸ್ತಿ. ಅವರ ಶ್ರೇಯಸ್ಸಿಗಾಗಿ ನಾವು ನೆರವು ನೀಡಬೇಕಾದ ಅಗತ್ಯವಿದೆ ಎಂದರು.
ಮೂಡಬಿದಿರೆ ಶಾಸಕ ಉಮಾನಾತ್ ಕೋಟ್ಯಾನ್ ಮಾತನಾಡಿ, ಡಾ. ಮೋಹನ್ ಆಳ್ವಾ ಅವರು  ಆಸಕ್ತಿ ವಹಿಸಿದ ಕಾರಣ ಮೂಡಬಿದಿರೆಯಲ್ಲಿ ರಾಷ್ಟ್ರೀಯ ಕ್ರೀಡಾಕೂಟವನ್ನು ನಡೆಸುವ ಎಲ್ಲ ರೀತಿಯ ಸೌಲಭ್ಯಗಳಿವೆ. ಸದ್ಯದಲ್ಲೇ ಅಂಥ ರಾಷ್ಟ್ರೀಯ ಕ್ರೀಡಾಕೂಟ ಇಲ್ಲಿ ನಡೆಯಲಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕ್ರೀಡಾಪಟುಗಳಿಗೆ ಉತ್ತಮ ರೀತಿಯ ಪ್ರೋತ್ಸಾಹ ನೀಡಲಾಗುತ್ತಿದೆ. ಇಲ್ಲಿ ಪದಕ ಗೆಲ್ಲುವ ಹೆಚ್ಚಿನ ಕ್ರೀಡಾಪಟುಗಳು ಆಳ್ವಾಸ್‌ನ ವಿದ್ಯಾರ್ಥಿಗಳು ಎಂದು ಹೇಳಲು ಹೆಮ್ಮೆ ಅನಿಸುತ್ತಿದೆ ಎಂದರು.
ಮಾಜಿ ಶಾಕಕ ಕೆ. ಅಭಯಚಂದ್ರ ಜೈನ್ ಧ್ವಜಾರೋಹಣ ನೆರವೇಸಿರಿಸದರು. ಮಾಜಿ ಸಚಿವ ಅಮರನಾಥ ಶೆಟ್ಟಿ, ಕರ್ನಾಟಕ ಸರಕರಾದ ಹೆಚ್ಚುವರಿ ಕಾರ್ಯದರ್ಶಿ ಅಮರನಾಥ ಗೋಯೆಲ್, ಮಂಗಳೂರು ವಿಶ್ವವಿದ್ಯಾನಿಲಯ ಹಂಗಾಮಿ ಉಪಕುಲಪತಿ ಡಾ. ಕಿಶೋರ್ ಕುಮಾರ್, ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಕಾರ್ಯದರ್ಶಿ ಎ. ರಾಜವೇಲು, ದಕ್ಷಿಣ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಪದಾಧಿಕಾರಿಗಳು, ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷ ಸೋಮಶೇಖರ್ ಹಾಜರಿದ್ದರು.

Related Articles