ಸ್ಪೋರ್ಟ್ಸ್ ಮೇಲ್ ವರದಿ
ನಮ್ಮ ಸ್ಪೋರ್ಟ್ಸ್ ಟೆನಿಸ್ ಅಕಾಡೆಮಿ ಆಯೋಜಿಸಿದ್ದ ಎಐಟಿಎ ಟಿಎಸ್‌೭ ೧೬ ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಅಗ್ರ ಶ್ರೇಯಾಂಕಿತ ಅಶ್ವಿನ್ ಭಟ್ ಎರಡನೇ ಶ್ರೇಯಾಂಕಿತ ನಿನಾದ್ ರವಿ ವಿರುದ್ಧ ೬-೧, ೬-೦ ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ಗೆದ್ದುಕೊಂಡರು. ಸಿಸ್ಟರ್ ನಿವೇದಿತಾ ಶಾಲೆಯ ನಿನಾದ್ ರವಿ ರನ್ನರ್ ಅಪ್‌ಗೆ ತೃಪ್ತಿಪಟ್ಟರು.
ಬಾಲಕರ ಡಬಲ್ಸ್ ವಿಭಾಗದಲ್ಲಿ ಅಶ್ವಿನ್ ಎಂ. ಭಟ್ ಹಾಗೂ ಶ್ರವಣ್ ಆನಂದ್ ಜೋಡಿ ನಿನಾದ್ ರವಿ ಹಾಗೂ ಗೋವಿನ್ ಸೆಹ್ವಾಗ್ ಜೋಡಿಯ ವಿರುದ್ಧ ೨-೬, ೭-೬ (೭-೫), ೧೨-೧೦ ಅಂತರದಲ್ಲಿ ಗೆದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು. ಬಾಲಕಿಯರ ಸಿಂಗಲ್ಸ್‌ನಲ್ಲಿ ಅಮೋಘ್ ಸ್ಪೋರ್ಟ್ಸ್‌ನ ಆತ್ಮಿಕಾ ಶ್ರೀನಿವಾಸ್ ೬-೨, ೬-೨ ಅಂತರದಲ್ಲಿ ಅಮೋಧಿನಿ ನಾಯ್ಕ್ ವಿರುದ್ಧ ಜಯ ಗಳಿಸಿ ಪ್ರಶಸ್ತಿ
ಗೆದ್ದುಕೊಂಡರು.
ವಿಜೇತರಿಗೆ ನಗದು ಬಹುಮಾನ
ಭಿಲಾಯ್‌ನಲ್ಲಿ ಇತ್ತೀಚಿಗೆ ನಡೆದ ಅಖಿಲ ಭಾರತ ಅಂತರ್ ರಾಜ್ಯ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಆಟಗಾರರಿಗೆ ಕರ್ನಾಟಕ ಲಾನ್ ಟೆನಿಸ್ ಸಂಸ್ಥೆಯ ವತಿಯಿಂದ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಪ್ರತಿಯೊಬ್ಬ ಆಟಗಾರರಿಗೂ ತಲಾ ೫೦,೦೦೦ ರೂ. ನೀಡಿ ಪುರಸ್ಕರಿಸಲಾಯಿತು. ಸೋಹಾ ಎಸ್, ವನ್ಷಿತಾ ಪತಾನಿಯಾ, ಅಪೂರ್ವ ಎಸ್.ಬಿ., ಪ್ರತಿಭಾ ಪ್ರಸಾದ್‌ನಾರಾಯಣ್ ಗೌರವಕ್ಕೆ ಪಾತ್ರರಾದ ಆಟಗಾರರು.
ಈ ಸಂದರ್ಭದಲ್ಲಿ ಕೆಎಸ್‌ಎಲ್‌ಟಿಯ ಜಂಟಿ ಕಾರ್ಯದರ್ಶಿ ಪಿ.ಆರ್. ರಾಮಸ್ವಾಮಿ, ಕೆಎಸ್‌ಎಲ್‌ಟಿಎ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಸಿ. ನಾಗರಾಜ್ ಹಾಜರಿದ್ದರು.