ಹೊಸದಿಲ್ಲಿ: ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ತಂಡದ ಏಂಜಲೋ ಮ್ಯಾಥ್ಯೂಸ್ “ಟೈಮ್ಡ್ ಔಟ್”ಗೆ ವಿಕೆಟ್ ಒಪ್ಪಿಸಿದ್ದಾರೆ. ಈ ರೀತಿ ಔಟಾಗುತ್ತಿರುವುದು 146 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದೇ ಮೊದಲು. First time in 146 years Angelo Mathews Timed Out at cricket World.
ಈ ರೀತಿ ಒಬ್ಬ ಬ್ಯಾಟ್ಸ್‌ಮನ್‌ನನ್ನು ಔಟ್ ಮಾಡುವುದು ಸರಿಯೋ ತಪ್ಪೋ ಎಂಬುದು ಬೇರೆ ವಿಷಯ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ನಿಯದಮ ಪ್ರಕಾರ ಹೊಸದಾಗಿ ಕ್ರೀಸಿಗೆ ಇಳಿದ ಆಟಗಾರ 3 ನಿಮಿಷಗಳ ಒಳಗಾಗಿ ಮೊದಲ ಚೆಂಡನ್ನು ಎದುರಿಸಬೇಕು. ಬಾಂಗ್ಲಾದೇಶದ ನಾಯಕ ಶಾಕೀಬಲ್ ಅಲ್ ಹಸನ್ ಅವರು ಮನವಿ ಮಾಡಿದ್ದು ಸರಿ. ಆದರೆ ಕ್ರೀಡಾಸ್ಫೂರ್ತಿ ಎಂಬುದು ಪ್ರತಿಯೊಬ್ಬ ಆಟಗಾರನಲ್ಲೂ ಇರಬೇಕು.
ಘಟನೆಯ ವಿವರ: ದೆಹಲಿಯಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶದ ತಂಡಗಳ ನಡುವಿನ ಪಂದ್ಯ. ಮೊದಲು ಬ್ಯಾಟಿಂಗ್ ಮಾಡುತ್ತಿದ್ದ ಶ್ರೀಲಂಕಾದ ಸದೀರ ಸಮರ ವಿಕ್ರಮ 25 ನೇ ಓವರ್‌ನ ಎರಡನೇ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ನಂತರ ಅಂಗಣಕ್ಕಿಳಿದವರು ಏಂಜಲೋ ಮ್ಯಾಥ್ಯೂಸ್. ಅಂಗಣಕ್ಕಿದ ನಂತರ ಹೆಲ್ಮೆಟ್‌ನ ಪಟ್ಟಿ ಹೋಗಿರುವುದು ಗಮನಕ್ಕೆ ಬಂತು. ಇದನ್ನು ಅಂಪೈರ್ ಹಾಗೂ ಬಾಂಗ್ಲಾದ ಆಟಗಾರರ ಗಮನಕ್ಕೂ ತಂದಿದ್ದರು. ಆದರೆ ಬದಲಿ ಆಟಗಾರ ಹೆಲ್ಮೆಟ್ ತರುವುದರೊಳಗೆ ಬಾಂಗ್ಲಾದ ನಾಯಕ ಶಾಕೀಬ್ ಅಲ್ ಹಸನ್ ಟೈಮ್ಡ್ ಔಟ್‌ಗೆ ಮನವಿ ಸಲ್ಲಿಸಿದ್ದರು. ಅಂಪೈರ್ ಅದಕ್ಕೆ ಸಮ್ಮತಿ ನೀಡಿ ಮ್ಯಾಥ್ಯೂಸ್ ಔಟ್ ಎಂದು ಘೋಷಿಸಿದರು.
ಹೀಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನ 146 ವರ್ಷಗಳ ಇತಿಹಾಸದಲ್ಲೇ ಟೈಮ್ಡ್ ಔಟ್‌ಗೆ ಔಟ್ ಆದ ಆಟಗಾರ ಏಂಜಲೋ ಮ್ಯಾಥ್ಯೂಸ್ ಅವರ ಹೆಸರು ಇತಿಹಾಸದ ಪುಟ ಸೇರಿಕೊಂಡಿತು. ಕ್ರೀಡಾ ದಾಖಲೆ, ರನ್, ವಿನ್, ದ್ವೇಷ ಇವುಗಳ ಜೊತೆಯಲ್ಲಿ ಕ್ರೀಡಾ ಸ್ಫೂರ್ತಿ ಇರಬೇಕಾಗುತ್ತದೆ. ಹಾಗೆದ್ದರೇನೇ ಆಟ ಚೆನ್ನ. ನಿಯಮಗಳು ಪಾಲಿಸುವುದಕ್ಕೆ ಇರುವುದು ನಿಜ, ಆದರೆ ಉದ್ದೇಶ ಪೂರ್ವಕವಾಗಿ ಮಾಡದ ತಪ್ಪುಗಳಿದ್ದರೆ ಅಲ್ಲಿ ಕ್ರೀಡಾ ಸ್ಫೂರ್ತಿ ಕೆಲಸ ಮಾಡಬೇಕು.