ಲಖ್ನೋ:
ಹಾಲಿ ಚಾಂಪಿಯನ್ ಸಮೀರ್ ವರ್ಮಾ, ಮಾಜಿ ಚಾಂಪಿಯನ್ ಗಳಾದಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ಅವರು ಸೈಯದ್ ಮೋದಿ ಅಂತಾರಾಷ್ಟ್ರೀಯ ವಿಶ್ವ ಸೂಪರ್ ಟೂರ್ 330ರ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಮಹಿಳೆಯರ ಸಿಂಗಲ್ಸ್ ನಲ್ಲಿ ಎರಡನೇ ಶ್ರೇಯಾಂಕದ ಸೈನಾ ನೆಹ್ವಾಲ್ ಅವರು ಅಮೊಲಿಕಾ ಸಿಂಗ್ ಸಿಸೊಡಿಯಾ ಅವರನ್ನು 21-14, 21-9 ಅಂತರದಲ್ಲಿ ಸೋಲಿಸಿದರು. ಇನ್ನೂ ಪುರುಷರ ಸಿಂಗಲ್ಸ್ ನಲ್ಲಿ ಪರುಪಳ್ಳಿ ಕಶ್ಯಪ್ ಅವರು ಇಂಡೋನೇಷ್ಯಾದ ಫಿರ್ಮಾನ್ ಅಬ್ದುಲ್ ಖೋಲಿಕ್ ಅವರನ್ನು 9-21, 22-20, 21-8 ಅಂತರದಲ್ಲಿ ಮಣಿಸಿ ಅಂತಿಮ ಎಂಟರಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.
ಪುರುಷರ ಸಿಂಗಲ್ಸ್ ಮತ್ತೊಂದು ಪಂದ್ಯದಲ್ಲಿ ಮೂರನೇ ರ್ಯಾಂಕಿಂಗ್ ಸಮೀರ್ ವರ್ಮಾ ಅವರು ಚೀನಾದ ಝಾವೊ ಜುನ್ಪೆಂಗ್ ಅವರನ್ನು 22-20, 21-17 ಅಂತರದಲ್ಲಿ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದರು.