Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ISL BFCvPFC: ಅಂಕ ಹಂಚಿಕೊಂಡ ಬೆಂಗಳೂರು ಮತ್ತು ಪಂಜಾಬ್‌

ಬೆಂಗಳೂರು: ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ ಜಯಕ್ಕಾಗಿ ಹಾತೊರೆಯುತ್ತಿರುವ ಬೆಂಗಳೂರು ಎಫ್‌ಸಿ ಹಾಗೂ ಪಂಜಾಬ್‌ ಎಫ್‌ಸಿ ತಂಡಗಳು ಗುರುವಾಗ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 3-3 ಗೋಲುಗಳಲ್ಲಿ ಡ್ರಾ ಸಾಧಿಸಿ ಅಂಕ ಹಂಚಿಕೊಂಡಿವೆ. Bengaluru, Panjab share spoils at Kanteerava Stadium.

ಒಂದು ಹಂತದಲ್ಲಿ ಪಂಜಾಬ್‌ ತಂಡ 3-1 ಗೋಲುಗಳ ಅಂತರದಲ್ಲಿ ಮುನ್ನಡೆ ಕಂಡಿತ್ತು, ಆದರೆ ಮೈನ್‌ ಹಾಗೂ ಜಾವಿ ಅಂತಿಮ ಹಂತದಲ್ಲಿ ಗಳಿಸಿದ ಗೋಲಿನಿಂದ ಬೆಂಗಳೂರು ಸೋಲಿನಿಂದ ಪಾರಾಯಿತು.

ಭಾನುವಾರ ನಾರ್ಥ್‌ ಈಸ್ಟ್‌ ಯುನೈಟೆಡ್‌ ವಿರುದ್ಧ ಆಡಿದ ತಂಡದಲ್ಲಿ ಬೆಂಗಳೂರಿನ ಕೋಚ್‌ ಸೈಮನ್‌ ಗ್ರೇಸನ್‌ ಮೂರು ಬದಲಾವಣೆ ಮಾಡಿದ್ದರು. ರೆಯಾನ್‌ ವಿಲಿಯಮ್ಸನ್‌ ಬದಲಿಗೆ ಕರ್ಟಿಸ್‌ ಮೈನ್‌ ಅಟ್ಯಾಕ್‌ ವಿಭಾಗದಲ್ಲಿ ಸೇರ್ಪಡೆಯಾದರು. ನಮ್ಗಯಾಲ್‌ ಭೂಟಿಯಾ ಬದಲಿಗೆ ರಾಬಿನ್‌ ಯಾದವ್‌ ಅಂಗಣಕ್ಕಿಳಿದರು. ಸುರೇಶ್‌ ವಾಂಜ್ಜಾಮ್‌ ಬದಲಿಗೆ ಹರೀಶ್‌‌ ಪಾತ್ರೆ ಸ್ಥಾನ ಗಳಿಸಿದರು. ಪಂಜಾಬ್‌ ಕೂಡ ಮೂರು ಬದಲಾವಣೆ ಮಾಡಿತ್ತು.

ಪಂಜಾಬ್‌ಗೆ ಪ್ರಭು ಅವರು ಫ್ರೀ ಕಿಕ್‌ ಮೂಲಕ ಮೊದಲ ಗೋಲು ತಂದಿತ್ತರು. ಬಳಿಕ ಬೆಂಗಳೂರು ಪರ ಪಾತ್ರೆ ಗಳಿಸಿದ ಗೋಲಿನಿಂದ ಪಂದ್ಯ 1-1ರ ಸಮಬಲದಲ್ಲಿ ಸಾಗಿತು. ಆದರೆ ಕೆಲ ಹೊತ್ತಿನಲ್ಲೇ ಪ್ರವಾಸಿ ಪಂಜಾಬ್‌ ಡಿಮಿಟ್ರಿಸ್‌ ಚಾಜಿಸಾಯಿಸ್‌ ಹೆಡರ್‌ ಮೂಲಕ ದಾಖಲಿಸಿದ ಗೋಲು ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. ಈ ನಡುವೆ ಪಂಜಾಬ್‌ 3-1ರಲ್ಲಿ ಮುನ್ನಡೆ ಕಂಡಿತು. ನಂತರ ಬೆಂಗಳೂರು ಪರ ಮೈನ್‌ ಗಳಿಸಿದ ಗೋಲಿನಿಂದ ಆತಿಥೇಯರು 2-3 ರಲ್ಲಿ ಹೋರಾಟ ಮುಂದುವರಿಸಿದರು. 68ನೇ ನಿಮಿಷದಲ್ಲಿ ಛೆಟ್ರಿ ನೀಡಿದ  ಪಾಸ್‌ ಮೂಲಕ ಜೇವಿ ಹೆರ್ನಾಂಡೀಸ್‌ ಗಳಿಸಿ ಗೋಲು ಪಂದ್ಯವನ್ನು 3-3ರಲ್ಲಿ ಸಮಬಲಗೊಳಿಸಿತು. ಡಿಸೆಂಬರ್‌‌ 8 ರಂದು ಬೆಂಗಳೂರು ತಂಡ ಮುಂಬೈ ಸಿಟಿ ವಿರುದ್ಧ ಸೆಣಸಲಿದೆ.


administrator