Thursday, December 26, 2024

ದೀಪಿಕಾ ಕುಮಾರಿ ನಿಶ್ಚಿತಾರ್ಥ

ರಾಂಚಿ:

ಭಾರತದ ಅರ್ಚರಿ ಪಟುಗಳಾದ  ದೀಪಿಕಾ ಕುಮಾರಿ ಹಾಗೂ ಅತಾನು ದಾಸ್ ಅವರು ಸೋಮವಾರ ನಿಶ್ಚಿತಾರ್ಥ ಮಾಡಿಕೊಂಡರು. ಈ ಜೋಡಿ ಮುಂದಿನ ವರ್ಷ ದಾಂಪತ್ಯ ಜೀವನಕ್ಕೆೆ ಕಾಲಿಡಲಿದ್ದಾರೆ.

ರತು-ಚಟ್ಟಿ ನಿವಾಸದಲ್ಲಿ  ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ 24 ವರ್ಷದ ದಿಪೀಕಾ ಕುಮಾರಿ ಹಾಗೂ 26 ವರ್ಷದ ಅತಾನು ದಾಸ್ ಸಾಂಪ್ರದಾಯ ಪೂಜೆ ಸಲ್ಲಿಸಿದರು. ಈ ಕಾರ್ಯಕ್ರಮಕ್ಕೆೆ  ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಅರ್ಜುನ್ ಮುಂಡಾ ಹಾಗೂ ಅವರ ಪತ್ನಿ ಮೀರಾ ಮುಂಡಾ ಸಾಕ್ಷಿಯಾದರು.
ನಿಶ್ಚಿತಾರ್ಥದ ಬಳಿಕ ಮಾತನಾಡಿದ ಈ ಜೋಡಿ,  2019ರ ವರ್ಷದಲ್ಲಿ ಒಲಿಂಪಿಕ್ ಅರ್ಹತಾ ಸುತ್ತು ಇರುವುದರಿಂದ ನಮಗೆ ಬಿಡುವು ಇರುವುದಿಲ್ಲ. ಹಾಗಾಗಿ, ಮುಂದಿನ ವರ್ಷ ನವೆಂಬರ್ ತಿಂಗಳಿನಲ್ಲಿ ಮದುವೆಯಾಗುವುದಾಗಿ ತಿಳಿಸಿದರು.

Related Articles