Sunday, September 8, 2024

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಅನಿವಾಸಿ ಭಾರತೀಯರ ಸ್ಪರ್ಧೆ!

ಹೊಸದಿಲ್ಲಿ: ಭಾರತೀಯರು ಎಲ್ಲೇ ನೆಲೆಸಿರಲಿ ಆ ನೆಲಕ್ಕೆ ಕೀರ್ತಿ ತರುತ್ತಾರೆ. ನಾಳೆಯಿಂದ ಆರಂಭಗೊಳ್ಳಲಿರುವ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ 117 ಕ್ರೀಡಾಪಟುಗಳು ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ. ಆದರೆ ಇವರ ನಡುವೆ ಈಗಾಗಲೇ ಪದಕವನ್ನು ಗೆದ್ದಿರುವ ಮತ್ತು ಹೊಸದಾಗಿ ಪದಕದ ನಿರೀಕ್ಷೆಯಲ್ಲಿರುವ ಭಾರತೀಯ ಮೂಲದ ಕ್ರೀಡಾಪಟುಗಳು ಬೇರೆ ಬೇರೆ ದೇಶಗಳನ್ನು ಪ್ರತಿನಿಧಿಸುತ್ತಿರುವುದೂ ಹೆಮ್ಮೆಯ ಸಂಗತಿ. Athlete of Indian origin look to shine at Paris Olympics

ಬೆಂಗಳೂರು ಮೂಲದ ರಾಜೀವ್‌ ರಾಮ್‌ (ಟೆನಿಸ್‌, ಅಮೆರಿಕ): 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ವೀನಸ್‌ ವಿಲಿಯಮ್ಸ್‌ ಜೊತೆ ಟೆನಿಸ್‌ ಮಿಶ್ರ ಡಬಲ್ಸ್‌ನಲ್ಲಿ ಚಿನ್ನ ಗೆದ್ದಿರುವ ರಾಜೀವ್‌ ರಾಮ್‌ ಬೆಂಗಳೂರು ಮೂಲದವರು. ಹೆತ್ತರವರು ಉದ್ಯೋಗ ಅರಸಿ ಅಮೆರಿಕಕ್ಕೆ ಹೋಗಿ ನೆಲೆಸಿದ ಕಾರಣ ಈಗ ರಾಜೀವ್‌ ರಾಮ್‌ ಅಮೆರಿಕವನ್ನು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ನಾಲ್ಕು ಪುರುಷರ ಡಬಲ್ಸ್‌ ಹಾಗೂ ಒಂದು ಮಿಶ್ರ ಡಬಲ್ಸ್‌ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದಿರುವ  ರಾಮ್‌ ಅವರ ತಾಯಿ ಸುಶ್ಮಾ ಅಮೆರಿದಕಲ್ಲಿ ಸೈಂಟಿಫಿಕ್‌ ಟೆಕ್ನಿನಿಷಿಯನ್‌ ಆಗಿ ದುಡಿಯುತ್ತಿದ್ದಾರೆ. ರಾಜೀವ್‌ ರಾಮ್‌ ಈ ಬಾರಿ ಪುರುಷರ ಡಬಲ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.

ಪ್ರೀತಿಕಾ ಪಾವಡೆ (ಟೇಬಲ್‌ ಟೆನಿಸ್‌, ಫ್ರಾನ್ಸ್‌): ಪ್ರೀತಿಕಾ ಪಾವಡೆ ತಂದೆ ಪಾಂಡಿಚೇರಿ ಮೂಲದವರು. ಅವರು 2003ರಲ್ಲಿ ಪ್ಯಾರಿಸ್‌ಗೆ ವಲಸೆ ಹೋದರು. ಪ್ರೀತಿಕಾ ಹುಟ್ಟಿದ್ದು ಪ್ಯಾರಿಸ್‌ನಲ್ಲಿ. ಪ್ರೀತಿಕಾ ತಂದೆಯವರೂ ಟೇವಲ್‌ ಟೆನಿಸ್‌ ಆಟಗಾರರಾಗಿದ್ದ ಕಾರಣ ಆರನೇ ವಯಸ್ಸಿನಲ್ಲಿ ಮಗಳನ್ನೂ ಟೇಬಲ್‌ ಟೆನಿಸ್‌ ತರಬೇತಿಗೆ ಕಳುಹಿಸಿದರು. 16ನೇ ವಯಸ್ಸಿನಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ಪ್ರೀತಿಕಾ ಈ ಬಾರಿ ವನಿತೆಯ ಡಬಲ್ಸ್‌ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಕನಕ್‌ ಜಾ (ಟೇಬಲ್‌ ಟೆನಿಸ್‌, ಕೆನಡ):  ಐಟಿ ಉದ್ಯೋಗಿಯಾಗಿರುವ ಮುಂಬಯಿಯ ಕರುಣಾ ಹಾಗೂ ಅರುಣಾ ದಂಪತಿಯ ಮಗಳಾಗಿರುವ ಕನಕ್‌ ಕ್ಯಾಲಿಫೋರ್ನಿಯಾದಲ್ಲಿ ಟೇಬಲ್‌ ಟೆನಿಸ್‌ ತರಬೇತಿ ಪಡೆದರು. ಇವರ ಸಹೋದರಿ ಪ್ರಾಚಿ ಕೂಡ ಟಿಟಿ ಆಟಗಾರ್ತಿ. 24 ವರ್ಷದ ಕನಕ್‌ ನಾಲ್ಕು ಬಾರಿ ಯುಎಸ್‌ ರಾಷ್ಟ್ರೀಯ ಚಾಂಪಿಯನ್‌ ಹಾಗೂ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ ಮಾಡಿರುತ್ತಾರೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಅಮೆರಿದಕ ಅತ್ಯಂತ ಕಿರಿಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಕನಕ್‌ ಪಾತ್ರರಾಗಿದ್ದಾರೆ. 2018ರಲ್ಲಿ ಅರ್ಜೆಂಟೀನಾದಲ್ಲಿ ನಡೆದ  ಯೂಥ್‌ ಒಲಿಂಪಿಕ್ಸ್‌ನಲ್ಲಿ ಅಮೆರಿಕದ ಪರ ಪದಕ ಗೆದ್ದ ಮೊದಲ ಟೇಬಲ್‌ ಟೆನಿಸ್‌ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶಾಂತಿ ಪೆರೇರಾ, (ಅಥ್ಲೆಟಿಕ್ಸ್‌, ಸಿಂಗಾಪುರ):  ಸಿಂಗಾಪುರದ ಓಟದ ರಾಣಿ ಎಂದೇ ಜನಪ್ರಿಯಗೊಂಡಿರುವ ವೆರೋನಿಕಾ ಶಾಂತಿ ಪೆರೇರಾ ಕೇರಳ ಮೂಲದವರು. ಅವರ ಅಜ್ಜ ಅಜ್ಜಿ ತಿರುವನಂತಪುರದವರು. ಕಳೆದ ವರ್ಷ ಶಾಂತಿ ಪೆರೇರಾ 100 ಮೀ. ಓಟದಲ್ಲಿ ಬೆಳ್ಳಿ ಗೆಲ್ಲುವ ಮೂಲಕ  49 ವರ್ಷಗಳ ಬಳಿಕ ಏಷ್ಯನ್‌ ಗೇಮ್ಸ್‌ನ ಟ್ರ್ಯಾಕ್‌ ಮತ್ತು ಫೀಲ್ಡ್‌ನಲ್ಲಿ ಸಿಂಗಾಪುರಕ್ಕೆ ಮೊದಲ ಪದಕ ತಂದಿತ್ತರು. ಪ್ಯಾರಿಸ್‌ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಸಿಂಗಾಪುರದ ಧ್ವಜ ಹಿಡಿದು ಪಥ ಸಂಚಲನದಲ್ಲಿ ಮುನ್ನಡೆಯಲಿರುವ ಶಾಂತಿ ಪೆರೇರಾ, ಪ್ಯಾರಿಸ್‌ನಲ್ಲಿ 100ಮೀ ಓಟದಲ್ಲಿ ಸ್ಪರ್ಧಿಸಲಿದ್ದಾರೆ.

ಅಮರ್‌ ಧೇಸಿ (ಕುಸ್ತಿ, ಕೆನಡಾ):  ಬ್ರಿಟಿಷ್‌ ಕೊಲಂಬಿಆದ ಸರ್ರೆಯಲ್ಲಿ ಜನಿಸಿದ ಅಮರ್‌ವೀರ್‌ ತಂದೆ ಬಲ್ಬೀರ್‌ ಧೇಸಿ  ಕುಸ್ತಿಯಲ್ಲಿ ಗ್ರೀಕೋ ರೋಮನ್‌ ರಾಷ್ಟ್ರೀಯ ಚಾಂಪಿಯನ್‌. ಪಂಜಾಬ್‌ನ ಜಲಂಧರ್‌ ಜಿಲ್ಲೆಯ ಸಂಗ್ವಾಲ್‌ ಮೂಲದವರು. ಎನ್‌ಐಎಸ್‌ ಪಟಿಯಾಲದಲ್ಲಿ ತರಬೇತಿ ಪಡೆದು ಪಂಜಾಬ್‌ ಪೊಲೀಸ್‌ನಲ್ಲಿ ಉದ್ಯೋಗ ದೊರೆತರೂ 1979ರಲ್ಲಿ ಕೆನಡಾಕ್ಕೆ ವಲಸೆ ಹೋದರು. ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಭಾರತದ ಯೋಗೀಶ್ವರ್‌ ದತ್ತ ಅವರ ವೀಡಿಯೋ ನೋಡಿ ಸ್ಫೂರ್ತಿ ಪಡೆದು 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ. 125ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮರ್‌ಗೆ 13ನೇ ಸ್ಥಾನ ಲಭಿಸಿತ್ತು. ನಂತರ ಪಾನ್‌ ಅಮೆರಿಕನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ, ಬಳಿಕ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆ ಮಾಡಿದ. ಪ್ಯಾರಿಸ್‌ನಲ್ಲಿ ಅಮರ್‌ 125ಕೆಜಿ ಫ್ರೀಸ್ಟೈಲ್‌ ಕುಸ್ತಿಯಲ್ಲಿ ಸ್ಪರ್ಧಿಸಲಿದ್ದಾರೆ.

Related Articles