ಮುಂಬಯಿ: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ಆಯ್ಕೆಯಾಗಿರುವ ಗೌತಮ್ ಗಂಭೀರ್ ಅವರು ಕರ್ನಾಟಕದ ವೇಗದ ಬೌಲರ್ ವಿನಯ್ ಕುಮಾರ್ ಅವರನ್ನು ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡಬೇಕೆಂದು ಬೇಡಿಕೆಯನ್ನಿತ್ತಿದ್ದಾರೆ ಎಂಬ ಸುದ್ದಿ ನಿನ್ನೆಯವರೆಗೂ ಹಬ್ಬಿತ್ತು. ಆದರೆ ಬುಧವಾರ ANI ಸುದ್ದಿ ಸಂಸ್ಥೆ ಮಾಡಿರುವ ವರದಿ ಪ್ರಕಾರ ವಿನಯ್ ಕುಮಾರ್ ಬದಲು ಬಿಸಿಸಿಐ ಮಾಜಿ ವೇಗಿ ಜಹೀರ್ ಖಾನ್ ಅವರನ್ನು ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. BCCI turned down Gambhir request, now Zaheer Khan is front runner for Bowling coach.
2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಜಹೀರ್ ಖಾನ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 610 ವಿಕೆಟ್ ಗಳನ್ನು ಗಳಿಸಿರುತ್ತಾರೆ. ಜಹೀರ್ ಹಾಗೂ ವಿನಯ್ ಕುಮಾರ್ ನಡುವೆ ಆಯ್ಕೆಯ ವಿಷಯ ಬಂದಾಗ ಜಹೀರ್ ಅಗ್ರ ಸ್ಥಾನದಲ್ಲಿ ನಿಲ್ಲುವುದು ಸಹಜ, 2011ರ ವಿಶ್ವಕಪ್ ಗೆದ್ದಿರುವ ಜಹೀರ್ ಖಾನ್ ಜೊತೆಯಲ್ಲಿ ಬಿಸಿಸಿಐ ಗಮನದಲ್ಲಿರುವ ಮಾಜಿ ವೇಗಿ ಲಕ್ಷ್ಮೀಪತಿ ಬಾಲಾಜಿ.
“ಜಹೀರ್ ಖಾನ್ ಹಾಗೂ ಲಕ್ಷ್ಮೀಪತಿ ಬಾಲಾಜಿ ಅವರ ಹೆಸರು ಬಿಸಿಸಿಐ ಚರ್ಚೆಯಲ್ಲಿದೆ. ವಿನಯ್ ಕುಮಾರ್ ಅವರ ಹೆಸರು ಚರ್ಚೆಯಲ್ಲಿ ಇಲ್ಲ,” ಎಂದು ಬಿಸಿಸಿಐ ಮೂಲಗಳು ಹೇಳಿರುವುದಾಗಿ ANI ವರದಿ ಮಾಡಿದೆ. 2011ರ ವಿಶ್ವಕಪ್‌ನಲ್ಲಿ ಜಹೀರ್ ಖಾನ್ 21 ವಿಕೆಟ್ ಗಳಿಸಿರುವುದು ಕ್ರಿಕೆಟ್ ಜಗತ್ತಿಗೆ ತಿಳಿದಿರುವ ವಿಷಯ.