Thursday, November 21, 2024

ಬೆಂಗಳೂರಿನಲ್ಲಿ ಏಷ್ಯನ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ಗೆ ಚಾಲನೆ

ಬೆಂಗಳೂರು: ಬಹಳ ನಿರೀಕ್ಷಿತ 13ನೇ ಮಹಿಳಾ ಏಷ್ಯನ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ಗೆ ಬೆಂಗಳೂರಿನ ಕೋರಮಂಗಲ ಕ್ರೀಡಾಂಗಣದಲ್ಲಿ ಚಾಲನೆ ದೊರೆತಿದೆ. ಬೆಂಗಳೂರು ಕೇಂದ್ರ ವಲಯ ಐಜಿ ಡಾ. ಬಿ. ಆರ್‌. ರವಿಕಾಂತೇ ಗೌಡ ಅವರು ಚಾಲನೆ ನೀಡಿದರು. Asian Women’s Netball Championship Inaugurated by Bangalore Central I G Dr B R Ravikanthe Gowda.

ಭಾರತೀಯ ನೆಟ್‌ಬಾಲ್‌ ಫೆಡರೇಷನ್‌ ಮತ್ತು ಕರ್ನಾಟಕ ನೆಟ್‌ಬಾಲ್‌ ಅಸೋಸಿಯೇಷನ್‌ ಆಶ್ರಯದಲ್ಲಿ ನಡೆಯುತ್ತಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ಏಷ್ಯಾದ 14 ರಾಷ್ಟ್ರಗಳು ಪಾಲ್ಗೊಳ್ಳುತ್ತಿವೆ. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಏಷ್ಯಾ ನೆಟ್‌ಬಾಲ್‌ ಸಂಸ್ಥೆಯ ಅಧ್ಯಕ್ಷೆ ವಿಕ್ಟೋರಿಯಾ ಲಕ್ಷ್ಮೀ, ಗೌರವ ಕಾರ್ಯದರ್ಶಿ ವಿವಿಯನ್‌ ಡಿʼಸಿಲ್ವಾ, ಭಾರತೀಯ ನೆಟ್‌ಬಾಲ್‌ ಸಂಸ್ಥೆಯ ಸುಮನ್‌ ಕೌಶಿಕ್‌ ಪಾಲ್ಗೊಂಡಿದ್ದರು.

ಪಾಲ್ಗೊಂಡಿರುವ ರಾಷ್ಟ್ರಗಳು: ಭಾರತ, ಬೆಹರಿನ್‌, ಬ್ರೂನೆ, ಚೈನೀಸ್‌ ತೈಪೆ, ಹಾಂಕಾಂಗ್‌, ಚೀನಾ, ಇರಾಕ್‌, ಜಪಾನ್‌, ಮಲೇಷ್ಯಾ, ಮಾಲ್ದೀವ್ಸ್‌, ಫಿಲಿಪ್ಪಿನ್ಸ್‌, ಸೌದಿ ಅರೇಬಿಯಾ, ಸಿಂಗಾಪುರ, ಶ್ರೀಲಂಕಾ, ಥಾಯ್ಲೆಂಡ್‌.

ಭಾರತದ ತಂಡ:  ಸುರಭಿ ಬಿ.ಆರ್‌. (ನಾಯಕಿ), ನವದೀಪ್‌ ಕೌರ್‌ (ಉಪ ನಾಯಕಿ), ಪೂಜಾ ಚೋಪ್ರಾ, ಐಶ್ವರ್ಯ ಪಿ.ಕೆ. ಲಕ್ಷ್ಮೀ ಕನ್ವಾರ್‌, ಶಿಲ್ಪಾ ಎ. ವರ್ಷಾ, ಸೋನಮ್‌ ಶರ್ಮಾ, ಶರಯು ಜಗ್ತಾಪ್‌, ವೈಷ್ಣವಿ ಎಂ, ಗೀತಾಂಜಲಿ ಬಗ್ಗಾ, ಮಾಹಿ,

ಕೋಚ್‌: ವಿಕ್ರಮಾದಿತ್ಯ ರೆಡ್ಡಿ, ಸಹಾಯಕ ಕೋಚ್‌: ಪಾಲಕ್‌, ಮ್ಯಾನೇಜರ್‌: ಯಶಸ್ವಿ ಕೌಶಿಕ್‌.

Related Articles