Friday, November 22, 2024

ಏಷ್ಯಾಕಪ್ : ನಮಗೆ ಟ್ರೋಫಿಗಿಂತ ಪಾಕಿಸ್ತಾನ ಸೋಲಿಸೋದೇ ಗುರಿ

ಏಜೆನ್ಸೀಸ್ ಯುಎಇ 

ಇತ್ತೀಚಿಗೆ ಮುಕ್ತಾಯಗೊಂಡ ಏಷ್ಯಾಕಪ್‌ನಲ್ಲಿ ಭಾರತ ಹಾಕಿ ತಂಡ ಚಿನ್ನದ ಪದಕ ಗೆಲ್ಲುವಲ್ಲಿ ವಿಫಲವಾಯಿತು. ಆದರೆ ಹಾಕಿ ಇಂಡಿಯಾಕ್ಕೆ ಆ ಬಗ್ಗೆ ಬೇಸರವಿಲ್ಲ, ಏಕೆಂದರೆ ಭಾರತ ಹಾಕಿ ತಂಡ ಪಾಕಿಸ್ತಾನವನ್ನು ಸೋಲಿಸಿದೆ.

ಆ ಬಗ್ಗೆ ಖುಷಿ ಇದೆ. ಒಟ್ಟಾರೆ ಪಾಕಿಸ್ತಾನವನ್ನು ಸೋಲಿಸುವುದರಲ್ಲಿ ನಮಗೆ ಟ್ರೋಫಿ ಗೆದ್ದಷ್ಟು ಖುಷಿ ಇದೆ. ಇಂದಿನಿಂದ (ಸೆ. ೧೫) ಆರಂಭಗೊಳ್ಳಲಿರುವ  ಏಷ್ಯಾಕಪ್‌ನಲ್ಲಿ ಭಾರತ ಟ್ರೋಫಿಗೆಲ್ಲುವಲ್ಲಿ ವಿಲವಾದರೂ ಚಿಂತೆ ಇಲ್ಲ, ಆದರೆ ಪಾಕಿಸ್ತಾನವನ್ನು ಎಲ್ಲಾ ಪಂದ್ಯಗಳಲ್ಲಿ ಸೋಲಿಸಬೇಕೆಂಬುದೇ ನಮ್ಮ ನಿರೀಕ್ಷೆ.
ಏಷ್ಯಾಕಪ್ ಏಕದಿನ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ ಗೆಲ್ಲುವ ಫೇವರಿಟ್ ಎನಿಸಿದೆ. ಆದರೆ ಅತಿಯಾದ ಆತ್ಮವಿಶ್ವಾಸದಲ್ಲಿ ಭಾರತ ಮೈ ಮರೆತರೆ ಪಾಕಿಸ್ತಾನ ಅಥವಾ ಬಾಂಗ್ಲಾದೇಶದ ತಂಡಗಳಿಂದ ಆಘಾತ ಅನುಭವಿಸಬೇಕಾದೀತು.
ನಾಯಕ ವಿರಾಟ್ ಕೊಹ್ಲಿ ಅವರ ಅನುಪಸ್ಥಿತಿಯಲ್ಲಿ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಂಡದಲ್ಲಿರುವುದರಿಂದ ರೋಹಿತ್ ಅವರಿಗೆ ಸಾಕಷ್ಟು ನೆರವು ಸಿಗಲಿದೆ.
ಇಂಗ್ಲೆಂಡ್ ಪ್ರವಾಸದಲ್ಲಿ ಹೀನಾಯ ಸೋಲನುಭವಿಸಿರುವ ಭಾರತ ತಂಡ ಏಕದಿನದ ಸವಾಲಿಗೆ ಸಜ್ಜಾಗಿದೆ. ವಿದೇಶದ ನೆಲದಲ್ಲಿ ಸರಣಿ ಸೋತರೂ ಏಷ್ಯಾಕ್ಕೆ ತಾನೇ ದಿಗ್ಗಜ ಎಂದು ತೋರಿಸಿಕೊಳ್ಳಲು ಭಾರತಕ್ಕೆ ಇದು  ಉತ್ತಮ ಅವಕಾಶ. ಕೊಹ್ಲಿಯ ಆಕ್ರಮಣಕಾರಿ ಆಟ ಹಾಗೂ ಆವೇಶದ ನಡತೆ ರೋಹಿತ್ ಶರ್ಮಾ ಅವರಲ್ಲಿಲ್ಲ. ಆದರೆ ಬ್ಯಾಟ್ ಮೂಲಕ ಎಲ್ಲದಕ್ಕೂ ಉತ್ತರ ನೀಡುವ ಆಟಗಾರ ರೋಹಿತ್.
ಜಗತ್ತಿನ ಶ್ರೇಷ್ಠ ಆಟಗಾರರನ್ನು ಹೊಂದಿರುವ ಭಾರತ ತಂಡ ಪ್ರಶಸ್ತಿ ಗೆಲ್ಲುವ ಫೇವರಿಟ್ ಎಂದೇ ಬಿಂಬಿಸಲಾಗುತ್ತಿದೆ. ಆದರೆ ಏಷ್ಯಾಕಪ್ ಎಂದರೆ ಕೇವಲ ಭಾರತದ ಬಗ್ಗೆನೇ ಹೇಳಿದರೆ ಸಾಲದು. ಬಲಿಷ್ಠ ಪಾಕಿಸ್ತಾನವೂ ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದೆ. ಸೆ. ೧೯ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಕುತೂಹಲದ ಪಂದ್ಯವಿದೆ. ಟೂರ್ನಿಗೆ ಹೆಚ್ಚು ಆದಾಯ ತಂದುಕೊಡುವ ಪಂದ್ಯವೇ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯಗಳು ನಡೆದ್ದೇ ವಿರಳ. ಆದ್ದರಿಂದ ಏಷ್ಯಾಕಪ್ ಅಂದರೆ ಅದು ಭಾರತ ಹಾಗೂ ಪಾಕಿಸ್ತಾನ ನಡುವಿನ ಹೋರಾಟ ಎಂದೇ ಬಿಂಬಿತವಾಗಿದೆ. ಭಾರತದ ಕ್ರಿಕೆಟ್ ಅಭಿಮಾನಿಗಳಲ್ಲೂ ಹಾಗೆಯೇ ಏಷ್ಯಾಕಪ್ ಯಾರೇ ಗೆಲ್ಲಲಿ, ಆದರೆ ಭಾರತ ಮಾತ್ರ ಪಾಕಿಸ್ತಾನವನ್ನು ಸೋಲಿಸಬೇಕು.
ಅನನುಭವಿ ಆಟಗಾರರಿಂದ ಕೂಡಿರುವ ಶ್ರೀಲಂಕಾ ತಂಡ ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಪಟ್ಟಿಯಲ್ಲಿಲ್ಲ. ಫೇವರಿಟ್ ತಂಡಗಳ ಜಯಕ್ಕೆ ಅಡ್ಡಿ ತರುವ ತಂಡವೆಂದರೆ ಅದು ಬಾಂಗ್ಲಾದೇಶ. ಹಲವು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಬಾಂಗ್ಲಾದೇಶ ತಂಡದ ವಿರುದ್ಧ ಬಲಿಷ್ಠ ತಂಡಗಳು ಸೋತು ಅಚ್ಚರಿಯ ಆಘಾತ ಅನುಭವಿಸಿವೆ. ಆದರೆ ಏಷ್ಯಾಕಪ್‌ನಲ್ಲಿ  ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳನ್ನು ಮಣಿಸಿ ಪ್ರಶಸ್ತಿ ಗೆಲ್ಲುವುದು ಬಾಂಗ್ಲಾಕ್ಕೆ ಅಷ್ಟು ಸುಲಭವಲ್ಲ.
ಅಘಾನಿಸ್ತಾನ ತಂಡ ಬಲಿಷ್ಠ ಎನ್ನುವುದಕ್ಕಿಂತ ಸಾಕಷ್ಟು ಜನಪ್ರಿಯಗೊಂಡಿರುವ ತಂಡ. ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಅಘಾನಿಸ್ತಾನ ತಂಡ ಸೋತಿರಬಹುದು, ಆದರೆ ಟಿ೨೦ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಪೈಪೋಟಿ ನೀಡಬಲ್ಲ ತಂಡ.

Related Articles