IPL ಮದ್ಯಪಾನ, ತಂಬಾಕು ಉತ್ಪನ್ನಗಳ ಪ್ರಚಾರಕ್ಕೆ ನಿಷೇಧ
ಹೊಸದಿಲ್ಲಿ: ಮೇ 22ರಿಂದ ಆರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಪಂದ್ಯಗಳ ವೇಳೆ ಮದ್ಯಪಾನ ಹಾಗೂ ತಂಬಾಕು ಉತ್ಪನ್ನಗಳ ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರಚಾರಕ್ಕೆ ನಿಷೇಧ ಹೇರುವಂತೆ ಕೇಂದ್ರ ಆರೋಗ್ಯ ಸೇವಾ ಇಲಾಖೆಯ ಮಹಾನಿರ್ದೇಶಕ ಅತುಲ್ ಗೋಯೆಲ್ ಅವರು ಐಪಿಎಲ್ ಚೇರ್ಮನ್ ಅರುಣ್ ಧುಮಾಲ್ ಅವರಿಗೆ ಪತ್ರ ಬರೆದಿದ್ದಾರೆ. Ban direct and indirect Ads related to Tobacco and alcohol: Atul Goel
“ತಂಬಾಕು ಹಾಗೂ ಮದ್ಯಪಾನ ಉತ್ಪನ್ನಗಳ ಪ್ರಚಾರ ಮಾಡುವುದನ್ನು ಐಪಿಎಲ್ ಕಟ್ಟುನಿಟ್ಟಾಗಿ ಪಾಲಿಸಬೇಕು. ಅದೇ ಹೆಸರಿನಲ್ಲಿ ಇತರ ಉತ್ಪನ್ನಗಳನ್ನು ಮಾರುವುದೂ ನಿಷೇಧವಾಬೇಕು. ಇದು ಕ್ರೀಡಾಂಗಣದಲ್ಲಿ ಮಾತ್ರವಲ್ಲ ಪಂದ್ಯ ಪ್ರಸಾರವಾಗು ಚಾನೆಲ್‌ಗಳಲ್ಲೂ ನಿಷೇಧವಾಗಬೇಕು ಎಂದಿದ್ದಾರೆ.
“ರಾಯಲ್ ಚಾಲೆಂಜರ್ಸ್ʼ ಬೆಂಗಳೂರು ತಂಡದ ಹೆಸರಿನಲ್ಲಿ ವಿಸ್ಕಿಯ ಬ್ರಾಂಡ್ ಹೆಸರೂ ಇದೆ. ಅದು ಆರ್‌ಸಿಬಿಯ ಮಾಲೀಕ ಕಂಪೆನಿಗೇ ಸೇರಿದ್ದು. ಆದ್ದರಿಂದ ಐಪಿಎಲ್ ಹತ್ತಿರವಾಗುತ್ತಿರುವಾಗ ನೀಡುವ ಇಂಥ ಹೇಳಿಕೆ ಮತ್ತು ಬರೆಯುವ ಪತ್ರಗಳು ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎನ್ನುವುದು ಮುಖ್ಯ. ಆರ್‌ಸಿಬಿಯ ಮ್ಯಾನೇಜ್‌ಮೆಂಟ್ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಆರ್‌ಸಿಬಿ ಬಾರ್ & ಕೆಫೆಯನ್ನೇ ಆರಂಭಿಸಿರುವಾಗ ಈ ಜಾಹೀರಾತುಗಳಿಗೆ ಸಂಬಂಧಿಸಿದ ನಿಯಮಗಳು ಎಷ್ಟು ಅನ್ವಯವಾಗುತ್ತದೆ ಎಂಬದು ಮುಖ್ಯ.
ಆಟಗಾರರು ಮಾತ್ರವಲ್ಲ ವೀಕ್ಷಕ ವಿವರಣೆಗಾರರು ಕೂಡ ಪಂದ್ಯಗಳ ವೀಕ್ಷಕ ವಿವರಣೆ ನೀಡುವಾಗ ಮದ್ಯ ಹಾಗೂ ತಂಬಾಕು ಉತ್ಪನ್ನಗಳ ಪ್ರಚಾರ ಮಾಡಬಾರದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ರೀತಿಯ ಮದ್ಯ ಹಾಗೂ ತಂಬಾಕುಗಳ ಉತ್ಪನ್ನಗಳನ್ನು ಜಾಹೀರಾತುಗಳಲ್ಲಿ ಬಳಸುವುದು ನಿಷೇಧವೆಂದು ಗೊತ್ತಿದ್ದರೂ ಅನೇಕ ಮದ್ಯ ಉತ್ಪನ್ನಗಳ ಹೆಸರಿನಲ್ಲಿ ನೀರು ಮತ್ತು ಸೋಡಗಳನ್ನು ಮಾರಾಟ ಮಾಡಲಾಗುತ್ತಿದೆ. ಚೈನೀ ಖೈನಿ ಎಂಬ ಉತ್ಪನ್ನ ಐಪಿಎಲ್ ಆರಂಭವಾದಾಗಿನಿಂದ ಇದೆ. ಈ ಬಗ್ಗೆ ಅಂದೇ ವಿರೋಧವಾಗಿತ್ತು. ಆದರೆ ಅವರು ಸ್ಪಷ್ಟೀಕರಣ ನೀಡುವಾಗ ಸಿಹಿಯಾದ ಅಡಿಕೆಪುಡಿಯ ಉತ್ಪನ್ನಗಳನ್ನು ತೋರಿಸಿದ್ದರು.
ಡ್ರೀಮ್ ಇಲೆವೆನ್‌ನಂಥ ಬೆಟ್ಟಿಂಗ್ ಆಪ್ ಫ್ಯಾಂಟೆಸಿ ಸ್ಪೋರ್ಟ್ ಆಗಿ ಭಾರತ ತಂಡದ ಹೃದಯದಲ್ಲೇ ರಾರಾಜಿಸುತ್ತಿದೆ. ಈ ಬಗ್ಗೆ ಯಾರು ಏನು ಮಡಾಲು ಸಾಧ್ಯ? ಕ್ರಿಕೆಟಿಗರೇ ಈ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುತ್ತಿದ್ದಾರೆ. ಸಿನಿಮಾ ಹೀರೋಗಳೇ ವಿಮಲ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅತುಲ್ ಗೋಯೆಲ್ ಅವರ ಉದ್ದೇಶ ಉತ್ತಮವಾಗಿರಬಹುದು ಆದರೆ ಇದನ್ನು ಕಾರ್ಯರೂಪಕ್ಕೆ ತರುವುದು ಯಾರು?