Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ರಸೆಲ್‌:  ಭಾನುವಾರ ದುಬೈ ಲೀಗ್‌, ಸೋಮವಾರ ಬಾಂಗ್ಲಾ ಲೀಗ್‌

ದುಬೈ: ಕ್ರಿಕೆಟ್‌ನಲ್ಲಿ ಹಣಕ್ಕಾಗಿ ಆಡುವ ಪರಿಸ್ಥಿತಿ ಬಂದಾಗಿನಿಂದ ಯಾವ್ಯಾವ ಆಟಗಾರರು ಎಷ್ಟು ಹೊತ್ತಿಗೆ ಯಾವ ತಂಡದಲ್ಲಿ, ಯಾವ ದೇಶದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗದು. ಇದಕ್ಕೆ ಉತ್ತಮ ಉದಾಹರಣೆ ವೆಸ್ಟ್‌ ಇಂಡೀಸ್‌‌ ಆಲ್ರೌಂಡರ್‌ ಆಂಡ್ರೆ ರಸೆಲ್‌. Andre Russell is one of the busiest cricketers in the world Sunday playing in Dubai and Monday at Mirpur.

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ತಂಡಗಳ ಪರ ಆಡಿರುವ ಆಟಗಾರರಲ್ಲಿ ಒಬ್ಬರಾಗಿರುವ ರಸೆಲ್‌ ಫೆಬ್ರವರಿ 2 ರಾತ್ರಿ ದುಬೈನಲ್ಲಿ ಅಂತಾರಾಷ್ಟ್ರೀಯ ಟಿ20 ಲೀಗ್‌ನಲ್ಲಿ ನೈಟ್‌ರೈಡರ್ಸ್‌ ಪರ, ಆಡಿ ಫೆಬ್ರವರಿ 3 ರ ರಾತ್ರಿ ಬಾಂಗ್ಲಾ ಪ್ರೀಮಿಯರ್‌ ಲೀಗ್‌ನಲ್ಲಿ ರಂಗ್ಪುರ್‌ ರೈಡರ್ಸ್‌ ವಿರುದ್ಧ ಖುಲ್ನಾ ಟೈಗರ್ಸ್‌ ಪರ ಆಡಿದ್ದಾರೆ. ಈ ರೀತಿಯ ಎರಡು ದೇಶಗಳ ಎರಡು ಲೀಗ್‌ಗಳಲ್ಲಿ ಒಂದೇ ದಿನದ ಅಂತರದಲ್ಲಿ ಪಾಲ್ಗೊಂಡಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಭಾರತ ಕಂಪೆನಿಗಳು ಈಗ ಕ್ರಿಕೆಟ್‌ಗೆ ಎಲ್ಲೆಲ್ಲ ಹೂಡಿಕೆ ಮಾಡಲು ಅವಕಾಶವಿದೆಯೋ ಅಲ್ಲೆಲ್ಲ ಮಾಡುತ್ತಿವೆ. ಬಾಂಗ್ಲಾಪ್ರೀಮಿಯರ್‌ ಲೀಗ್‌ನಲ್ಲಿ ಸ್ಪರ್ಧಿಸುತ್ತಿರುವ ಖುಲ್ನಾ ಟೈಗರ್ಸ್‌ ತಂಡದ ಮಾಲೀಕರು ಯಾರೆಂದು ಹುಡುಕಿದರೆ ಮೈಂಡ್‌ಟ್ರೀ ಲಿಮಿಟೆಡ್‌ ಎಂದು ತೋರಿಸುತ್ತದೆ. ಅಂದರೆ ಎಲ್‌&ಟಿ ಲಿಮಿಟೆಡ್‌. ಅಬ್ಬರದ ಆಟಗಾರರಿಗೆ ಬೃಹತ್‌ ಮೊತ್ತದಲ್ಲಿ ಹಣ ನೀಡಿರುವುದರಿಂದ ಆ ಆಟಗಾರರು ಎಷ್ಟೇ ಹೊತ್ತಿರಲಿ, ಯಾವುದೇ ದೇಶವಿರಲಿ ಅಲ್ಲಿಗೆ ಹೋಗಿ ಆಡಿ ಬರುತ್ತಾರೆ.

ವೆಸ್ಟ್‌ಇಂಡೀಸ್‌ ರಾಷ್ಟ್ರೀಯ ತಂಡ ಹಾಗೂ ಇತರ ಸಹ ತಂಡಗಳನ್ನು ಹೊರತುಪಡಿಸಿ ರಸೆಲ್‌ 32ಕ್ಕೂ ಹೆಚ್ಚು ತಂಡಗಳಲ್ಲಿ ಆಡಿದ್ದಾರೆ.


administrator