Friday, November 22, 2024

ಭಾರತದಲ್ಲಿ ನಡೆಯಲಿರುವ ವಿಶ್ವ ಬಾಕ್ಸಿಂಗ್‌ಗೆ ಹಲವು ರಾಷ್ಟ್ರಗಳಿಂದ ಬಹಿಷ್ಕಾರ !

ಹೊಸದಿಲ್ಲಿ:  ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ವಿಶ್ವ ಮಹಿಳಾ ಹಾಗೂ ಪುರುಷರ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಅನೇಕ ರಾಷ್ಟ್ರಗಳು ಬಹಿಷ್ಕಾರ ಹಾಕುವ ತೀರ್ಮಾನ ಕೈಗೊಂಡಿವೆ.  ಚೆಕ್‌ ಗಣರಾಜ್ಯ, ಕೆನಡಾ, ಸ್ವೀಡನ್‌ ಮತ್ತು ಇಂಗ್ಲೆಂಡ್‌ ರಾಷ್ಟ್ರಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿರುವುದು (Boycotting World Boxing Championship) ಕ್ರೀಡಾ ಜಗತ್ತಿನಲ್ಲಿ ಅಚ್ಚರಿಯನ್ನುಂಟು ಮಾಡಿದೆ.

ಉಕ್ರೇನ್‌ (Ukraine War) ಮೇಲೆ ಯುದ್ಧ ಸಾರಿರುವ ರಷ್ಯಾ ಮತ್ತು ಬೆಲಾರೂಸ್‌ (Russian Invasion of Ukraine) ರಾಷ್ಟ್ರಗಳು ಪಾಲ್ಗೊಳ್ಳುತ್ತಿರುವುದನ್ನು ವಿರೋಧಿಸಿ ಈ ರಾಷ್ಟ್ರಗಳು ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ(World Boxing Championship) ಪಾಲ್ಗೊಳ್ಳಲು ನಿರಾಕರಿಸಿವೆ. ಅಮೆರಿಕ ಮತ್ತು ಐರ್ಲೆಂಡ್‌ ಕೂಡ ಅಂತಾರಾಷ್ಟ್ರೀಯ ಬಾಕ್ಸಿಂಗ್‌ ಅಸೋಸಿಯೇಷನ್‌ನ ಈ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ಯೋಚಿಸಿವೆ ಎಂದೂ ವರದಿಯಾಗಿದೆ.

Boycotting World Boxing Championship which will be held in India

ಅಂತಾರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆಯ ಅಧ್ಯಕ್ಷರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಆತ್ಮೀಯರು. ಐಬಿಎ ಅಧ್ಯಕ್ಷ ಉಮರ್‌ ಕ್ರೆಮ್ಲೇವ್‌ ತನ್ನ ಹಣದ ಬಲದಿಂದ ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರುತ್ತಿದ್ದಾರೆ. ಪುಟಿನ್‌ ಜೊತೆಯಲ್ಲಿ ನೇರ ಸಂಬಂಧ ಹೊಂದಿರುವ ಅವರ ಮುಂದಾಳತ್ವದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದು ಸೂಕ್ತವಲ್ಲ. ಲಂಚ ನೀಡಿ ಇತರ ರಾಷ್ಟ್ರಗಳ ಮನವೊಲಿಸುವುದು ನ್ಯಾಯಯುತವಲ್ಲ.,” ಎಂದು ಕೆನಡಾ ಬಾಕ್ಸಿಂಗ್‌ ಸಂಸ್ಥೆಯ ಅಧ್ಯಕ್ಷ ರೆಯಾನ್‌ ಒʼಶೇ ಆರೋಪಿಸಿದ್ದಾರೆ.

ಉಕ್ರೇನ್‌ ವಿರುದ್ಧ ಯುದ್ಧ ಘೋಷಿಸಿದಾಗಿನಿಂದ ರಷ್ಯಾ ಹಾಗೂ ಯುದ್ಧಕ್ಕೆ ಬೆಂಬಲ ನೀಡಿದ ಬೆಲಾರೂಸ್‌ ಯಾವುದೇ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಈ ಹಿಂದೆಯೇ ಘೋಷಿಸಲಾಗಿತ್ತು. ಇದರ ಜೊತೆಯಲ್ಲಿ ಅಂತಾರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ಬಗ್ಗೆಯೂ ಕೆನಡಾ ಧ್ವನಿ ಎತ್ತಿದೆ.

ಇದನ್ನೂ ಓದಿ : ಫಿಟ್ನೆಸ್‌ಗಾಗಿ ಇಂಜೆಕ್ಷನ್ : ಟೀಂ ಇಂಡಿಯಾ ಆಟಗಾರರ ಬಗ್ಗೆ ಚೇತನ್ ಶರ್ಮಾ ಹೊಸ ಬಾಂಬ್

ರಷ್ಯಾವು ಉಕ್ರೇನಿನ ಮೇಲೆ ಯುದ್ಧ ಸಾರಿರುವುದು ಜಾಗತಿಕ ಮಟ್ಟದಲ್ಲಿ ಆತಂಕವನ್ನುಂಟುಮಾಡಿತ್ತು. ಜಗತ್ತಿನ ಶ್ರೇಷ್ಠ ಆಟಗಾರರು ಮತ್ತು ಕ್ರೀಡಾ ಸಂಸ್ಥೆಗಳು ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿವೆ. ಆದರೂ ಭಾರತ ನೆಲದಲ್ಲಿ ನಡೆಯಲಿರುವ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ರಷ್ಯಾ ಮತ್ತು ಬೆಲಾರೂಸ್‌ ರಾಷ್ಟ್ರಗಳಿಗೆ ಅವಕಾಶ ನೀಡಿರುವುದು ಅನೇಕ ರಾಷ್ಟ್ರಗಳು ಕ್ರೀಡಾಕೂಟಕ್ಕೆ ಬಹಿಷ್ಕಾರ ಹಾಕಲು ಮುಖ್ಯ ಕಾರಣವಾಗಿದೆ. ಮುಂದಿನ ತಿಂಗಳು ಭಾರತದಲ್ಲಿ ವಿಶ್ವ ಪುರುಷ ಹಾಗೂ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. ಒಲಿಂಪಿಕ್ಸ್‌ನಲ್ಲಿ ಬಾಕ್ಸಿಂಗ್‌ ಕ್ರೀಡೆ ಇರಬೇಕೋ ಬೇಡವೋ ಎನ್ನುವುದರ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಈ ನಡುವೆ ವಿಶ್ವ ಚಾಂಪಿಯನ್‌ಷಿಪ್‌ಗೆ ಪ್ರಮುಖ ರಾಷ್ಟ್ರಗಳು ಬಹಿಷ್ಕಾರ ಹಾಕುತ್ತಿರುವುದು ಈ ಕ್ರೀಡೆಯ ಭವಿಷ್ಯದ ಬಗ್ಗೆಯೂ ಆತಂಕ ಉಂಟಾಗುವಂತೆ ಮಾಡಿದೆ.

ಇದನ್ನೂ ಓದಿ : ಮಹಿಳಾ ಪ್ರೀಮಿಯರ್ ಲೀಗ್ : ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ RCB ಮೆಂಟರ್

Related Articles