Friday, November 22, 2024

ಆಸ್ಟ್ರೇಲಿಯಾ 20 ವಿಶ್ವಕಪ್‌ಗಳ ಚಾಂಪಿಯನ್‌!

ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಭಾರತವನ್ನು 6 ವಿಕೆಟ್‌ ಅಂತರದಲ್ಲಿ ಸೋಲಿಸಿದ ಆಸ್ಟ್ರೇಲಿಯಾ ಆರನೇ ಬಾರಿಗೆ ಐಸಿಸಿ ಪುರುಷರ ವಿಶ್ವಕಪ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು. ಇದರೊಂದಿಗೆ ಆಸೀಸ್‌ನ ಪುರುಷ ಹಾಗೂ ಮಹಿಳಾ ತಂಡ ಸೇರಿ ಒಟ್ಟು 20 ವಿಶ್ವಕಪ್‌ ಕಿರೀಟಗಳಿಗೆ ಮುತ್ತಿಟ್ಟಿತು. Australians won total 20 ICC cricket world cup.

ಪುರುಷರ ವಿಶ್ವಕಪ್‌ನಲ್ಲಿ 1987, 1999, 2003, 2007, 2015 ಹಾಗೂ 2023, ಪುರುಷರ ಟಿ20 ವಿಶ್ವಕಪ್‌ 2021, ಮಹಿಳಾ ವಿಶ್ವಕಪ್‌ 1978, 1982, 1988, 1997, 2005, 2013, 2022. ಮಹಿಳಾ ಟಿ20 ಪ್ರಶಸ್ತಿ, 2010, 2012, 2014, 2018, 2020, 2023. ಹೀಗೆ ಆಸೀಸ್‌ ತಂಡಗಳು ಒಟ್ಟು 20 ವಿಶ್ವ ಕಿರೀಟವನ್ನು ಧರಿಸಿವೆ.

ಭಾರತ ಸತತ 10 ಪಂದ್ಯಗಳನ್ನು ಗೆದ್ದು ಫೈನಲ್‌ ಪ್ರವೇಶಿಸಿತ್ತು. ಪ್ರಶಸ್ತಿ ಗೆಲ್ಲುವ ಫೇವರಿಟ್‌ ಕೂಡ ಆಗಿತ್ತು. ಅದೇ ರೀತಿ ಆಸ್ಟ್ರೇಲಿಯಾ ಮೊದಲ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದರೂ ಉಳಿದ 8 ಪಂದ್ಯಗಳಲ್ಲಿ ಸತತ ಜಯ ಕಂಡು ಪ್ರಶಸ್ತಿ ಗೆಲ್ಲುವ ಫೇವರಿಟ್‌ ಆಗಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು.

ಫೈನಲ್‌ ಪಂದ್ಯದಲ್ಲಿ ಭಾರತ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಯಿತು. ರೋಹಿತ್‌ ಶರ್ಮಾ (47), ವಿರಾಟ್ ಕೊಹ್ಲಿ (54) ಹಾಗೂ ಕೆ.ಎಲ್‌. ರಾಹುಲ್‌ (66) ರನ್‌ ಗಳಿಸುವ ಮೂಲಕ ಭಾರತ ಕೇವಲ 240 ರನ್‌ ದಾಖಲಿಸಿತು. ಉಳಿದ ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡದಿರುವುದು ತಂಡದ ಅಲ್ಪ ಮೊತ್ತಕ್ಕೆ ಕಾರಣವಾಯಿತು.

ಅಪಾಯಕಾರಿ ಆಟಗಾರ ಡೇವಿಡ್‌ ವಾರ್ನರ್‌‌ ಅವರ ವಿಕೆಟ್‌ ಬೇಗನೇ ಪಡೆಯುವ ಮೂಲಕ ಮೊಹಮ್ಮದ್‌‌ ಶಮಿ ಭಾರತದ ತಂಡದಲ್ಲಿ ಸಂಭ್ರಮವನ್ನುಂಟು ಮಾಡಿದ್ದರು. ಮಿಚೆಲ್‌ ಮಾರ್ಷ್‌ ಹಾಗೂ ಸ್ಮಿತ್‌ ಅವರ ವಿಕೆಟ್‌ ಕಬಳಿಸುವ ಮೂಲಕ ಬುಮ್ರಾ ಭಾರತಕ್ಕೆ ಜಯದ ಹಾದಿಯನ್ನು ತೋರಿಸಿದ್ದರು. ಆಸ್ಟ್ರೇಲಿಯಾ 47 ರನ್‌ಗೆ 3 ವಿಕೆಟ್‌ ಕಳೆದುಕೊಂಡಿದ್ದಾಗ ಭಾರತದ ಜಯದ ಹಾದಿ ಸುಗಮವಾಗುತ್ತದೆ ಎಂದು ಎಲ್ಲರೂ ಊಹಿಸಿದ್ದರು. ಅಂಗಣದಲ್ಲಿ ಸೇರಿದ ಲಕ್ಷಾಂತರ ಪ್ರೇಕ್ಷಕರಲ್ಲೂ ಸಂಭ್ರಮ ಮನೆ ಮಾಡಿತ್ತು. ಆದರೆ ಟ್ರೆವಿಸ್‌ ಹೆಡ್‌ (137) ಹಾಗೂ ಮಾರ್ನಸ್‌ ಲಾಬುಷಾಗ್ನೆ (58*) ನೆರೆದ ಪ್ರೇಕ್ಷಕರನ್ನು ಮೌನಕ್ಕೆ ಸರಿಯುವಂತೆ ಮಾಡಿದರು. ಗ್ಲೆನ್‌ ಮ್ಯಾಕ್ಸ್‌ವೆಲ್‌ ಜಯದ ರನ್‌ ಗಳಿಸುವುದರ ಮೂಲಕ ಆಸ್ಟ್ರೇಲಿಯಾ ಆರನೇ ಬಾರಿಗೆ ವಿಶ್ವಕಪ್‌ ಗೆದ್ದು ಸಂಭ್ರಮಿಸಿತು.

Related Articles