Thursday, November 21, 2024

ಬೆಂಗಳೂರಿನಲ್ಲಿ ಏಷ್ಯನ್‌ ಇಕ್ವೆಸ್ಟ್ರಿಯನ್‌ ಫೆಡರೇಷನ್‌ ಕಪ್‌

ಬೆಂಗಳೂರು: 14 ವರ್ಷಗಳ ನಂತರ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಇಕ್ವೆಸ್ಟ್ರಿಯನ್‌ (ಕುದುರೆ ಸವಾರಿ) ಚಾಂಪಿಯನ್‌ಷಿಪ್‌ ನಡೆಯಲಿದೆ. ಏಷ್ಯನ್‌ ಇಕ್ವೆಸ್ಟ್ರಿಯನ್‌ ಫೆಡರೇಷನ್‌ ಕಪ್‌ ಯೂಥ್‌ ನಡೆಯಲಿದೆ ಎಂದು ಭಾರತೀಯ ಇಕ್ವೆಸ್ಟ್ರಿಯನ್‌ ಫೆಡರೇಷನ್‌ ಪ್ರಕಟಣೆಯಲ್ಲಿ ತಿಳಿಸಿದೆ. Bangalore to host Asian Equestrian Federation Cup Youth

ಅಕ್ಟೋಬರ್‌ 11 ರಿಂದ 13ರ ವರೆಗೆ ಬೆಂಗಳೂರಿನ Surge Stable ನಲ್ಲಿ ನಡೆಯಲಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತವೂ ಸೇರಿದಂತೆ 11 ರಾಷ್ಟ್ರಗಳಿಂದ 12 ರೈಡರ್‌ಗಳು ಪಾಲ್ಗೊಳ್ಳಲಿದ್ದಾರೆ. ಸೂರ್ಯ ಆದಿತ್ಯ ಮತ್ತು ಅವಿಕಾ ಭಾಟಿಯಾ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಇಬ್ಬರೂ ರೈಡರ್‌ಗಳು ಇತ್ತೀಚಿಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಪ್ರದರ್ಶನ ತೋರಿದ್ದು ಮಾತ್ರವಲ್ಲದೆ, ಈ ಹಿಂದಿನ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಗೆದ್ದವರಾಗಿದ್ದಾರೆ. ಕುವೈತ್‌, ಮಲೇಷ್ಯಾ, ಪಾಕಿಸ್ತಾನ, ಇರಾನ್‌, ಹಾಂಗ್‌ಕಾಂಗ್‌, ಥಾಯ್ಲೆಂಡ್‌, ಕಾಂಬೋಡಿಯಾ, ಇಂಡೋನೇಷ್ಯಾ, ಚೈನೀಸ್‌ ತೈಪೆ ಹಾಗೂ ಉಜ್ಬೆಕಿಸ್ತಾನ್‌ ದೇಶಗಳಿಂದ ತಲಾ ಒಬ್ಬರು ಸವಾರರು ಪಾಲ್ಗೊಳ್ಳಲಿದ್ದಾರೆ.

Related Articles