Friday, November 22, 2024

ಗಿಲ್‌, ಜಡೇಜಾ ಮಿಂಚು, ಭಾರತಕ್ಕೆ “ಶ್ರೇಯಸ್ಸು”

Sportsmail  

ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಆರಂಭಿಕ ಆಟಗಾರ ಶುಭ್ಮನ್‌ ಗಿಲ್‌, ರವೀಂದ್ರ ಜಡೇಜಾ ಮತ್ತು ಶ್ರೇಯಸ್‌ ಅಯ್ಯರ್‌ ಅವರ ಅರ್ಧ ಶತಕ ಭಾರತಕ್ಕೆ ಮೊದಲ ದಿನದ ಗೌರವ ನೀಡಿದೆ.

ಗಿಲ್‌ (52), ಜಡೇಜಾ (50*) ಮತ್ತು ಅಯ್ಯರ್‌ (75*) ಅವರ ಆಕರ್ಷಕ ಬ್ಯಾಟಿಂಗ್‌ ನೆರವಿನಿಂದ ಭಾರತ ಮೊದಲ ದಿನದಾಟ ಮುಕ್ತಯಗೊಂಡಾಗ 4 ವಿಕೆಟ್‌ ನಷ್ಟಕ್ಕೆ 258 ರನ್‌ ಗಳಿಸಿದೆ. ನ್ಯೂಜಿಲೆಂಡ್‌ ಪರ ಕೇಲ್‌ ಜಾಮಿಸನ್‌ 43 ರನ್‌ಗೆ 3 ವಿಕೆಟ್‌ ಗಳಿಸಿ ಭಾರತದ ರನ್‌ ಗಳಿಕೆಗೆ ಕಡಿವಾಣ ಹಾಕಿದರು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತದ ಪರ ಆರಂಭಿಕ ಆಟಗಾರ ಕನ್ನಡಿಗ ಮಯಾಂಕ್‌ ಅಗರ್ವಾನ್‌ ಮತ್ತೊಮ್ಮೆ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು. ಕೇವಲ ಕೇವಲ 13 ರನ್‌ ಗಳಿಸಿ ನಿರಾಸೆ ಮೂಡಿಸಿದರು. ಆದರೆ ತಾಳ್ಮೆಯ ಆಟ ಪ್ರದರ್ಶಿಸಿದ ಗಿಲ್‌, 93 ಎಸೆತಗಳನ್ನೆದುರಿಸಿ 5 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 52 ರನ್‌ ಸಿಡಿಸಿ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳುವಂತೆ ಮಾಡಿದರು. ಚೇತೇಶ್ವರ ಪೂಜಾರ (26) ಮತ್ತು ನಾಯಕ ಅಜಿಂಕ್ಯಾ ರಹಾನೆ (35) ಕೂಡ ಕಿವೀಸ್‌ ದಾಳಿಯನ್ನು ಸಮರ್ಪಕವಾಗಿ ಎದುರಿಸದೆ ವಿಕೆಟ್‌ ಒಪ್ಪಿಸಿದರು.

ಚೊಚ್ಚಲ ಪಂದ್ಯವನ್ನಾಡಿದ ಶ್ರೇಯಸ್‌ ಅಯ್ಯರ್‌ ಅರ್ಧ ಶತಕದೊಂದಿಗೆ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. 136 ಎಸೆತಗಳನ್ನೆದುರಿಸಿದ ಅಯ್ಯರ್‌ 7 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ ಅಜೇಯ 75 ರನ್‌ ಸಿಡಿಸಿ ಎರಡನೇ ದಿನದಲ್ಲಿ ಶತಕ ಗಳಿಸುವ ಆತ್ಮವಿಶ್ವಾಸ ತೋರಿದ್ದಾರೆ. ಕ್ರಿಕೆಟ್‌ನ ಯಾವುದೇ ಮಾದರಿ ಇರಲಿ ಅಲ್ಲಿ ತಮ್ಮದೊಂದು ಛಾಪು ಮೂಡಿಸುವ ರವೀಂದ್ರ ಜಡೇಜಾ 100 ಎಸೆಗಳನ್ನೆದುರಿಸಿ 6 ಬೌಂಡರಿ ನೆರವಿನಿಂದ ಅಜೇಯ 50 ರನ್‌ ಸಿಡಿಸಿ ಎರಡನೇ ದಿನದವನ್ನು ಅಬ್ಬರದ ಆಟಕ್ಕೆ ಕಾಯ್ದಿರಿಸಿದ್ದಾರೆ.

Related Articles