Thursday, November 21, 2024

ಭಾರತ ತಂಡಕ್ಕೆ ರಾಹುಲ್‌ ದ್ರಾವಿಡ್‌ ಅಗತ್ಯವಿದೆ

ಮುಂಬಯಿ: ಭಾರತದ ತಂಡ ವಿಶ್ವಕಪ್‌ ಫೈನಲ್‌ ಸೀತಿರಬಹುದು, ಆದರೆ ಸದ್ಯದ ಸ್ಥಿತಿಯಲ್ಲಿ ಟೀಮ್‌ ಇಂಡಿಯಾ ಕ್ರಿಕೆಟ್‌ ಜಗತ್ತಿನ ಬಲಿಷ್ಠ ತಂಡವೆನಿಸಿದೆ. ಇದಕ್ಕೆ ಮುಖ್ಯ ಕಾರಣ ರಾಹುಲ್‌ ದ್ರಾವಿಡ್‌ ಅವರು ತಂಡದಲ್ಲಿ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿರುವುದು. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ರಾಹುಲ್‌ ದ್ರಾವಿಡ್‌ ಅವರೇ ಕೋಚ್‌ ಆಗಿ ಮುಂದುವರಿದರೆ ತಂಡದ ಮನೋಬಲ ಇನ್ನಷ್ಟು ಹೆಚ್ಚಲಿದೆ. BCCI want Rahul Dravid to continue as Team India head coach.

ಈ ಕಾರಣಕ್ಕಾಗಿಯೇ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿ) ರಾಹುಲ್‌ ದ್ರಾವಿಡ್‌ ಅವರ ಗುತ್ತಿಗೆಯನ್ನು ಎರಡು ವರ್ಷಕ್ಕೆ ವಿಸ್ತರಿಸಲು ತೀರ್ಮಾನಿಸಿದೆ. ದ್ರಾವಿಡ್‌ ಅವರ ತರಬೇತಿಯಲ್ಲಿ ಭಾರತ ವಿಶ್ವಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಮತ್ತು ವಿಶ್ವಕಪ್‌ನಲ್ಲಿ ರನ್ನರ್ಸ್‌ ಅಪ್‌ ಸ್ಥಾನ ಗಳಿಸಿತ್ತು. ಡಿಸೆಂಬರ್‌ 10 ರಿಂದ ಜನವರಿ 7ರ ವರೆಗೆ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಟಿ20 ಸರಣಿ, 3 ಪಂದ್ಯಗಳ ಏಕದಿನ ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ. ಕೆಲವು ದಿನಗಳ ಹಿಂದೆ ರಾಹುಲ್‌ ದ್ರಾವಿಡ್‌ ಕೋಚ್‌ ಆಗಿ ಮುಂದುವರಿಯಲು ಆಸಕ್ತಿ ಇಲ್ಲ ಎಂಬ ಹೇಳಿಕೆ ನೀಡಿದ್ದರು.

ದ್ರಾವಿಡ್‌ ಅವರನ್ನು ತಂಡದ ಪ್ರಧಾನ ಕೋಚ್‌ ಆಗಿ ಮುಂದುವರಿಸುವ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜೆ ಶಾ ಕಳೆದ ವಾರ ಮಾತುಕತೆ ನಡೆಇಸಿದ್ದಾರೆ. ಅಂತಿಮವಾಗಿ ಗುತ್ತಿಗೆಗೆ ಸಹಿ ಮಾಡುವುದು ಬಾಕಿ ಉಳಿದಿದೆ. ಆದರೆ ಗುತ್ತಿಗೆಗೆ ಸಹಿ ಮಾಡದೆ ದ್ರಾವಿಡ್‌ ಪ್ರಯಾಣ ಬೆಳೆಸುವುದು ಸಂಶಯವಿದೆ. ಟಿ20 ಸರಣಿಗೆ ಅಸಾಧ್ಯವಾದರೂ ಟೆಸ್ಟ್‌ ಸರಣಿಯಲ್ಲಿ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ.

ದ್ರಾವಿಡ್‌ ಅವರ ಬದಲಿಗೆ ವಿವಿಎಸ್‌ ಲಕ್ಷ್ಮಣ್‌ ಅವರನ್ನು ಪ್ರಧಾನ ಕೋಚ್‌ ಆಗಿ ಆಯ್ಕೆ ಮಾಡಲಾಗುವುದು ಎಂಬ ಸುದ್ದಿ ಹಬ್ಬಿತ್ತು. ಆದರೆ ಎನ್‌ಸಿಎದಲ್ಲಿ ಸಾಕಷ್ಟು ಜವಾಬ್ದಾರಿ ಹೊಂದಿರುವ ಲಕ್ಷ್ಮಣ್‌ ಅವರಿಗೆ ಮುಂದೆ U19 ವಿಶ್ವಕಪ್‌ಗೂ ತಂಡವನ್ನು ಸಜ್ಜುಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ದ್ರಾವಿಡ್‌ ಅವರು ಮೊದಲ ಆಯ್ಕೆಯಾಗಿರುತ್ತಾರೆ.

ರಾಹುಲ್‌ ದ್ರಾವಿಡ್‌ ಅವರು ತಂಡದಲ್ಲಿದ್ದರೇನೇ ಸ್ಫೂರ್ತಿ. ತಂಡದ ಆಟಗಾರರು ಯಾವುದೇ ಒತ್ತಡಕ್ಕೆ ಸಿಲುಕದೆ ನೈಜ ಪ್ರದರ್ಶನ ತೋರುತ್ತಾರೆ. ಸಮಗ್ರ ಪ್ರದರ್ಶನ ನೀಡುತ್ತಾರೆ. ಈ ಕಾರಣಕ್ಕಾಗಿ ಭಾರತ ತಂಡದಲ್ಲಿ ಅವರು ಕೋಚ್‌ ಆಗಿ ಮುಂದುವರಿಯುವುದು ಉತ್ತಮ ನಿರ್ಧಾರ.

Related Articles