Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

BCCI Contract List: ಕೆ.ಎಲ್. ರಾಹಲ್ ಈಗ ಬಿ ಗ್ರೇಡ್ ಆಟಗಾರ!

ಮುಂಬಯಿ: ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾಯ ಪ್ರದರ್ಶನ ತೋರಿದ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಆಟಗಾರ ಕೆ.ಎಲ್. ರಾಹುಲ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವಾರ್ಷಿಕ ಗುತ್ತಿಗೆಯಲ್ಲಿ (BCCI Contract List) ಹಿಂಬಡ್ತಿ ನೀಡಿದ್ದು ಅವರೀಗ ಬಿ ಶ್ರೇಣಿಗೆ ತೃಪ್ತಿಪಡುವಂತಾಗಿದೆ. ಅಂದರೆ 3 ಕೋಟಿ ರೂ. ವಾರ್ಷಿಕ ಗುತ್ತಿಗೆ.

ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ರಾಹುಲ್ ಭಾರತ ತಂಡದ ಪರ ಆಡುವಾಗ ಕಳಪೆ ಪ್ರದರ್ಶನ ನೀಡುತ್ತಿರುವುದೇ ಬಿಸಿಸಿಐ ಈ ತೀರ್ಮಾನ ಕೈಗೊಳ್ಳಲು ಕಾರಣವಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ರಾಹುಲ್ ಮೂರು ಇನ್ನಿಂಗ್ಸ್ಗಳಲ್ಲಿ ಆಡಿದ್ದು 20, 17, 1 ರನ್ ಗಳಿಸಿರುತ್ತಾರೆ. ಇದನ್ನು ಗಮನಿಸಿದ ಆಯ್ಕೆ ಸಮಿತಿ ನಂತರದ ಎರಡು ಟೆಸ್ಟ್ ಪಂದ್ಯಗಳಿಂದ ರಾಹುಲ್ ಅವರನ್ನು ಕೈ ಬಿಟ್ಟಿತ್ತು.

ಈ ಮೊದಲು ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲೂ ರಾಹುಲ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ನಂತರ ಆಸೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಒಂದು ಪಂದ್ಯದಲ್ಲಿ 75* ಆಡಿದರೂ ನಂತರದ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ.

ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ, ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ರವೀಮದ್ರ ಜಡೇಜಾ ಎ+ ಶ್ರೇಣಿಯ ಆಟಗಾರರು. ಈ ಹಿಂದೆ ಅಗ್ರ ಶ್ರೇಣಿಯಲ್ಲಿ ಕೇವಲ ಮೂವರು ಆಟಗಾರರು ಇದ್ದರು, ಆದರೆ ಈ ಬಾರಿ ರವೀಂದ್ರ ಜಡೇಜಾ ಅವರಿಗೆ ಪದೋನ್ನತಿ ನೀಡಿ ಎ+ ಗ್ರೇಡ್ ನೀಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವುದಕ್ಕಾಗಿ ಜಡೇಜಾ 7 ಕೋಟಿ ರೂ.ಗಳ ವಾರ್ಷಿಕ ಗುತ್ತಿಗೆ ಪಡೆದಿದ್ದಾರೆ.

ಒಟ್ಟು 27 ಆಟಗಾರರು ವಾರ್ಷಿಕ ಗುತ್ತಿಗೆ ಪಡೆದಿದ್ದು, ಎ+ ಆಟಗಾರರು 7 ಕೋಟಿ, ಎ ಶ್ರೇಣಿಯ ಆಟಗಾರರು 5 ಕೋಟಿ ರೂ., ಬಿ. ಶ್ರೇಣಿಯ ಆಟಗಾರರು 3 ಕೋಟಿ ರೂ. ಮತ್ತು ಸಿ ಶ್ರೇಣಿಯ ಆಟಗಾರರು 1 ಕೋಟಿ ರೂ. ಮೊತ್ತವನ್ನು ಗಳಿಸಲಿದ್ದಾರೆ.

A+ ಗ್ರೇಡ್ ಆಟಗಾರರು:

ರೋಹಿತ್ ಶರ್ಮಾ,

ವಿರಾಟ್ ಕೊಹ್ಲಿ

ಜಸ್ಪ್ರೀತ್ ಬುಮ್ರಾ

ರವೀಂದ್ರ ಜಡೇಜಾ

A ಗ್ರೇಡ್ ಆಟಗಾರರು:

ಹಾರ್ದಿಕ್ ಪಾಂಡ್ಯ

ಆರ್. ಅಶ್ವಿನ್

ಮೊಹಮ್ಮದ್ ಶಮಿ

ರಿಶಬ್ ಪಂತ್

ಅಕ್ಷರ್ ಪಟೇಲ್

ಇದನ್ನೂ ಓದಿ : IPL 2023 CSK vs GT: ಮುಖೇಶ್ ಚೌಧರಿ ಬದಲಿಗೆ ಸಿಎಸ್ಕೆ ಸೇರಿದ ಆಕಾಶ್ ಸಿಂಗ್

ಇದನ್ನೂ ಓದಿ :ICC ODI world cup 2023 ಏಕದಿನ ವಿಶ್ವಕಪ್‌ ಕ್ರಿಕೆಟ್‌: ಅಹಮದಾಬಾದ್‌ನಲ್ಲಿ ಫೈನಲ್‌

B ಗ್ರೇಡ್ ಆಟಗಾರರು:

ಚೇತೇಶ್ವರ ಪೂಜಾರ

ಕೆ.ಎಲ್ ರಾಹುಲ್

ಶ್ರೇಯಸ್ ಅಯ್ಯರ್

ಮೊಹಮ್ಮದ್ ಸಿರಾಜ್

ಸೂರ್ಯಕುಮಾರ್ ಯಾದವ್

ಶುಭ್ಮನ್ ಗಿಲ್

C ಶ್ರೇಣಿಯ ಆಟಗಾರರು

ಕುಲದೀಪ್ ಯಾದವ್

ಶಿಖರ್ ಧವನ್

ಶಾರ್ದೂಲ್ ಠಾಕೂರ್

ಇಶಾನ್ ಕಿಶಾನ್

ದೀಪಕ್ ಹೂಡಾ

ಯಜುವೇಂದ್ರ ಚಹಲ್

ಉಮೇಶ್ ಯಾದವ್

ವಾಷಿಂಗ್ಟನ್ ಸುಂದರ್

ಸಂಜು ಸ್ಯಾಮ್ಸನ್

ಅರ್ಶದೀಪ್ ಸಿಂಗ್

ಕೆಎಸ್ ಭರತ್.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.