Thursday, March 28, 2024

ಬೆಂಗಳೂರಿನಲ್ಲಿ ಸ್ಟೀಲ್ ತಂಡಗಳ ಸೆಣಸು

ಬೆಂಗಳೂರು, ಅಕ್ಟೋಬರ್ 7

ಭಾನುವಾರ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಆತಿಥೇಯ ಬೆಂಗಳೂರು ಎಫ್ ಸಿ  ವಿರುದ್ಧ ಜೆಮ್ಷೆಡ್ಪುರ ಎಫ್ ಸಿ ಸ್ಪರ್ಧಿಸಲಿದೆ. ಈ ಮೂಲಕ ಆಸ್ಟ್ರೇಲಿಯಾದ ಫುಟ್ಬಾಲ್ ದಿಗ್ಗಜ ಟಿಮ್ ಕಾಹಿಲ್ ಇಂಡಿಯನ್ ಸೂಪರ್ ಲೀಗ್‌ಗೆ ಪದಾರ್ಪಣೆ ಮಾಡಲಿದ್ದಾರೆ.

ಚೆನ್ನೈಯಿನ್ಯಿ ಎಫ್ ಸಿ  ವಿರುದ್ಧದ ಮೊದಲ ಪಂದ್ಯದಲ್ಲಿ ಬೆಂಗಳೂರು ತಂಡ 1-0 ಗೋಲಿನಿಂದ ಜಯ ಗಳಿಸಿದ ನಂತರ ಈಗ ಮನೆಯಂಗಣದಲ್ಲಿ ಮತ್ತೊಂದು ಪಂದ್ಯಕ್ಕೆ ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಕ್ಲೀನ್ ಶೀಟ್ ಸಾಧನೆ ಮಾಡಿದ ಆತ್ಮವಿಶ್ವಾಸದಲ್ಲಿರುವ ಕಾರ್ಲಸ್ ಕ್ವಾಡ್ರಾಟ್ ಡಿಫೆನ್ಸ್  ವಭಾಗದ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಜೆಮ್ಷೆಡ್ಪುರ ಎಫ್ಸಿಯ ಸರ್ಗಿಯೋ ಸಿಡೋಂಚ ಹಾಗೂ ಮಾರಿಯೋ ಆರ್‌ಕ್ವೆಸ್ ಮುಂಬೈ ಸಿಟಿ ವಿರುದ್ಧದ ಪಂದ್ಯದಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಜತೆಯಲ್ಲಿ ಆಸ್ಟ್ರೇಲಿಯಾದ ಪರ ನಾಲ್ಕು ವಿಶ್ವಕಪ್ ಪಂದ್ಯವನ್ನಾಡಿರುವ ಕಾಹಿಲ್ ಆಗಮನ ಟಾಟಾ ಪಡೆಯ ಬಲವನ್ನು ಹೆಚ್ಚಿಸಿದೆ. ಚೆಂಡಿನ ಮೇಲೆ ಹೆಚ್ಚಿನ ನಿಗಾವಹಿಸಿ ಆಡುವ ಜೆಮ್ಷೆಡ್ಪುರ ತಂಡದ ವಿರುದ್ಧ ಸ್ಪೇನ್‌ನ ಕೋಚ್ ಬೆಂಗಳೂರು ತಂಡದ ನೈಜ ಶಕ್ತಿಯನ್ನು ತೋರ್ಪಡಿಸಲು ಉತ್ಸುಕರಾಗಿದ್ದಾರೆ.
‘ಕಳೆದ ವಾರ ಮುಂಬೈ ವಿರುದ್ಧದ ಪಂದ್ಯವನ್ನು ಗಮನಿಸಿದ್ದೇವೆ, ಜೆಮ್ಷೆಡ್ಪುರ ಬಹಳ ಚೆನ್ನಾಗಿ ಆಡಿದೆ. ಚೆಂಡಿನ ಮೇಲೆ ಸಾಕಷ್ಟು ನಿಗಾ ವಹಿಸಿ ಆಡಿದ ತಂಡವದು. ಅವರದ್ದು ಬಹಳ ಸಂಘಟಿತ ದಾಳಿ. ಸ್ಪರ್ಧಾತ್ಮಕ  ಆಟವನ್ನು ಆಡಿ, ಸ್ಟ್ರೈಕರ್ ಗಳನ್ನು  ಹೆಚ್ಚಾಗಿ ವಿನಿಯೋಗಿಸಿಕೊಳ್ಳುವುದು ನಮ್ಮ ಗುರಿ. ಚೆನ್ನೈಯಿನ್  ತಂಡದ ವಿರುದ್ಧದ ಪಂದ್ಯದ ಪಂದ್ಯದ ದ್ವಿತಿಯಾರ್ಧದಲ್ಲಿ  ನಮಗೆ ಎಷ್ಟು ಅವಕಾಶ ಇದ್ದಿತ್ತು ಎಂಬದನ್ನು ನೀವು ಗಮನಿಸಿದ್ದೀರಿ,‘ ಎಂದು ಕ್ವಾಡ್ರಾಟ್ ಹೇಳಿದ್ದಾರೆ.
ಮುಂಬೈ ತಂಡವನ್ನು ಸೋಲಿಸುವ ಮೂಲಕ ಜೆಮ್ಷೆಡ್ಪುರ ತಂಡ ಈ ಬಾರಿ ಐಎಸ್‌ಎಲ್‌ನಲ್ಲಿ ಉತ್ತಮ ಆರಂಭ  ಕಂಡಿದೆ. ಪಂದ್ಯದಲ್ಲಿ ಪ್ರತಿಯೊಂದು ಸಂದ‘ರ್ದಲ್ಲೂ ಪ್ರಭುತ್ವ  ಸಾಧಿಸುವಲ್ಲಿ ಯಶಸ್ವಿಯಾಗಿದೆ. ಕೋಚ್ ಅವರ ಶೈಲಿಯಂತೆ ಆಡಿ ಯಶಸ್ಸು ಕಂಡಿದೆ.
ಪಂದ್ಯದ ಕೊನೆಯ ವರೆಗೂ ಹೋರಾಟವನ್ನು ಮುಂದುವರಿಸಿದ ತಂಡ. ಕೋಚ್ ಹೇಳಿದ ರೀತಿಯಲ್ಲೇ ಆಟವನ್ನು ಪ್ರದರ್ಶಿಸಿದೆ. ರಕ್ಷಣಾ ವಿಭಾಗ ಅತ್ಯಂತ ಸಂಘಟಿತವಾಗಿ ಕಾರ್ಯನಿರ್ವಹಿಸಿತ್ತು. ಆದರೆ ಮಿಕು, ಸುನಿಲ್ ಛೆಟ್ರಿ ಹಾಗೂ ಉದಾಂತ ಸಿಂಗ್ ಅವರಿಂದ ಕೂಡಿದ ಬೆಂಗಳೂರಿನ ದಾಳಿ ವಿಭಾಗಕ್ಕೆ ತಕ್ಕುದಾದ ಹೋರಾಟ ನೀಡಬೇಕಾದ ಅನಿವಾರ್ಯತೆ ಟಾಟಾ ಪಡೆಯ ಮುಂದಿದೆ.
‘ಕಾರ್ಲಸ್ ಉತ್ತಮ ಕೋಚ್ ಎಂಬುದು ನನಗೆ ಚೆನ್ನಾಗಿ ಗೊತ್ತು. ಉತ್ತಮ ತಂಡವಾಗಿರುವ ಚೆನ್ನೈಯಿನ್  ವಿರುದ್ಧ ಅವಆರು ಉತ್ತಮವಾಗಿಯೇ ಆಡಿದ್ದಾರೆ. ಇಲ್ಲಿ ಗೆಲ್ಲುವುದು ನಮಗೆ ಸವಾಲಿನ ಸಂಗತಿ.ಆದರೆ ಜಯಕ್ಕಾಗಿ ಹೋರಾಟ ನಡೆಸಲಿದ್ದೇವೆ,‘ ಎಂದು ಸೇಸರ್ ಫೆರ್ನಾಂಡೋ ಅತ್ಯಂತ ಆತ್ಮವಿಶ್ವಾಸದಲ್ಲಿ ಹೇಳಿದ್ದಾರೆ.
ಕಳೆದ ಋತುವಿನಲ್ಲಿ ಬೆಂಗಳೂರು ತಂಡ ಮನೆಯಂಗಣದಲ್ಲಿ ಉತ್ತಮ ಪ್ರದರ್ಶನ ತೋರಿತ್ತು.ಆಡಿರುವ ಒಂಬತ್ತು ಪಂದ್ಯಗಳಲ್ಲಿ ಆರು ಪಂದ್ಯಗಳಲ್ಲಿ ಜಯ ಗಳಿಸಿದೆ. ಕಂಠೀರವ ಕ್ರೀಡಾಂಗಣದಲ್ಲಿ ಬೆಂಗಳೂರು ತಂಡವನ್ನು ಸೋಲಿಸಿರುವ ಎರಡು ತಂಡಗಳಲ್ಲಿ ಟಾಟಾ ಪಡೆ ಕೂಡ ಒಂದು. ಅಲ್ಲದೆ ಮನೆಯಿಂದ ಹೊರಗಡೆ ಆಡಿದ ಪಂದ್ಯಗಳಲ್ಲಿ ಜೆಮ್ಷೆಡ್ಪುರ ಐದು ಕ್ಲೀನ್ ಶೀಟ್‌ಗಳನ್ನು ಹೊಂದಿದೆ.
ಸ್ಟಾರ್ ಫಾರ್ವರ್ಡ್ ಆಟಗಾರ ಕಾಹಿಲ್ ‘ಭಾನುವಾರದ ಪಂದ್ಯಕ್ಕೆ ಲಭ್ಯ  ಇದ್ದಾರೆ, ಆದರೆ ಧನಚಂದ್ರ ಸಿಂಗ್ ಗಾಯದ ಕಾರಣ ಲಭ್ಯರಿಲ್ಲ.
‘ಟಿಮ್ ಅವರು ಉತ್ತಮ ಆಯ್ಕೆ. ಅವರು ನಮ್ಮ ತಂಡಕ್ಕೆ ಮುಖ್ಯವಾಗಿ ಅಗತ್ಯವಿದೆ. ಅವರೊಂದಿಗೆ ಭಾರತದ ಯುವ ಆಟಗಾರರು ತಂಡದ ಶಕ್ತಿ ಎನಿಸಿದ್ದಾರೆ,‘ ಫೆರ್ನಾಂಡೋ ಹೇಳಿದರು.

Related Articles